Saturday, October 12, 2024

ಗರಿ ಬಿಚ್ಚಿ ಕುಣಿಯುತ್ತಿರುವ ವಿಧಾನಪರಿಷತ್ ಚುನಾವಣೆ

ವಿಧಾನಸಭೆ ಚುನಾವಣೆ ಮುಗಿಯಿತು ಎನ್ನುವಾಗಲೇ ಲೇೂಕಸಭಾ ಚುನಾವಣೆ ಬಂದೆ ಬಿಟ್ಟಿತು. ಅಂತು ಇಂತು ರಾಜ್ಯದ ಎಲ್ಲಾ ಕ್ಷೇತ್ರಗಳ ಲೇೂಕಸಮರ ಮುಗಿಯಿತು ಎನ್ನುವಾಗಲೆ ವಿಧಾನಪರಿಷತ್ ಚುನಾವಣೆ ಬಂದೆ ಬಿಟ್ಟಿತು.

ಈ ಬಾರಿ ವಿಧಾನಪರಿಷತ್ ಚುನಾವಣೆ ತುಂಬಾ ಸಪ್ಪೆಯಾಗಬಹುದು ಅಂದುಕೊಂಡಿದೆ. ಆದರೆ ಈ ಎರಡು  ಚುನಾವಣೆಗಳನ್ನು ಮೀರಿಸುವಷ್ಟು ರಾಜಕೀಯ ಸಂಚಲನ ಮೂಡಿಸುವಷ್ಟು ಕುತೂಹಲಕಾರಿ ವಾತಾವರಣ ಸೃಷ್ಟಿಸಿಯೇ ಬಿಟ್ಟಿದೆ. ನೈರುತ್ಯ ಪದವಿಧರರ ಮತ್ತು ಶಿಕ್ಷಕರ ಕ್ಷೇತ್ರಗಳ ಚುನಾವಣೆ.

ಈ ಹಿಂದೆ ವಿಧಾನಪರಿಷತ್ ಚುನಾವಣೆ ನಡೆದದ್ದೇ ಗೊತ್ತಾಗುತ್ತಿರಲಿಲ್ಲ. ಅಷ್ಟರ ಮಟ್ಟಿಗೆ ರಾಜಕೀಯ ಗೌಪ್ಯತೆ  ಕಾಪಾಡಿಗೊಂಡು ಬರುತ್ತಿತ್ತು. ಆದರೆ ಈ ಬಾರಿ ಎಲ್ಲಾ ರಾಜಕೀಯ ಪಕ್ಷಗಳನ್ನು ಬದಿಗೆ ಸರಿಸಿ ಸ್ವತಃ ಪದವಿಧರರು ಮತ್ತು ಶಿಕ್ಷಕರು ತಾವಾಗಿಯೇ ತಮ್ಮ ಅಭ್ಯರ್ಥಿಗಳ ಆರ್ಹತೆ ಯೇೂಗ್ಯತೆಗಳನ್ನು ಅಳೆದು ಮತ ಹಾಕಲು ಮುಂದಾಗಿ ನಿಂತಿರುವುದಂತು ಸತ್ಯ. ನಿಜಕ್ಕೂ ಹೇಳಬೇಕೆಂದರೆ ವಿಧಾನಪರಿಷತ್ ಚುನಾವಣೆಗಳು ನಡೆಯ ಬೇಕಾದದ್ದು ಹೀಗೆನೆ ?

ವಿಧಾನಪರಿಷತ್ ಅಂದರೆ ಅದೊಂದು ಹಿರಿಯರ ಸದನ ಚಿಂತಕರ ಚಾವಡಿ. ಪಕ್ಷ ರಾಜಕೀಯ ಮೀರಿ ಚುನಾವಣೆ ನಡೆಯ ಬೇಕಾದ ಸದನವದು. ಹಾಗಾಗಿಯೇ ಚುನಾವಣಾ ಬ್ಯಾಲೆಟ್ ಪೇಪರ್ ನಲ್ಲಿ ಅಭ್ಯರ್ಥಿಗಳ ಭಾವ ಚಿತ್ರ ಹೆಸರು ಬಿಟ್ಟರೆ ಪಕ್ಷಗಳ ಹೆಸರಾಗಲಿ ಚಿಹ್ನೆಗಳಾಗಲಿ ಇರುವುದೇ ಇಲ್ಲ. ಅಂದರೆ ಅಷ್ಟರ ಮಟ್ಟಿಗೆ ಪಕ್ಷ ರಾಜಕೀಯದಿಂದ ದೂರವಿರಬೇಕೆನ್ನುವುದು ಇದರ ಒಳಾರ್ಥ.

ಈ ಬಾರಿ ನೈರುತ್ಯ ಪದವಿಧರರ ಮತ್ತು ಶಿಕ್ಷಕರ ಕ್ಷೇತ್ರವಂತೂ  ಪಕ್ಷ ರಾಜಕೀಯ ಮೀರಿ ನಡೆಯುವುದಂತು ಸತ್ಯ. ಅದು ಬಿಜೆಪಿ ಇರಬಹುದು ಕಾಂಗ್ರೆಸ್ ಇರಬಹುದು. ಈ ಎರಡು ಪಕ್ಷಗಳ ಹಿರಿಯ ನಾಯಕರುಗಳೇ ಪಕ್ಷ ಮೀರಿ ತಮ್ಮ ಸ್ವಂತ ಸಾಮರ್ಥ್ಯದಿಂದ ಗೆದ್ದು ಬಂದು ತಮ್ಮ ಪಕ್ಷ ನಿಷ್ಠೆಯನ್ನು ಪ್ರಕಟಿಸುತ್ತೇವೆ ಎನ್ನುವ ವಾಗ್ದಾನದೊಂದಿಗೆ ಚುನಾವಣಾ ಕಣಕ್ಕೆ ದುಮುಕಿಯೇ ಬಿಟ್ಟಿದ್ದಾರೆ. ಇದನ್ನು ಬಂಡಾಯ ಅಭ್ಯರ್ಥಿ; ಪಕ್ಷ ವಿರೇೂಧಿ ಚಟುವಟಿಕೆ ಎನ್ನುವ ಹಾಗಿಲ್ಲ. ಯಾಕೆಂದರೆ ಇಲ್ಲಿ ಪಕ್ಷದ ಯಾವುದೆ ಚಿಹ್ನೆಯಾಗಲಿ ಹೆಸರಾಗಲಿ ಇಲ್ಲ. ಎಲ್ಲರೂ ಕೂಡಾ ತಮ್ಮ ತಮ್ಮ ಯೇೂಗ್ಯತೆಯನ್ನು  ಪ್ರಬುದ್ಧ ಶಿಕ್ಷಿತ ಪದವಿಧರ ಮತದಾರರ ಎದುರು ಸಾಬೀತು ಪಡಿಸ ಬೇಕು.ಇಲ್ಲಿ ಪಕ್ಷ ಸಿದ್ಧಾಂತವಾಗಲಿ ನಾಯಕರುಗಳ ಮೇರು ಪ್ರತಿಭೆಗಳಾಗಲಿ ಮುಖ್ಯವಾಹಿನಿ ಬರುವುದೇ ಇಲ್ಲ. ಬರಬಾರದು ಕೂಡ.

ಪ್ರತಿಯೋಬ್ ಮತದಾರರ ಕೇಳುವುದು ಇಷ್ಟೇ ಗೆದ್ದು ಬಂದು  ತಮ್ಮ ಕ್ಷೇತ್ರಕ್ಕೇನು ಮಾಡುತ್ತೀರಿ.? ಹಾಗಾಗಿ ನನ್ನ ದೃಷ್ಟಿಯಲ್ಲಿ ಈ ಎಲ್ಲಾ  ರಾಜಕೀಯ ಪಕ್ಷಗಳು  ಪಕ್ಷ ಮೀರಿ ಪ್ರತಿಯೊಬ್ಬರಿಗೂ ಸ್ಪರ್ಧಿಸಲು ಮುಕ್ತ ಅವಕಾಶ ನೀಡಿ ಗೆದ್ದು ಬನ್ನಿ. ಅನಂತರೇ ನಿಮಗೆ ನಮ್ಮ ಪಕ್ಷದಲ್ಲಿ ಸ್ಥಾನಮಾನ ಎನ್ನುವ ಸ್ವಷ್ಟ ಸಂದೇಶವನ್ನುನೀಡಬೇಕಿತ್ತು.

ಈ ಬಾರಿ ಬಹು ಚಚೆ೯ಗೆ ಬಂದಿರುವುದು ನೈರುತ್ಯ ಕ್ಷೇತ್ರ. ಅತೀ ಹೆಚ್ಚಿನ ಶಿಕ್ಷಣ ಸಂಸ್ಥೆಗಳನ್ನು ಶಿಕ್ಷಕರನ್ನು ಪದವೀಧರನ್ನು ಹೊಂದಿರುವ ಕರಾವಳಿ ಜಿಲ್ಲೆಗಳಾದ  ಉಡುಪಿ  ದಕ್ಷಿಣ ಕನ್ನಡ ಜಿಲ್ಲೆಗೆ ಯಾವುದೇ ಪ್ರಾತಿನಿಧ್ಯವನ್ನು ಬಿಜೆಪಿ ಮತ್ತು ಕಾಂಗ್ರೆಸ್  ಪಕ್ಷಗಳಿಂದ ಸಿಗಲಿಲ್ಲ. ಹಾಗಾಗಿಯೇ ಆಯಾಯ ರಾಜಕೀಯ ಪಕ್ಷಗಳೊಳಗಿನ ಧುರೀಣರು ನಾವುಗಳೆ ಸ್ಪಧೆ೯ಮಾಡಿ ಈ ಎರಡು ಜಿಲ್ಲೆಗಳ ತಾಕತ್ತು ತೇೂರಿಸುತ್ತೇವೆ ಎನ್ನುವ ರೀತಿಯಲ್ಲಿ ಪಣತೊಟ್ಟು ನಿಂತಿದ್ದಾರೆ. ಈ ಬಾರಿ ಪದವಿಧರ ಮತ್ತು ಶಿಕ್ಷಕ ಮತದಾರರು ಕೂಡಾ ಇದೇ ರೀತಿಯಲ್ಲಿ ದೃಢ ಸಂಕಲ್ಪ ತೊಟ್ಟ ಹಾಗೆ ಕಾಣುತ್ತಿದೆ.

ಇದು ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಪ್ರತಿಯೊಂದು ರಾಜಕೀಯ ಪಕ್ಷಗಳು  ಕೆಲವೊಂದು ಮಾನದಂಡವನ್ನುಅನುಸರಿಸಬೇಕಾದ ಅನಿವಾರ್ಯತೆ ಖಂಡಿತವಾಗಿಯೂ ಬಂದೇ ಬರುತ್ತದೆ. ಎಲ್ಲೊ ಕೂತು ಯಾವುದೊ ಒಬ್ಬ ಗುರುತು ಪರಿಚಯವಿಲ್ಲದ ಅಭ್ಯರ್ಥಿಯನ್ನು ಡಂಪ್ ಮಾಡುವ ಪರಿಪಾಠ ನಿಂತು ಹೋಗುತ್ತದೆ. ಇದು ಈ ಬಾರಿಯ ವಿಧಾನಪರಿಷತ್ ಚುನಾವಣೆ ರಾಷ್ಟ್ರೀಯ ರಾಜಕೀಯ ಪಕ್ಷಗಳಿಗೆ ನೀಡುವ ಖಡಕ್ ಸಂದೇಶವಾಗುವ ಫಲಿತಾಂಶ ಬಂದರೂ ಆಶ್ಚರ್ಯ ಪಡಬೇಕಾಗಿಲ್ಲ.

ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!