spot_img
Monday, March 24, 2025
spot_img

ಮದರ್ ತೆರೇಸಾ ಪದವಿ ಪೂರ್ವ ಕಾಲೇಜಿನ ಗಣಿತ ವಿಭಾಗದ ಮುಖ್ಯಸ್ಥರಾಗಿ ನಿರ್ಮಲ ಕುಮಾರಿ. ಬಿ ಆಯ್ಕೆ

ಶಂಕರನಾರಾಯಣ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಮದರ್ ತೆರೇಸಾ ಪದವಿ ಪೂರ್ವ ಕಾಲೇಜು ಶಂಕರನಾರಾಯಣ ಸಂಸ್ಥೆಯು ಶಿಕ್ಷಣ ಕ್ಷೇತ್ರದಲ್ಲಿ ಈಗಾಗಲೇ ಶೈಕ್ಷಣಿಕ ಸಾಧನೆಯ ಮೂಲಕ ದಾಪುಗಾಲಿಡುತ್ತಿದೆ. ಇದಕ್ಕೆ ಪೂರಕವಾಗಿ ಶ್ರೀಮತಿ ನಿರ್ಮಲಾ ಕುಮಾರಿ. ಬಿ ಗಣಿತ ವಿಭಾಗದ ಮುಖ್ಯಸ್ಥರು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಾದ ಸಿ‌ಇಟಿ, ನೀಟ್ ಹಾಗೂ ಜೆ‌ಇ‌ಇ ಪರೀಕ್ಷೆಗಳ ಸಂಯೋಜಕರಾಗಿ ಪ್ರಸ್ತುತ ಶೈಕ್ಷಣಿಕ ವರ್ಷಕ್ಕೆ ನಿಯುಕ್ತರಾಗಿದ್ದಾರೆ.

ಇವರು ವಿವೇಕಾನಂದ ಪದವಿ ಪೂರ್ವ ಕಾಲೇಜು ಪುತ್ತೂರು ಇಲ್ಲಿ ಗಣಿತ ವಿಭಾಗದ ಮುಖ್ಯಸ್ಥರಾಗಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಾದ ಸಿ‌ಇಟಿ, ನೀಟ್, ಜೆ‌ಇ‌ಇ ಪರೀಕ್ಷೆಗಳ ಸಂಯೋಜಕರಾಗಿ ಸುದೀರ್ಘ ೨೩ ವರ್ಷಗಳ ಸೇವಾ ಅನುಭವವನ್ನು ಹೊಂದಿದ್ದಾರೆ. ಅದರೊಂದಿಗೆ ಮಂಗಳೂರಿನ ಬೋಸ್ಕೋಸ್ ಕಾಲೇಜಿನಲ್ಲಿಯೂ ಸಹ ಇದೇ ಕಾಯಕದ ೩ ವರ್ಷದ ಸೇವಾ ಅನುಭವ ಹೊಂದಿದ್ದಾರೆ.

ಗಣಿತ ವಿಷಯದಲ್ಲಿ ಅಪಾರ ಪಾಂಡಿತ್ಯವನ್ನು ಹೊಂದಿದ್ದು ಗಣಿತದ ಸಾಧನೆಗಾಗಿ ಹತ್ತು ಹಲವು ಪುರಸ್ಕಾರಗಳನ್ನ ಪಡೆದಿರುವ ಇವರು ಈ ಶೈಕ್ಷಣಿಕ ವರ್ಷದ ಗಣಿತ ವಿಷಯ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಜವಾಬ್ದಾರಿಯನ್ನು ಹೆಗಲಗೇರಿಸಿಕೊಂಡು ಉತ್ತಮ ಫಲಿತಾಂಶವನ್ನು ನೀಡುವ ಭರವಸೆಯೊಂದಿಗೆ ಸಂಸ್ಥೆಯ ಉತ್ತರೋತ್ತರ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದ್ದಾರೆ.

 

Related Articles

Stay Connected

21,961FansLike
3,912FollowersFollow
22,300SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!