spot_img
Wednesday, January 22, 2025
spot_img

ಇಡೀ ದೇಶದಾದ್ಯಂತ ನಮ್ಮ ಪರವಾದ ಒಲವಿದೆ : ಪಿಟಿಐ ಸಂದರ್ಶನದಲ್ಲಿ ಎಐಸಿಸಿ ಅಧ್ಯಕ್ಷ ಖರ್ಗೆ ಅಭಿಮತ

ಜನಪ್ರತಿನಿಧಿ (ನವದೆಹಲಿ) : ಕಾಂಗ್ರೆಸ್ ಹಾಗೂ INDIA ಮೈತ್ರಿಕೂಟದ ಕುರಿತಾಗಿ ಜನರ ಪ್ರತಿಕ್ರಿಯೆ ಗಮನಾರ್ಹವಾಗಿ ಬದಲಾಗಿದೆ ಹಾಗೂ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಬರದಂತೆ ತಡೆಯುವ ವಿಶ್ವಾಸವನ್ನು ವಿಪಕ್ಷಗಳ ಮೈತ್ರಿಕೂಟ ಹೊಂದಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಅಂತರಾಷ್ಟ್ರೀಯ ಸುದ್ದಿ ಸಂಸ್ಥೆ ಪಿಟಿಐ ನ ಸಂದರ್ಶನವೊಂದರಲ್ಲಿ ಮಾತನಾಡಿದ ಖರ್ಗೆ, ಸಮಾಜದಲ್ಲಿ ದ್ವೇಷ ಹಾಗೂ ವಿಭಜನೆಯನ್ನು ಹರಡುವ ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಿದ್ಧಾಂತದ ವಿರುದ್ಧ ಈಗ ಜನರು ಹೋರಾಡುತ್ತಿದ್ದಾರೆ. ನಮ್ಮ ಪಕ್ಷದ ನೇತೃತ್ವದ ಮೈತ್ರಿಕೂಟದ ಹೋರಾಟವನ್ನು ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ಉಳಿಸುವ ಹೋರಾಟ ಎಂದು ಜನರು ಭಾವಿಸಿದ್ದು, ಪಕ್ಷಕ್ಕೆ ಬೆಂಬಲ ನೀಡಿದ್ದಾರೆ ಎಂದರು.

ರಾಮಮಂದಿರ, ಹಿಂದೂ-ಮುಸ್ಲಿಂ ಹಾಗೂ ಭಾರತ-ಪಾಕಿಸ್ತಾನದ ಹೆಸರಿನಲ್ಲಿ ಬಿಜೆಪಿ ಪದೇ ಪದೇ ಜನರನ್ನು ಪ್ರಚೋದಿಸುತ್ತದೆ ಮತ್ತು “ಭಾವನಾತ್ಮಕವಾಗಿ ಲೂಟಿ” ಮಾಡುತ್ತಿದೆ ಎಂದು ಆರೋಪಿಸಿದ ಖರ್ಗೆ ಅವರು ಈಗ ಅವರ ನಿಜವಾದ ಬಣ್ಣವನ್ನು ಜನರು ಅರ್ಥಮಾಡಿಕೊಂಡಿದ್ದಾರೆ. ದೇಶಾದ್ಯಂತ ನಮ್ಮ ಪರವಾಗಿ ದೊಡ್ಡ ಒಲವಿದೆ ಎಂದು ಇಡೀ ದೇಶದಾದ್ಯಂತ ಪ್ರಯಾಣ ಬೆಳೆಸಿದ ನಂತರ ವಿಶ್ವಾಸ ನಮ್ಮಲ್ಲಿ ಮೂಡಿದೆ. ಕಾಂಗ್ರೆಸ್ ಪಕ್ಷ ಮತ್ತು ಮೈತ್ರಿ ಪಕ್ಷಗಳು ಈ ಬಾರಿ ಹೆಚ್ಚು ಕ್ಷೇತ್ರಗಳನ್ನು ಪಡೆಯುತ್ತಾರೆ. ಬಿಜೆಪಿ ಅಧಿಕಾರಕ್ಕೆ ಬರಲು ಬೇಕಾದ ಕ್ಷೇತ್ರಗಳನ್ನು ಪಡೆಯದಂತೆ ತಡೆಯಲು ಸಾಧ್ಯವಾಗುತ್ತದೆ. ಬಿಜೆಪಿ ಸರ್ಕಾರ ರಚಿಸಲು ಸಾಧ್ಯವಾಗುವುದಿಲ್ಲ ಎಂದು ಭಾವಿಸುವುದಾಗಿ ತಿಳಿಸಿದರು.

“ಸಾರ್ವಜನಿಕರೇ ನಮಗಾಗಿ ಹೋರಾಡುತ್ತಿದ್ದಾರೆ. ಅದು ನಮಗಾಗಿ ಮಾತ್ರ ಅಲ್ಲ. ಜನರು ನಾವು ಅನುಸರಿಸುವ ಸಿದ್ಧಾಂತವನ್ನು ಬೆಂಬಲಿಸುತ್ತಿದ್ದಾರೆ ಮತ್ತು ನಮಗಾಗಿ ಹೋರಾಡುತ್ತಿದ್ದಾರೆ, ಬಿಜೆಪಿ ಸಂಖ್ಯೆ ಕುಸಿಯಲಿದ್ದು, ನಾವು ಮುಂದುವರಿಯುತ್ತೇವೆ ಎಂಬುದು ಸ್ಪಷ್ಟವಾಗಿದೆ ಎಂದು ಖರ್ಗೆ ಹೇಳಿದರು. .

ಜನರ ಪ್ರತಿಕ್ರಿಯೆ ಹಾಗೂ ಅವರು ಹೇಗೆ ಬೆಂಬಲಿಸಲು ಪ್ರಾರಂಭಿಸಿದ್ದಾರೆ ಮತ್ತು ಅವರ ಸಿದ್ಧಾಂತಕ್ಕಾಗಿ ಹೋರಾಡುತ್ತಿದ್ದಾರೆ ಎಂಬುದು ನನಗೆ ಅಂತಹ ಆತ್ಮವಿಶ್ವಾಸವನ್ನು ನೀಡುತ್ತದೆ ಎಂದು ಹೇಳಿದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!