Sunday, September 8, 2024

ಲೋಕಸಭಾ ಚುನಾವಣೆ : ದೇಶದಾದ್ಯಂತ 543 ಕ್ಷೇತ್ರಗಳಿಗೆ ಒಟ್ಟು 6376 ಅಭ್ಯರ್ಥಿಗಳ ಸ್ಪರ್ಧೆ !

ಜನಪ್ರತಿನಿಧಿ (ನವ ದೆಹಲಿ) : ಈ ಬಾರಿಯ ಲೋಕಸಭಾ ಚುನಾವಣೆ ಹಲವು ಚರ್ಚೆಗಳಿಗೆ ಕಾರಣವಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಮತ್ತೊಮ್ಮೆ ಅಧಿಕಾರ ಹಿಡಿಯಲೇ ಬೇಕು ಎಂಬ ದೃಷ್ಟಿಯಲ್ಲಿ ಚುನಾವಣೆ ಎದುರಿಸುತ್ತಿರುವುದು ಒಂದೆಡೆಯಾದರೇ, ಇನ್ನೊಂದೆಡೆ ಮಲ್ಲಿಕಾರ್ಜುನ್‌ ಖರ್ಗೆ ಹಾಗೂ ರಾಹುಲ್‌ ಗಾಂಧಿ ನೇತೃತ್ವದ ಕಾಂಗ್ರೆಸ್‌ ಸಾರಥ್ಯದ ʼಇಂಡಿಯಾʼ ಮೈತ್ರಿಕೂಟ ಈ ಬಾರಿ ಹೇಗಾದರೂ ಮಾಡಿ ಎನ್‌ಡಿಎ ಸರ್ಕಾರವನ್ನು ಕೆಳಗಿಳಿಸಬೇಕು ಎಂಬ ಪಣತೊಟ್ಟಿದೆ.

ಹಲವು ಕಾರಣಗಳಿಗೆ ಈ ಬಾರಿಯ ಲೋಕಸಭಾ ಚುನಾವಣೆ ಸಾಕ್ಷಿಯಾಗಿದೆ. ಆಡಳಿತ ವಿರೋಧಿ ಅಲೆ, ಮೋದಿ ಅಲೆ, ಹಿಂದುತ್ವ, ಸಂವಿಧಾನ ಸಂರಕ್ಷಣೆ, ಪ್ರಜಾಪ್ರಭುತ್ವ ರಕ್ಷಣೆ, ಲಡಾಖ್‌ ಅರುಣಾಚಲ ಪ್ರದೇಶ ಚೀನಾ ಅತಿಕ್ರಮಣ, ಮಣಿಪುರ, ರೈತರ ಪ್ರತಿಭಟನೆ, ಚುನಾವಣಾ ಬಾಂಡ್‌ ನಿಷೇಧ, ಹಣದುಬ್ಬರ, ಶ್ರೀರಾಮ ಮಂದಿರ ಲೋಕಾರ್ಪಣೆ, ಬೆಲೆ ಏರಿಕೆ, ಆರ್ಥಿಕ ಬಿಕ್ಕಟ್ಟು, ಒಂದು ದೇಶ ಒಂದು ಚುನಾವಣೆ, ದೇಶದ ಸಾಲ ದುಪ್ಪಟ್ಟು, ಜಾತಿ ಗಣತಿ, ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳು, ಮೋದಿ ಗ್ಯಾರಂಟಿ.. ಹೀಗೆ ಹತ್ತು ಹಲವಾರು ವಿಚಾರಗಳ ಈ ಚುನಾವಣೆಯ ಹಿನ್ನೆಲೆಯಲ್ಲಿ ಮುನ್ನೆಲೆಯಲ್ಲಿ ಚರ್ಚೆಯಾಗಿದ್ದವು. ಈ ಬಾರಿಯ ಚುನಾವಣೆ ಕಳೆದ ಎರಡು ಲೋಕಸಭಾ ಚುನಾವಣೆಗಳಿಗಿಂತಲೂ ಭಿನ್ನವಾಗಿರುತ್ತದೆ. ಬಹುತೇಕ ದೇಶದಾದ್ಯಂತ ಇರುವ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ಜಿದ್ದಾಜಿದ್ದಿನ ಕಣ ಸೃಷ್ಟಿ ಮಾಡಬಹುದು ಎಂಬ ವಿಶ್ಲೇಷಣೆಗಳಿವೆ.

ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎನ್‌ಡಿಎ ಮೈತ್ರಿ 400 ಕ್ಷೇತ್ರಗಳಲ್ಲಿ ಗೆಲ್ಲುತ್ತದೆ ಎಂಬ ವಿಶ್ವಾಸದಲ್ಲಿದ್ದರೇ, ಇತ್ತ ʼಇಂಡಿಯಾʼ ಮೈತ್ರಿಕೂಟ ತಾವೇ ಅಧಿಕಾರ ಹಿಡುತ್ತೇವೆ ಎಂಬ ನಂಬಿಕೆಯಲ್ಲಿದೆ. ಒಟ್ಟಿನಲ್ಲಿ 543 ಲೋಕಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಈ ಸುತ್ತಿನ ಚುನಾವಣೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಮತ್ತೆ ಮರಳಿ ಮೋದಿ ಮೂರನೇ ಬಾರಿ ಪ್ರಧಾನಿ ಆಗುತ್ತಾರೋ ಅಥವಾ ಹೊಸ ಸರ್ಕಾರ ಅಧಿಕಾರ ಹಿಡಿಯುತ್ತದೋ ಎಂಬುವುದನ್ನು ಕಾದು ನೋಡಬೇಕಿದೆ.

ಆಂಧ್ರ ಪ್ರದೇಶ (25), ಅರುಣಾಚಲ ಪ್ರದೇಶ(2), ಅಸ್ಸಾಂ (14), ಬಿಹಾರ(40), ಛತ್ತೀಸ್ ಗಢ (11), ಗೋವಾ (2), ಗುಜರಾತ್ (26), ಹರಿಯಾಣ (10), ಹಿಮಾಚಲ ಪ್ರದೇಶ (4), ಜಾರ್ಖಂಡ್ (14), ಕರ್ನಾಟಕ (28), ಕೇರಳ(20), ಮಧ್ಯಪ್ರದೇಶ  (29), ಮಹಾರಾಷ್ಟ್ರ (48), ಮಣಿಪುರ(2), ಮೇಘಾಲಯ (2), ಮಿಜೋರಾಂ(1), ನಾಗಾಲ್ಯಾಂಡ್ (1), ಒಡಿಶಾ (21), ಪಂಜಾಬ್ (13), ರಾಜಸ್ಥಾನ (25), ಸಿಕ್ಕಿಂ(1), ತಮಿಳುನಾಡು (39), ತೆಲಂಗಾಣ (17), ತ್ರಿಪುರ (2), ಉತ್ತರ ಪ್ರದೇಶ (80), ಉತ್ತರಖಂಡ (5), ಪಶ್ಚಿಮ ಬಂಗಾಳ (42), ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು (1), ಚಂಡಿಗಡ (1), ದಾದ್ರಾ ಮತ್ತು ನಗರ ಹವೇಲಿ, ದಮನ್ ಮತ್ತು ದೀವು (2), ದೆಹಲಿ(7), ಜಮ್ಮು ಮತ್ತು ಕಾಶ್ಮೀರ (5), ಲಡಾಖ್ (1), ಲಕ್ಷದ್ವೀಪ (1), ಪುದುಚೆರಿ(1) ಸೇರಿ ಒಟ್ಟು ದೇಶದ 543 ಲೋಕಸಭಾ ಕ್ಷೇತ್ರಗಳ ಸಂಸದ ಸ್ಥಾನಕ್ಕಾಗಿ ಈ ಬಾರಿ ಒಟ್ಟು 6376 ಅಭ್ಯರ್ಥಿಗಳು ಸ್ಪರ್ಧೆ ಮಾಡುತ್ತಿದ್ದಾರೆ ಎಂದು ಕೇಂದ್ರ ಚುನಾವಣಾ ಆಯೋಗದ ಅಧಿಕೃತ ಅಂಕಿಅಂಶ ಮಾಹಿತಿ ನೀಡುತ್ತದೆ.

ಈ ಬಾರಿ ಲೋಕಸಭಾ ಚುನಾವಣೆಗೆ ಒಟ್ಟು ದೇಶದಾದ್ಯಂತ 16528 ಮಂದಿ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ಅವರಲ್ಲಿ 10089 ಮಂದಿಯ ಅಫಿಡವಿತ್‌ ಅನ್ನು ಅಂಗೀಕರಿಸಲಾಗಿದ್ದು, 3536 ಮಂದಿಯ ಅಫಿಡವಿತ್‌ ಅನ್ನು ತಿರಸ್ಕರಿಸಲಾಗಿದೆ. ಒಟ್ಟು 970 ಮಂದಿ ತಮ್ಮ ನಾಮಪತ್ರವನ್ನು ಹಿಂಪಡೆದಿದ್ದಾರೆ ಎನ್ನುವ ಮಾಹಿತಿಯನ್ನು ಚುನಾವಣಾ ಆಯೋಗ ನೀಡಿರುವ ಮಾಹಿತಿಯಲ್ಲಿದೆ.

ಆಧಾರ : ಕೇಂದ್ರ ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್‌

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!