spot_img
Wednesday, January 22, 2025
spot_img

INDIA ಮೈತ್ರಿಕೂಟ ಅಧಿಕಾರಕ್ಕೆ ಬಂದರೆ, ಶಂಕರಾಚಾರ್ಯ ಸ್ಥಾಪಿತ ಪೀಠಾಧ್ಯಕ್ಷರ ನೇತೃತ್ವದಲ್ಲಿ ರಾಮ ಮಂದಿರ ಶುದ್ಧೀಕರಣ : ನಾನಾ ಪಟೋಲೆ

ಜನಪ್ರತಿನಿಧಿ (ಮುಂಬೈ) : INDIA ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಅಯೋಧ್ಯೆಯ ರಾಮಮಂದಿರವನ್ನು ಶುದ್ಧೀಕರಣ ಮಾಡಲಾಗುವುದು ಎಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಹೇಳಿಕೆ ನೀಡಿದ್ದಾರೆ.

ರಾಮ ಮಂದಿರ ನಿರ್ಮಾಣ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶಿಷ್ಟಾಚಾರಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದು, ನಾವು ಅಧಿಕಾರಕ್ಕೆ ಬಂದಾಗ ಅದನ್ನು ಸರಿಪಡಿಸಲಾಗುವುದು ಎಂದು ಪಟೋಲೆ ಹೇಳಿದ್ದಾರೆ.

ಶಂಕರಾಚಾರ್ಯರು ಇದನ್ನು (ಪ್ರಾಣ ಪ್ರತಿಷ್ಠಾ) ವಿರೋಧಿಸುತ್ತಿದ್ದರು. ಎಲ್ಲಾ ಶಂಕರಾಚಾರ್ಯ ಸ್ಥಾಪಿತ ನಾಲ್ಕೂ ಮಠಗಳ ನಾಲ್ವರು  ಪೀಠಾಧ್ಯಕ್ಷರ ನೇತೃತ್ವದಲ್ಲಿ ರಾಮಮಂದಿರವನ್ನು ಶುದ್ಧೀಕರಣ ಮಾಡುತ್ತೇವೆ ಎಂದಿದ್ದಲ್ಲದೇ, ಆ ಸ್ಥಳದಲ್ಲಿ ರಾಮ್ ದರ್ಬಾರ್ ಸ್ಥಾಪಿಸಲಾಗುವುದು. ಇದು ರಾಮನ ವಿಗ್ರಹವಲ್ಲ, ಆದರೆ ರಾಮ್ ಲಲ್ಲಾನ ಮಗುವಿನ ರೂಪ ಎಂದು ಪಟೋಲೆ ಹೇಳಿದರು. ರಾಮ ಮಂದಿರ ನಿರ್ಮಾಣದಲ್ಲಿ ನರೇಂದ್ರ ಮೋದಿ ಶಿಷ್ಟಾಚಾರಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ನಾವು ಅದನ್ನು ಸರಿ ಮಾಡುತ್ತೇವೆ ಎಂದು  ಹೇಳಿದ್ದಾರೆ.

ಅಯೋಧ್ಯೆಯ ರಾಮ ಮಂದಿರಕ್ಕೆ ಶಂಕರಾಚಾರ್ಯ ಪೀಠಾಧ್ಯಕ್ಷರ ವಿರೋಧ :

ನಾಲ್ಕು ಶಂಕರಾಚಾರ್ಯ ಸ್ಥಾಪಿತ ಹಿಂದೂ ಮಠಗಳ ಪೀಠಾಧ್ಯಕ್ಷರು ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭದಿಂದ ದೂರ ಉಳಿದಿದ್ದರು. ನಾಲ್ವರಲ್ಲಿ ಮೂವರು ಶಂಕರಾಚಾರ್ಯರು ಜನವರಿ 22 ರ ಕಾರ್ಯಕ್ರಮಕ್ಕೆ ತಾವು ವಿರೋಧಿಗಳಲ್ಲ ಅಥವಾ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧವೂ ಅಲ್ಲ ಎಂದು ಸ್ಪಷ್ಟಪಡಿಸಿದ್ದರೂ ಹಿಂದೂ ಧರ್ಮಗ್ರಂಥಗಳ ಪ್ರಕಾರ ಪಟ್ಟಾಭಿಷೇಕ ಸಮಾರಂಭವನ್ನು ನಡೆಸಲಾಗುತ್ತಿಲ್ಲ ಎಂದು ಹೇಳಿದ್ದರು.

ನಿರ್ಮಾಣ ಹಂತದಲ್ಲಿರುವ ದೇವಾಲಯದಲ್ಲಿ ರಾಮನ ವಿಗ್ರಹವನ್ನು ಪ್ರತಿಷ್ಠಾಪಿಸುವುದು ಅಜ್ಞಾನ ಕಾರ್ಯ ಎಂದು ಶಂಕರಾಚಾರ್ಯ ಸ್ಥಾಪಿತ ಜ್ಯೋತಿರ್ ಮಠದ ಪೀಠಾಧ್ಯಕ್ಷರು ಹೇಳಿದ್ದಾರೆ ಎಂದು ಪಟೋಲೆ ಹೇಳಿದ್ದಾರೆ. ಮಹಾರಾಷ್ಟ್ರದ ಒಟ್ಟು 48 ಲೋಕಸಭಾ ಸ್ಥಾನಗಳಲ್ಲಿ ವಿಪಕ್ಷಗಳ ಒಕ್ಕೂಟ ಐಎನ್​ಡಿಐಎ ಮೈತ್ರಿಕೂಟ 35 ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುತ್ತದೆ ಎಂದು ಪಟೋಲೆ ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಏಕನಾಥ್ ಶಿಂಧೆ ನೇತೃತ್ವದ ಮಹಾಯುತಿ ಮೈತ್ರಿ ಪತನವಾಗಲಿದೆ ಎಂದು ಅವರು ಭವಿಷ್ಯ ನುಡಿದ್ದಾರೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!