spot_img
Saturday, December 7, 2024
spot_img

ಪದವಿಧರರು ಪ್ರಧಾನಿಸುವ ಶಾಸಕರ ಪಟ್ಟ ಯಾರ ಪಾಲಿಗೆ !?

ವಿಧಾನಪರಿಷತ್ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಕರಾವಳಿ ಅಭ್ಯರ್ಥಿಗಳಿಗೆ ಸ್ಪಧಿ೯ಸಲು ಅವಕಾಶ ನೀಡದಿರಲು ಕಾರಣಗಳೇನು? ಈ ಬಾರಿಯ ವಿಧಾನಪರಿಷತ್ ಚುನಾವಣೆಯಲ್ಲಿ ಪದವಿಧರರ ಮತ್ತು ಶಿಕ್ಷಕರ ಕ್ಷೇತ್ರಗಳಲ್ಲಿ  ಎರಡು ಪ್ರಮುಖ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ನೈರುತ್ಯ ವಲಯದ ಎರಡು ಪ್ರಮುಖ ಜಿಲ್ಲೆಗಳಾದ ಉಡುಪಿ ಮತ್ತು  ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಸ್ಪಧಿ೯ಸಲುಯಾವುದೇ ಅವಕಾಶವನ್ನು ನೀಡದೆ  ಇರುವುದರಿಂದ ಈ ಎರಡು  ಪಕ್ಷಗಳ ಕಾರ್ಯಕತ೯ರ ಮತ್ತು ಎರಡು   ಜಿಲ್ಲೆಗಳ ಪದವಿಧರ ಹಾಗೂ  ಶಿಕ್ಷಕ ಮತದಾರರನ್ನು ಬೇಸರಗೊಳಿಸಿರುವುದಂತೂ ಸತ್ಯ.

ಬಹು ಹಿಂದಿನಿಂದಲೂ ಒಂದು ಸಂಪ್ರದಾಯ ಬೆಳೆದು ಬಂದಿರುವುದನ್ನು ನಾವು ಗಮನಿಸಬಹುದು ಅದು ಸೇೂಲಲಿ ಗೆಲ್ಲಲಿ ಯಾವುದಾದರೂ ಒಂದು ಕ್ಷೇತ್ರದಲ್ಲಿ ಕರಾವಳಿಯ ಪ್ರದೇಶಕ್ಕೆ ಒಂದು ಪ್ರಾತಿನಿಧ್ಯ ಸಿಗುತ್ತಿತ್ತು. ಹೆಚ್ಚಾಗಿ ಶಿಕ್ಷಕರ ಕ್ಷೇತ್ರವೇ ಕರಾವಳಿಯ ತೆಕ್ಕೆಗೆ ಬರುತ್ತಿತ್ತು ಅದೇ ರೀತಿಯಲ್ಲಿ ಪದವಿಧರರ ಕ್ಷೇತ್ರ ಶಿವಮೊಗ್ಗದ ಪಾಲಾಗುತ್ತಿತ್ತು. ಈ ಎರಡು ಕ್ಷೇತ್ರಗಳನ್ನು ಸುಲಭವಾಗಿ ತನ್ನ ತೆಕ್ಕೆಗೆ ಹಾಕಿಕೊಳ್ಳುತ್ತಿದ್ದ ಪಕ್ಷವೆಂದರೆ ಅದು ಬಿಜೆಪಿ. ಆದರೆ ಕಳೆದ ಬಾರಿ ಶಿಕ್ಷಕರ ಚುನಾವಣೆಯಲ್ಲಿ ಬಿಜೆಪಿ ತನ್ನ ನಿರಾಸಕ್ತಿಯ ಕಾರ್ಯ ಶೈಲಿಯಿಂದಾಗಿ ಜೆಡಿಎಸ್ ಅಭ್ಯರ್ಥಿ ಚಿಕ್ಕಮಗಳೂರು ವ್ಯಾಪ್ತಿಯ ಬೇೂಜೆಗೌಡರ ವಶವಾಯಿತು.

ಈ ಬಾರಿ ಬದಲಾದ ರಾಜಕೀಯ ಸನ್ನಿವೇಶದಿಂದಾಗಿ ಒಂದಿಷ್ಟು ಹೊಸ ಹೊಸ ನಿರ್ಣಯಗಳನ್ನು ಸೇೂಲು ಗೆಲುವು  ಲೆಕ್ಕಾಚಾರದಲ್ಲಿ ಎರಡೂ ಪಕ್ಷಗಳು ತೆಗೆದುಕೊಂಡ ನಿಧಾ೯ರಗಳು ಕರಾವಳಿ ಜಿಲ್ಲೆಯ ಮತದಾರರಿಗೂ ಪಕ್ಷಗಳ ಕಾರ್ಯಕತ೯ರಿಗು ನೇೂವು ತರಿಸುವಂತೆ ಮಾಡಿದೆ ಅನ್ನುವುದು ಎರಡು ಪಕ್ಷಗಳ ಕಾರ್ಯಕತ೯ರ ಮುಖದಲ್ಲಿಯೂ ಗೇೂಚರವಾಗುತ್ತಿದೆ ಹಾಗೇನೆ ಮತದಾರರಮಾತಿನಲ್ಲೂ ವ್ಯಕ್ತ ವಾಗುತ್ತಿದೆ.

ಬಿಜೆಪಿ ಯಾಕೆ ಹಳೆ ಸಂಪ್ರದಾಯವನ್ನು ಮುರಿದು ಹೊಸ ಪ್ರಯೇೂಗಕ್ಕೆ ಮುಂದಾಯಿತು ಅನ್ನುವುದನ್ನುನೇೂಡುವಾಗ ಬಹು ಮುಖ್ಯವಾಗಿ ಎರಡು ಅಂಶಗಳು ಎದ್ದು ಕಾಣುತ್ತದೆ. ಹಿಂದಿನ ಚುನಾವಣೆಗಳಲ್ಲಿ ಪದವಿಧರರ ಭದ್ರ ಕೇೂಟೆ ಅನ್ನಿಸಿಕೊಂಡ ಶಿವಮೊಗ್ಗದಿಂದಲೇ ಶಂಕರ ಮೂತಿ೯  ಮತ್ತು ಆಯನೂರು ಮಂಜುನಾಥ್ ನಿರಂತರವಾಗಿ ಗೆದ್ದು ಬಂದಿದ್ದರು. ಆದರೆ ಈ ಬಾರಿ ಆಯುನೂರು ಮಂಜುನಾಥ್ ರು ಕಾಂಗ್ರೆಸ್ ಪಕ್ಷದ ವತಿಯಿಂದ ಸ್ಪಧೆ೯ಗಳಿದ ಕಾರಣ ಇನ್ನೊಬ್ಬ ಲಿಂಗಾಯತ ಅಭ್ಯರ್ಥಿಯನ್ನು ಮಂಜುನಾಥ್ ರಿಗೆ ಎದುರಾಗಿ ನಿಲ್ಲಿಸಿದರೆ ಶಿವಮೊಗ್ಗದಲ್ಲಿ ಅರ್ಧಾಂಶ ಮತಗಳಿಸಿಕೊಂಡರೆ ಬಾಕಿ ಉಳಿದ “ಟೇಕ್ ಫಾರ್ ಗ್ರಾಂಟೆಡ್” ಬಿಜೆಪಿ  ಮತಗಳು ಕರಾವಳಿಯ ಜಿಲ್ಲೆಯಲ್ಲಿ ಮಲಗಿರುತ್ತವೆ ಅವುಗಳೆಲ್ಲವೂ ಸುಲಭವಾಗಿ ಬುಟ್ಟಿಗೆ ಬಿದ್ದೇ ಬೀಳುತ್ತದೆ ಅನ್ನುವುದು ದೃಢ ಲೆಕ್ಕಾಚಾರದಲ್ಲಿ ಬಿಜೆಪಿ ನಾಯಕರು  ತಮಗೆ  ಎಲ್ಲಾ ದೃಷ್ಟಿಯಿಂದ ಹಿತವೆನ್ನಿಸಿದ ಅಭ್ಯರ್ಥಿ ಧನಂಜಯ ಸೂಜಿ೯ಯವರನ್ನು ಪಕ್ಷದ ಕಾರ್ಯಕತ೯ರ ವಿರೇೂಧ ಧ್ವನಿಯನ್ನು ಬದಿಗಿಟ್ಟು ಅಭ್ಯರ್ಥಿ ಆಯ್ಕೆ ಮಾಡುವುದರಲ್ಲಿ ರಾಜ್ಯದ ನಾಯಕರು ದೆಹಲಿಯ ವರಿಷ್ಠರನ್ನು ಮನ ಒಲಿಸಲು ಯಶಸ್ವಿಯಾಗಿದ್ದಾರೆ ಅನ್ನುವುದು ಅಷ್ಟೇ ಸತ್ಯ.ಇನ್ನು ಶಿಕ್ಷಕರ ಕ್ಷೇತ್ರದಲ್ಲಿಯೂ ಅಷ್ಟೇ ಬಿಜೆಪಿ ಜೆಡಿಎಸ್ ಮೈತ್ರಿಯ ಕೂಸಾಗಿ ಹಿಂದೆ ಗೆದ್ದ ಫಲ ಶ್ರುತಿಯಾಗಿ ಬೇೂಜೆ ಗೌಡರ ಅಭ್ಯರ್ಥಿತನವನ್ನು ಒಪ್ಪಿಕೊಳ್ಳಲೇ ಬೇಕಾದ ಅನಿವಾರ್ಯತೆ ಬಿಜೆಪಿ ಪಾಲಿಗೆ ಬಂದಿದೆ.ಎಲ್ಲವೂ ಡಿಲ್ಲಿ ಹೈಕಮಾಂಡಿನ ನಿಣ೯ಯ ಹಾಗಾಗಿ ಸ್ಥಳೀಯ ನಾಯಕರು ಕಾರ್ಯಕತ೯ರು ಮನಸ್ಸಿಲ್ಲದ ಮನಸ್ಸಿನಲ್ಲಿ ಹೆಜ್ಜೆ ಇಡ ಬೇಕಾದ ಅನಿವಾರ್ಯತೆ ಬಿಜೆಪಿ ಬಂದಿರುವುದಂತು ನಿಜ.

ಈ ಎರಡು ಪಕ್ಷಗಳ ಅಸಹಾಯಕತೆ ಮತ್ತುಸಂದಿಗ್ಧ ಮನಸ್ಸಿನ ಹೇೂರಾಟ ಮಾಡಬೇಕಾದ ಪರಿಸ್ಥಿತಿಯ ನಡುವೆ ಬಿಜೆಪಿಗೆ ನುಂಗಲಾರದ ಪರಿಸ್ಥಿತಿ ಬಂದಿರುವುದು ಬಿಜೆಪಿಯ ಪಯಾ೯ಯ ಅಭ್ಯರ್ಥಿಯಾಗಿ ಮುಾಡಿ ಬಂದಿರುವ ರಘಪತಿ ಭಟ್ಟರು. ಬಿಜೆಪಿ ನಾಯಕರಿಗೆ ತನ್ನ ಮೂಲ ಸಿದ್ಧಾಂತ ಪಾಠ ಕಲಿಸಲು ಮುಂದಾಗಿರುವ ಸೇೂಲರಿಯದ ದಣಿಯುವರಿಯದ ಕರಾವಳಿ ಜಿಲ್ಲೆಯ ಪ್ರಬಲ ಬಿಜೆಪಿ ನಾಯಕರೆನ್ನಿಸಿಕೊಂಡ ಮಾಜಿ ಶಾಸಕರು ಪದವಿಧರರ ಕ್ಷೇತ್ರದಲ್ಲಿ  ಬಿಜೆಪಿ ಕಾರ್ಯಕತ೯ರ ಪಾಲಿಗೆ ಪರ್ಯಾಯ ಬಿಜೆಪಿ  ಪ್ರತಿನಿಧಿಯಾಗಿ ರಘಪತಿ ಭಟ್ಟರು ಚುನಾವಣಾ ಕಣಕ್ಕೆ ಇಳಿದಿರುವುದು ಎರಡು ಪಕ್ಷಗಳಿಗೂ ತಮ್ಮ ತಮ್ಮ ಮತ ಬ್ಯಾಂಕಿನ ಲೆಕ್ಕಾಚಾರವನ್ನು ದಿನ ನಿತ್ಯವೂ ಎಣಿಸುವ ಪರಿಸ್ಥಿತಿಗೆ ತಂದು ನಿಲ್ಲಿಸಿದಂತೂ ನೂರಕ್ಕೆ ನೂರು ಸತ್ಯ.

ಈಗ ಸೇೂಲು ಗೆಲುವಿನ ಲೆಕ್ಕಾಚಾರದ ಸಮೀಕ್ಷೆಗಳು ಪಕ್ಷಗಳ ಗೇೂಡೆಯಿಂದ ಹೊರಗೆ ಬಂದು ಬೌಗೋಳಿಕತೆಯ ಪ್ರಾತಿನಿಧ್ಯದ ನ್ಯಾಯ, ಅಭ್ಯರ್ಥಿಗಳ ಸಾಮರ್ಥ್ಯದ ಪ್ರಶ್ನೆ ಅಭ್ಯರ್ಥಿಗಳ ಸಾಧನೆಯ ಹಿನ್ನೇೂಟ ಮುಂತಾದ ಹೊಸ ಹೊಸ ವಿಚಾರಗಳು ಪ್ರಬುದ್ಧ ಪದವೀಧರ ತಲೆಯಲ್ಲಿ ಸುತ್ತಲೂ ಶುರುವಾಗಿರುವುದಂತೂ ಸತ್ಯ. ಪದವಿಧರರು ಪ್ರದಾನಿಸುವ ಶಾಸಕರ ಪಟ್ಟ ಯಾರ ಪಾಲಿಗೆ ಒಲಿಯಬಹುದು ಕಾದು ನೇೂಡೇೂಣ.

-ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಉಡುಪಿ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!