spot_img
Wednesday, April 1, 2026
spot_img

ರಾಜ್ಯದಲ್ಲಿಂದು ಎರಡನೇ ಹಂತದ ಲೋಕಸಭಾ ಚುನಾವಣೆ : 14 ಕ್ಷೇತ್ರಗಳಲ್ಲಿ ಯಾರ ಯಾರ ನಡುವೆ ಹಣಾಹಣಿ !? ಇಲ್ಲಿದೆ ಮಾಹಿತಿ

ಜನಪ್ರತಿನಿಧಿ(ಬೆಂಗಳೂರು) : ರಾಜ್ಯದ ಉಳಿದ 14 ಲೋಕಸಭಾ ಕ್ಷೇತ್ರಗಳಿಗೆ ಇಂದು(ಮಂಗಲವಾರ) ಮತದಾನ ನಡೆಯುತ್ತಿದೆ. ರಾಜ್ಯದಲ್ಲಿ ನಡೆಯುತ್ತಿರುವ ಎರಡನೇ ಹಂತದ ಚುನಾವಣೆ ಇದಾದರೇ, ದೇಶದಲ್ಲಿ ನಡೆಯುತ್ತಿರುವ ಮೂರನೇ ಹಂತದ ಚುನಾವಣೆ ಇದಾಗಿದೆ.

ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಬಿಜಾಪುರ(ಎಸ್ಸಿ ಮೀಸಲು), ಗುಲ್ಬರ್ಗ(ಎಸ್ಸಿ), ರಾಯಚೂರು(ಎಸ್ಟಿ ಮೀಸಲು), ಬೀದರ್, ಕೊಪ್ಪಳ, ಬಳ್ಳಾರಿ(ಎಸ್ಟಿ), ಹಾವೇರಿ, ಧಾರವಾಡ, ಉತ್ತರಕನ್ನಡ, ದಾವಣಗೆರೆ, ಶಿವಮೊಗ್ಗ ಲೋಕಸಭಾ ಕ್ಷೇತ್ರಗಳ ಸಂಸದರ ಆಯ್ಕೆಗೆ ಮತದಾನ ನಡೆಯುತ್ತಿದೆ.

14 ಲೋಕಸಭಾ ಕ್ಷೇತ್ರಗಳಲ್ಲಿ ಯಾರ ಯಾರ ನಡುವೆ ಹಣಾಹಣಿ :

ಚಿಕ್ಕೋಡಿ – ಅಣ್ಣಾ ಸಾಹೇಬ್‌ ಜೊಲ್ಲೆ (ಬಿಜೆಪಿ) V/s ಪ್ರಿಯಾಂಕಾ ಸತೀಶ್‌ ಜಾರಕಿಹೊಳಿ (ಕಾಂಗ್ರೆಸ್‌)
ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಸಂಸದ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿರುವವರ ಸಂಖ್ಯೆ – 18

ಬೆಳಗಾವಿ – ಜಗದೀಶ್‌ ಶೆಟ್ಟರ್‌ (ಬಿಜೆಪಿ) V/s ಮೃಣಾಲ್‌ ಆರ್‌. ಹೆಬ್ಬಾಳ್ಕರ್‌ (ಕಾಂಗ್ರೆಸ್‌)
ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸಂಸದ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿರುವವರ ಸಂಖ್ಯೆ – 13

ಬಾಗಲಕೋಟೆ – ಪಿಸಿ ಗದ್ದಿಗೌಡರ್‌ (ಬಿಜೆಪಿ) V/s ಸಂಯುಕ್ತ ಶಿವಾನಂದ ಪಾಟೀಲ್‌(ಕಾಂಗ್ರೆಸ್‌) ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ಸಂಸದ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿರುವವರ ಸಂಖ್ಯೆ – 22

ಬಿಜಾಪುರ(ಎಸ್ಸಿ ಮೀಸಲು) ರಮೇಶ್‌ ಜಿಗಜಿಣಗಿ (ಬಿಜೆಪಿ) V/s ರಾಜು ಅಲಗೂರು(ಕಾಂಗ್ರೆಸ್)‌
ಬಿಜಾಪುರ(ಎಸ್ಸಿ ಮೀಸಲು) ಲೋಕಸಭಾ ಕ್ಷೇತ್ರದಿಂದ ಸಂಸದ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿರುವವರ ಸಂಖ್ಯೆ – 8

ಗುಲ್ಬರ್ಗ (ಎಸ್ಸಿ) ಡಾ. ಉಮೇಶ್‌ ಜಿ. ಜಾದವ್‌(ಬಿಜೆಪಿ) V/s ರಾಧಾಕೃಷ್ಣ(ಕಾಂಗ್ರೆಸ್‌)
ಗುಲ್ಬರ್ಗ  ಲೋಕಸಭಾ ಕ್ಷೇತ್ರದಿಂದ ಸಂಸದ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿರುವವರ ಸಂಖ್ಯೆ  – 14

ರಾಯಚೂರು(ಎಸ್ಟಿ ಮೀಸಲು) ಜಿ. ಕುಮಾರ್‌ ನಾಯ್ಕ್‌ (ಕಾಂಗ್ರೆಸ್‌) V/s ರಾಜಾ ಅಮರೇಶ್ವರ್‌ ನಾಯ್ಕ್‌ (ಬಿಜೆಪಿ)
ರಾಯಚೂರು ಲೋಕಸಭಾ ಕ್ಷೇತ್ರದಿಂದ ಸಂಸದ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿರುವವರ ಸಂಖ್ಯೆ  – 8

ಬೀದರ್ – ಭಗವಂತ ಖೂಬಾ (ಬಿಜೆಪಿ) V/s ಸಾಗರ್‌ ಈಶ್ವರ್‌ ಖಂಡ್ರೆ (ಕಾಂಗ್ರೆಸ್)‌
ಬೀದರ್‌ ಲೋಕಸಭಾ ಕ್ಷೇತ್ರದಿಂದ ಸಂಸದ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿರುವವರ ಸಂಖ್ಯೆ  – 18

ಕೊಪ್ಪಳ – ಡಾ ಬಸವರಾಜ್‌ ಕೆ ಶರಣಪ್ಪ (ಬಿಜೆಪಿ) V/s ಕೆ. ರಾಜಶೇಖರ್‌ ಬಸವರಾಜ್‌ ಹಿಟ್ನಾಳ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸಂಸದ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿರುವವರ ಸಂಖ್ಯೆ  – 19

ಬಳ್ಳಾರಿ(ಎಸ್ಟಿ) – ಈ. ತುಕಾರಾಮ್‌ (ಕಾಂಗ್ರೆಸ್‌) V/s ಬಿ. ಶ್ರೀರಾಮುಲು (ಬಿಜೆಪಿ)
ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸಂಸದ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿರುವವರ ಸಂಖ್ಯೆ -10

ಹಾವೇರಿ – ಆನಂದಸ್ವಾಮಿ ಗಡ್ಡದೇವರಮಠ್‌ (ಕಾಂಗ್ರೆಸ್‌) V/s ಬಸವರಾಜ್‌ ಬೊಮ್ಮಾಯಿ(ಬಿಜೆಪಿ) ಹಾವೇರಿ ಲೋಕಸಭಾ ಕ್ಷೇತ್ರದಿಂದ ಸಂಸದ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿರುವವರ ಸಂಖ್ಯೆ – 14

ಧಾರವಾಡ – ಪ್ರಹ್ಲಾದ ಜೋಶಿ (ಬಿಜೆಪಿ) V/s ವಿನೋದ್‌ ಅಸೂಟಿ(ಕಾಂಗ್ರೆಸ್)‌
ಧಾರವಾಡ ಲೋಕಸಭಾ ಕ್ಷೇತ್ರದಿಂದ ಸಂಸದ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿರುವವರ ಸಂಖ್ಯೆ – 17

ಉತ್ತರ ಕನ್ನಡ – ಡಾ. ಅಂಜಲಿ ನಿಂಬಾಳ್ಕರ್‌ (ಕಾಂಗ್ರೆಸ್‌) V/s ವಿಶ್ವೇಶ್ವರ ಹೆಗಡೆ ಕಾಗೇರಿ (ಬಿಜೆಪಿ)
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಸಂಸದ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿರುವವರ ಸಂಖ್ಯೆ – 13

ದಾವಣಗೆರೆ – ಡಾ. ಪ್ರಭಾ ಮಲ್ಲಿಕಾರ್ಜುನ್‌ (ಕಾಂಗ್ರೆಸ್‌) V/s ಗಾಯತ್ರಿ ಸಿದ್ದೇಶ್ವರ(ಬಿಜೆಪಿ) V/s  ಜಿ.ಬಿ ವಿನಯ್‌ ಕುಮಾರ್‌(ಪಕ್ಷೇತರ, ಬಂಡಾಯ)
ದಾವಣಗೆರೆ  ಲೋಕಸಭಾ ಕ್ಷೇತ್ರದಿಂದ ಸಂಸದ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿರುವವರ ಸಂಖ್ಯೆ – 30

ಶಿವಮೊಗ್ಗ – ಗೀತಾ ಶಿವರಾಜ್‌ ಕುಮಾರ್‌ (ಕಾಂಗ್ರೆಸ್‌) V/s ಬಿ. ವೈ ರಾಘವೇಂದ್ರ(ಬಿಜೆಪಿ) V/s ಕೆ.ಎಸ್‌ ಈಶ್ವರಪ್ಪ (ಪಕ್ಷೇತರ, ಬಂಡಾಯ)
ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸಂಸದ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿರುವವರ ಸಂಖ್ಯೆ – 23

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!