spot_img
Thursday, December 5, 2024
spot_img

ಕುಂದಾಪುರದ ಪ್ರಸಿದ್ಧ ವೈದ್ಯ, ಪಕ್ಷಿ ಪ್ರೇಮಿ ಹೆಚ್.ಎಸ್ ಮಲ್ಲಿ ನಿಧನ

ಕುಂದಾಪುರ: ಕುಂದಾಪುರದ ಪ್ರಸಿದ್ಧ ವೈದ್ಯ, ಪರಿಸರ ಪ್ರೇಮಿ, ಪಕ್ಷಿ ತಜ್ಞ, ಯಡ್ತೆರೆ ನರ್ಸಿಂಗ್ ಹೋಂ ಮಾಲೀಕ, ರೋಟೇರಿಯನ್ ಡಾ.ಹೆಚ್. ಶುಭೋದ್ ಕುಮಾರ್ (ಹೆಚ್.ಎಸ್.ಮಲ್ಲಿ) ಮಲ್ಲಿ ವಯೋಸಹಜವಾಗಿ ಮೇ.13ರ ರಾತ್ರಿ ನಿಧನರಾದರು.

ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದ ಡಾ. ಮಲ್ಲಿ, ಪರಿಸರ ಪ್ರೇಮಿಯಾಗಿದ್ದವರು. ಪಕ್ಷಿ ಸಂಕುಲದ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಸ್ತ್ರೀ ರೋಗ ತಜ್ಞರಾಗಿಯೂ ಸೇವೆ ಸಲ್ಲಿಸಿದ್ದ ಡಾ. ಮಲ್ಲಿ, ರೋಟರಿ ಕ್ಲಬ್ ಸದಸ್ಯರಾಗಿ ವಿವಿಧ ಹುದ್ದೆಗಳ ಜವಬ್ದಾರಿ ನಿರ್ವಹಿಸಿದ್ದಾರೆ. ಸಾಮಾಜಿಕ ಕ್ಷೇತ್ರದಲ್ಲಿಯೂ ಕೂಡಾ ಸೇವೆ ಮಾಡಿದ್ದಾರೆ. ಕುಂದಾಪುರದ ರೆಡ್ ಕ್ರಾಸ್ ಸಂಸ್ಥೆಯಲ್ಲಿ ಸುಮಾರು ಎರಡು ವರ್ಷಗಳ ಕಾಲ ಉಚಿತವಾಗಿ ಸೇವೆ ಸಲ್ಲಿಸಿದ್ದಾರೆ.

ಉತ್ತಮ ಲೇಖಕರು ಆಗಿರುವ ಇವರು ಪರಿಸರ, ಪಕ್ಷಿಗಳ ಬಗ್ಗೆ ಅನೇಕ ಲೇಖನಗಳನ್ನು ಬರೆದಿದ್ದಾರೆ. ‘ಜನಪ್ರತಿನಿಧಿ’ ಪತ್ರಿಕೆಯಲ್ಲಿಯೂ ಕೂಡಾ ಅವರ ಲೇಖನಗಳು ಪ್ರಕಟವಾಗಿದ್ದವು.

ಮೃತರು ಪತ್ನಿ, ಇಬ್ಬರು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

 

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!