spot_img
Saturday, December 7, 2024
spot_img

ನೈರುತ್ಯ ಶಿಕ್ಷಕರ ಕ್ಷೇತ್ರದ ಹಾಲಿ ಶಾಸಕ ಭೋಜೆ ಗೌಡರ ಸಾಧನೆ ಶೂನ್ಯ-ವಿಕಾಸ್ ಹೆಗ್ಡೆ

ಕುಂದಾಪುರ: ಬಿಜೆಪಿ ಹಾಗೂ ಜೆಡಿ‌ಎಸ್ ಪಕ್ಷದ ಹೊಂದಾಣಿಕೆಯ ಅಭ್ಯರ್ಥಿ ಹಾಲಿ ನೈರುತ್ಯ ಶಿಕ್ಷಕರ ಕ್ಷೇತ್ರದ ಶಾಸಕ ಎಸ್.ಎಲ್ ಭೋಜೆ ಗೌಡರು ಕಳೆದ ಆರು ವರ್ಷಗಳ ಸಾಧನೆ ಶೂನ್ಯ. ಶಿಕ್ಷಕರ ಕ್ಷೇತ್ರದ ಯಾವುದೇ ಸಮಸ್ಯೆಗಳ ಪರಿಹಾರಕ್ಕೆ ಭೋಜೆ ಗೌಡರು ಪ್ರಾಮಾಣಿಕ ಪ್ರಯತ್ನ ಮಾಡಲೇ ಇಲ್ಲ, ತನ್ನ ಆರು ವರ್ಷಗಳ ಶಾಸಕ ಅವಧಿಯ ಸುಮಾರು ಹನ್ನೆರಡು ಕೋಟಿ ಅನುದಾನವನ್ನು ಯಾವುದೇ ಶಿಕ್ಷಕರ ಅಥವಾ ಶೈಕ್ಷಣಿಕ ಸಂಸ್ಥೆಗಳ ಅಭಿವೃದ್ಧಿ ಉಪಯೋಗಿಸಿದ ಒಂದೇ ಒಂದು ಶಾಶ್ವತ ಯೋಜನೆಗಳು ಇಲ್ಲ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ತಿಳಿಸಿದ್ದಾರೆ.

ಇಂದು ಕರಾವಳಿ ಭಾಗದ ಅದೆಷ್ಟೋ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಶೂನ್ಯ ಶಿಕ್ಷಕರು ಇದ್ದಾರೆ, ಸುಸಜ್ಜಿತ ಕಟ್ಟಡಗಳು ಇಲ್ಲಾ, ಸಮರ್ಪಕ ಆಟದ ಮೈದಾನಗಳು ಇಲ್ಲಾ, ಅದೆಷ್ಟೋ ಹಳ್ಳಿ ಪ್ರದೇಶದ ಸರ್ಕಾರಿ ಶಾಲೆಗಳಿಗೆ ಸೂಕ್ತ ಸರ್ಕಾರಿ ಸಾರಿಗೆ ವ್ಯವಸ್ಥೆ ಇಲ್ಲಾ, ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರದಿಂದ ಭೋದಕ ಮತ್ತು ಭೋದಕೇತರ ಸಿಬ್ಬಂದಿಗಳು ಹುದ್ದೆ ಮಂಜೂರು ಆಗದೆ ಅದೆಷ್ಟೋ ವರ್ಷಗಳು ಆಯಿತು ಇಂತಾ ಹಲವಾರು ಸಮಸ್ಯೆಗಳ ಪರಿಹಾರಕ್ಕೆ ಭೋಜೆ ಗೌಡರ ಪ್ರಯತ್ನ ಶೂನ್ಯ. ಕಳೆದ ಚುನಾವಣೆಯಲ್ಲಿ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೋದ ಭೋಜೆ ಗೌಡರು ಆರು ವರ್ಷಗಳ ನಂತರ ಪುನಃ ಬಂದಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು ಚುನಾವಣೆ ಪೂರ್ವ ಸರ್ಕಾರಿ ನೌಕರರಿಗೆ ವಿಶೇಷವಾಗಿ ಶಿಕ್ಷಕರಿಗೆ ಸರ್ಕಾರ ನೀಡಿದ ಭರವಸೆಗಳನ್ನು ಹಂತ ಹಂತವಾಗಿ ರಾಜ್ಯ ಸರ್ಕಾರ ಈಡೇರಿಸುತ್ತಿದ್ದು, ಈ ಬಾರಿ ವಿಧಾನ ಪರಿಷತ್ ನೈರುತ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ: ಕೆ. ಕೆ ಮಂಜುನಾಥ್ ಕುಮಾರ್ ರವರನ್ನು ಅತೀ ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕಾಗಿದೆ ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!