spot_img
Sunday, February 15, 2026
spot_img

ಬೈಂದೂರು ಕ್ಷೇತ್ರದಲ್ಲಿ ಬಿಜೆಪಿ ಬಿರುಸಿನ ಅಂತಿಮ ಹಂತದ ಪ್ರಚಾರ

ಬೈಂದೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ವೈ. ರಾಘವೇಂದ್ರ ಅವರಿಗೆ ಬೈಂದೂರಿನಿಂದ ಒಂದು ಲಕ್ಷಕ್ಕೂ ಅಧಿಕ ಲೀಡ್ ನೀಡುವ ಸಂಕಲ್ಪ ಸಾಧನೆಗಾಗಿ ಪ್ರತಿ ಬೂತ್ ಗಳಲ್ಲೂ ನವದುರ್ಗೆಯರಿಂದ ಮೊದಲು ಮತದಾನ ಮಾಡಿಸುವ ಪರಿಕಲ್ಪನೆಗೆ ಎಲ್ಲೆಡೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು ಒಂದೊಂದು ಬೂತ್‌ಗಳಲ್ಲೂ ಈಗಾಗಲೇ ಎರಡು ಮೂರು ನಮದುರ್ಗೆಯರ ತಂಡ ಸಿದ್ಧವಾಗಿದೆ ಎಂದು ಬೈಂದೂರು ಶಾಸಕರಾದ ಗುರುರಾಜ ಗಂಟಿಹೊಳೆ ಮಾಹಿತಿ ನೀಡಿದರು.
1 ಲಕ್ಷ ಲೀಡ್ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಲ್ಲೂರಿಗೆ ಕರೆದುಕೊಂಡು ಬಂದು ಆ ಮೂಲಕ ಮೂಕಾಂಬಿಕ ಕಾರೀಡಾರ್ ಘೋಷಣೆ ಮಾಡಿಸುವ ಕನಸಿಗೆ ಕ್ಷೇತ್ರದ ಅತ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಇದರ ಭಾಗವಾಗಿ ಪ್ರತಿ ಬೂತ್ ಗಳಲ್ಲೂ 9 ಮಹಿಳೆಯರಿಂದ ಮೊದಲು ಮತದಾನ ಮಾಡಿಸಬೇಕು ಎಂಬುದನ್ನು  ಕಾರ್ಯಕರ್ತರ ಮುಂದಿಟ್ಟೆವು. ಎಲ್ಲಾ ಬೂತ್ ಗಳಲ್ಲಿ ಈಗಾಗಲೇ ನವ ದುರ್ಗೆಯರ ತಂಡ ಮೊದಲು ಮತದಾನ ಮಾಡಲು ಸಿದ್ಧವಾಗಿದೆ. ಕೆಲವೊಂದು ಬೂತ್ ಗಳಲ್ಲಿ ಎರಡು ಮೂರು ತಂಡಗಳು ಸಜ್ಜಾಗುತ್ತಿವೆ. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ಸನ್ನಿಧಾನದಲ್ಲಿ ಮೂಕಾಂಬಿಕಾ ಕಾರೀಡಾರ್ ನಿರ್ಮಾಣ, ಮೋದಿಯವರನ್ನು ಕ್ಷೇತ್ರಕ್ಕೆ ಕರೆದುಕೊಂಡು ಬರುವ ಸಂಕಲ್ಪ ಇತ್ಯಾದಿಗಳಿಗೆ ಪ್ರತಿ ಊರಿನಿಂದಲೂ ಉತ್ತಮ ಬೆಂಬಲ ಸಿಗುತ್ತಿದೆ ಎಂದು ಶಾಸಕರಾದ ಗುರುರಾಜ ಗಂಟಿಹೊಳೆ ತಿಳಿಸಿದರು.
 ಎಲ್ಲ ಬೂತ್ ಗಳಲ್ಲೂ ಅಂತಿಮ ಹಂತದ ಪ್ರಚಾರ ಪ್ರಕ್ರಿಯೆ ವೇಗವಾಗಿ ನಡೆಯುತ್ತಿದೆ. ಕೆಲವು ಕಡೆಗಳಲ್ಲಿ ಕಾರ್ಯಕರ್ತರು ನಿತ್ಯವೂ ಮತದಾರ ಮನೆ ಮನೆಗೆ ಭೇಟಿ ನೀಡುತ್ತಿದ್ದಾರೆ. ಬೂತ್ ಗಳಲ್ಲಿರುವ ಪೇಜ್ ಪ್ರಮುಖರು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಶೇ.100ರಷ್ಟು ಮತದಾನಕ್ಕೆ ಮನವಿ:
ಎಲ್ಲಾ ಬೂತ್ ಗಳಲ್ಲಿ ಕಾರ್ಯಕರ್ತರು ನೂರಕ್ಕೆ ನೂರು ಮತದಾನ ಆಗುವಂತೆ ವಿಶೇಷ ಗಮನ ಹರಿಸಬೇಕು. ಬೂತ್ ಗಳಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ಪ್ರಮಾಣ ಹೆಚ್ಚಾಗುವಂತೆಯೂ ಗಮನ ಹರಿಸಬೇಕು. ಬೂತ್ ಗೆದ್ದರೆ ಕ್ಷೇತ್ರ ಗೆಲ್ಲಲು ಸಾಧ್ಯ. ಬಲಿಷ್ಠ ಬೂತ್ ನಮ್ಮದಾಗಬೇಕು. ಈ ನಿಟ್ಟಿನಲ್ಲಿ ಎಲ್ಲ ಬೂತ್ ಗಳಲ್ಲೂ ಶೇ.100ರಷ್ಟು ಮತದಾನಕ್ಕೆ ಎಲ್ಲ ಕಾರ್ಯಕರ್ತರು, ಮುಖಂಡರು ವಿಶೇಷ ಪ್ರಯತ್ನ ಮಾಡಬೇಕು. ಶೇ.100ರಷ್ಟು ಮತದಾನಕ್ಕೆ ಧಾರ್ಮಿಕ ಕೇಂದ್ರಗಳು ಶ್ರಮಿಸಬೇಕು ಎಂದು ಶಾಸಕರಾದ ಗುರುರಾಜ ಗಂಟಿಹೊಳೆ ಮನವಿ ಮಾಡಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!