Friday, June 14, 2024

ಮೇ 19ರಂದು ಶಿರೂರು ಮೂರುಕೈಯಲ್ಲಿ ‘ಶತಸಾರ್ಥಕ್ಯ’

ಮಂದಾರ್ತಿ: ಮಂದಾರ್ತಿ ಸೇವಾ ಸಹಕಾರಿ ಸಂಘ ನಿ., ಮಂದಾರ್ತಿ ಇದರ ಶತಸಾರ್ಥಕ್ಯ-ಶಿರೂರು ಗ್ರಾಮದ ಸದಸ್ಯರ ಸಮಾವೇಶ ಮೇ 19 ಆದಿತ್ಯವಾರ ಬೆಳಿಗ್ಗೆ 10 ಗಂಟೆಗೆ ಶಿರೂರು ಮೂರುಕೈ ಶಾಲಾ ವಠಾರದಲ್ಲಿ ನಡೆಯಲಿದೆ.

ಮಂದಾರ್ತಿ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಎಚ್.ಗಂಗಾಧರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಅರುಣ್ ಕುಮಾರ್ , ನಿವೃತ್ತ ಮುಖ್ಯೋಪಾಧ್ಯಾಯರು, ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷರಾದ ರಾಮಣ್ಣ ಶೆಟ್ಟಿ ಜಂಬೆಟ್ಟು, ಎಂ.ಐ.ಟಿ ಮಣಿಪಾಲದ ಪ್ರೊಫೆಸರ್ ಎಸ್.ವಿ ಉದಯಕುಮಾರ್ ಶೆಟ್ಟಿ, ಉದ್ಯಮಿ ಸಂಪತ್ ಕುಮಾರ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಹೆಗ್ಗುಂಜೆ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಅನಿಲ್ ಕುಮಾರ್ ಶೆಟ್ಟಿ, ನಾಟಿ ವೈದ್ಯೆ ಸುಶೀಲ ಶೆಟ್ಟಿ ಶಿರೂರು ಜಂಬೆಟ್ಟು, ಸಮಾಜ ಸೇವಕಿ ಪದ್ದು ಮರಕಾಲ್ತಿ (ದೋಣಿ ಪದ್ದಕ್ಕ), ನಾಟಿ ವೈದ್ಯೆ ಬೆಳ್ಳಿ ಬಾಯಿ, ನಿವೃತ್ತ ಪಶುವೈದ್ಯ ಪರೀಕ್ಷಕ ಬಾಲಕೃಷ್ಣ ಶೆಟ್ಟಿ, ಹೈನುಗಾರರಾದ ಬಾಲಕೃಷ್ಣ ನಾಯ್ಕ, ಯುವಕೃಷಿಕ ನಿತಿನ್ ಪೂಜಾರಿ ಅವರನ್ನು ಗೌರವಿಸಲಾಗುವುದು ಎಂದು ಸಂಘದ ಪ್ರಕಟಣೆ ತಿಳಿಸಿದೆ.

Related Articles

Stay Connected

21,961FansLike
3,912FollowersFollow
21,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!