spot_img
Thursday, December 5, 2024
spot_img

ಫುಡ್ ಸೇಪ್ಟಿ: ಯುದ್ಧಕಾಲೇ ಶಸ್ತ್ರಭ್ಯಾಸ

ಆಹಾರ ಕಲಬೆರಕೆ, ಗುಣಮಟ್ಟದ ಬಗ್ಗೆ ನಿರಂತರವಾಗಿ ಚರ್ಚೆ ಆಗುತ್ತಲೇ ಇರುತ್ತದೆ. ಅಲ್ಲಲ್ಲಿ ಆಹಾರದ ಕಲಬೆರಕೆಯಿಂದ ಅವಘಡಗಳು ಸಂಭವಿಸುವುದನ್ನು ಕಾಣುತ್ತಲೇ ಇದ್ದೇವೆ. ಗಾಳಿ ಮತ್ತು ನೀರಿನ ನಂತರ ಆಹಾರವು ಮೂರನೇ ಮೂಲಭೂತ ಮಾನವ ಅಗತ್ಯವೆನ್ನುವುದು ಸರ್ವವೇದ್ಯ. ಆಹಾರವು ಸುರಕ್ಷಿತವಾದಾಗ ಮಾತ್ರ ಅದು ನಮ್ಮ ಆಹಾರ ಭದ್ರತೆ ಮತ್ತು ಆರೋಗ್ಯಕ್ಕೆ ಕೊಡುಗೆ ನೀಡುತ್ತದೆ. ಆಹಾರವು ಸುರಕ್ಷಿತವಾಗಿಲ್ಲದಿದ್ದಾಗ ಆರೋಗ್ಯಕರ ಜೀವನವು ಸಾಧ್ಯವಿಲ್ಲ. ಅದು ಸುರಕ್ಷಿತವಾಗಿಲ್ಲದಿದ್ದರೆ, ಅದು ಆಹಾರವಲ್ಲ ಇದು ಎಲ್ಲರಿಗೂ ತಿಳಿದ ವಿಚಾರ ಆದರೂ ಕೂಡಾ ನಾವು ಸೇವಿಸುವ ಆಹಾರ ಎಷ್ಟರ ಮಟ್ಟಿಗೆ ಸುರಕ್ಷಿತ ಎಂದು ಚಿಂತನೆ ಮಾಡಿಕೊಳ್ಳುವ ಕಾಲಘಟ್ಟದಲ್ಲಿದ್ದೇವೆ. ಏಕೆಂದರೆ ಸಾರ್ವಜನಿಕವಾಗಿ ಈ ಸಿಗುವ ಆಹಾರ ಪದಾರ್ಥಗಳು ಎಲ್ಲವೂ ಸುರಕ್ಷಿತವಲ್ಲ, ಶುದ್ಧವಲ್ಲ. ಆಹಾರವನ್ನು ಉತ್ಪಾದಿಸುವ, ಸಂಸ್ಕರಿಸುವ, ಸಾಗಿಸುವ, ಸಂಗ್ರಹಿಸುವ, ತಯಾರಿಸುವ, ಬಡಿಸುವ ಮತ್ತು ಸೇವಿಸುವ ಪ್ರತಿಯೊಬ್ಬರೂ ಆಹಾರವನ್ನು ಸುರಕ್ಷಿತವಾಗಿಡುವ ಅಭ್ಯಾಸಗಳನ್ನು ಬಳಸಬೇಕಾಗುತ್ತದೆ. ಆ ಬಗ್ಗೆ ಬಲಿಷ್ಠ ಕಾನೂನುಗಳು ಇವೆ. ಸಂಬಂಧಪಟ್ಟ ಇಲಾಖೆಗಳಿವೆ. ತಪಾಸಣೆ ನಡೆಸುವುದು, ನಿಯಮಾವಳಿಗಳನ್ನು ಜಾರಿಗೊಳಿಸುವುದು, ಶಿಕ್ಷಣ ಮತ್ತು ಸಾರ್ವಜನಿಕರೊಂದಿಗೆ ಸಂವಹನ ನಡೆಸುವುದು ಹೀಗೆ ಎಲ್ಲವೂ ಇದೆ. ಆದರೆ ಪರಿಣಾಮಕಾರಿಯಾಗಿ ಅನುಷ್ಠಾನವಾಗುವುದು ಮಾತ್ರ ಕಷ್ಟಸಾಧ್ಯ. ಇವತ್ತು ಪ್ರತಿಹಳ್ಳಿಗಳಲ್ಲಿಯೂ ಕೂಡಾ ಆಹಾರ ತಯಾರಿಕಾ ಘಟಕಗಳು, ತಂಪು ಪಾನೀಯ ತಯಾರಿಸುವ ಘಟಕಗಳು, ಶುದ್ಧೀಕರಿಸಿದ ನೀರಿನ ಬಾಟೆಲ್ ಸಿದ್ಧಪಡಿಸುವ ಘಟಕಗಳು ಇವೆ. ಶೇ.೬೦ಕ್ಕೂ ಹೆಚ್ಚು ಅನಧಿಕೃತವಾಗಿಯೇ ನಡೆಯುತ್ತವೆ. ಅವುಗಳಿಗೆ ಯಾವುದೇ ಪರವಾನಿಗೆ ಇರುವುದಿಲ್ಲ. ಅವುಗಳ ಗುಣಮಟ್ಟವನ್ನು ಅಹಾರ ಸುರಕ್ಷತಾ ಇಲಾಖೆಗಳು ಗಮನ ಹರಿಸುವುದಿಲ್ಲ. ಏಪ್ರಿಲ್ ಮೇ ತಿಂಗಳು ಎಂದರೆ ದೊಡ್ಡ ಆರ್ಥಿಕ ವಹಿವಾಟು ನಡೆಯುವ ಸಮಯ. ಈ ಸಮಯದಲ್ಲಿ ನೀರಿನ ಅಲಭ್ಯತೆ ಇರುತ್ತದೆ. ಸಿದ್ಧ ಆಹಾರಗಳ ಬೇಡಿಕೆ ಹೆಚ್ಚಿರುತ್ತದೆ. ವ್ಯಾಪಕವಾಗಿ ತಂಪು ಪಾನೀಯಗಳಿಗೆ ಬೇಡಿಕೆ ಇರುತ್ತದೆ. ಇಂಥಹ ಸಮಯದಲ್ಲಿಯೇ ಕಲಬೆರಕೆ, ಗುಣಮಟ್ಟ ಹದಗೆಡುವುದು ಆಗುತ್ತದೆ. ಮುಖ್ಯವಾಗಿ ಕಲುಷಿತ ನೀರನ್ನು ಬಳಸಿ ಆಹಾರ ಪದಾರ್ಥಗಳನ್ನು ತಯಾರಿಸುವ ಉದ್ದಿಮೆಗಳಿವೆ. ಅವುಗಳ ಮೂಲ ಪತ್ತೆ ಹಚ್ಚುವ ಕೆಲಸ ಇಲಾಖೆಗಳು ಮಾಡಬೇಕಾಗುತ್ತದೆ. ಹಾಗೂ ತಂಪುಪಾನೀಯ ಘಟಕಗಳ ಗುಣಮಟ್ಟವನ್ನು ಆಗಿಂದಾಗೆ ಇಲಾಖೆಗಳು ಪರಿಶೀಲನೆ ಮಾಡಬೇಕಾಗುತ್ತದೆ. ಸಾರ್ವಜನಿಕ ಆರೋಗ್ಯ ರಕ್ಷಣೆ ವಿಚಾರದಲ್ಲಿ, ಆಹಾರ ಸುರಕ್ಷತೆಯ ವಿಚಾರದಲ್ಲಿ ಪರವಾನಿಗೆ ಇಲ್ಲದ ಘಟಕಗಳನ್ನು ಗುರುತಿಸುವ ಕೆಲಸ ಮಾಡುವುದು ಕೂಡಾ ಅಗತ್ಯವಾಗುತ್ತದೆ. ಅವಘಡಗಳು ಸಂಭವಿಸಿದ ನಂತರ ಚುರುಕಾಗುವುದಕ್ಕಿಂತ ಮೊದಲೇ ಎಚ್ಚೆತ್ತುಕೊಳ್ಳುವುದು ಅಗತ್ಯ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!