spot_img
Saturday, December 7, 2024
spot_img

ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ : ಕೋವಿಶೀಲ್ಡ್‌ ವಿವಾದದ ನಂತರ ಕೋವ್ಯಾಕ್ಸಿನ್ ತಯಾರಿಕಾ ಸಂಸ್ಥೆ ಭಾರತ್ ಬಯೋಟೆಕ್ ಹೇಳಿಕೆ

ಜನಪ್ರತಿನಿಧಿ (ನವದೆಹಲಿ) : ಕೋವಿಡ್-19 ಸೋಂಕಿನಿಂದ ರಕ್ಷಣೆ ಪಡೆಯುವ ಉದ್ದೇಶದಿಂದ ಪಡೆಯಲಾಗಿದ್ದ ಕೋವಿಶೀಲ್ಡ್ ಲಸಿಕೆಯಿಂದ ಅಡ್ಡಪರಿಣಾಮಗಳುಂಟಾಗುತ್ತವೆ, ಇದರ ಪರಿಣಾಮವಾಗಿ ರಕ್ತ ಹೆಪ್ಪಗಟ್ಟಿ ಸಾಯುವ ಸಂಭವವೂ ಇದೆ ಎಂಬ ಹೊರಬಿದ್ದು ಬಾರಿ ದೊಡ್ಡ ಮಟ್ಟದಲ್ಲಿ ವಿವಾದ ಸೃಷ್ಟಿಯಾಗಿರುವುದರ ನಡುವೆಯೇ ಭಾರತದಲ್ಲಿ ತಯಾರಾದ ಕೋವ್ಯಾಕ್ಸಿನ್ ಲಸಿಕೆಯ ತಯಾರಿಕಾ ಸಂಸ್ಥೆ ಭಾರತ್ ಬಯೋಟೆಕ್ ತನ್ನ ಲಸಿಕೆ ಸುರಕ್ಷತೆಯ ಬಗ್ಗೆ ಇದೇ ಮೊದಲ ಬಾರಿಗೆ ಮಾಹಿತಿ ನೀಡಿದೆ.

ಬ್ರಿಟನ್ ನಲ್ಲಿ ಕೋವಿಶೀಲ್ಡ್ ಲಸಿಕೆಯ ನಿರ್ಮಾಣ ಸಂಸ್ಥೆ ಆಸ್ಟ್ರಾಜೆನಿಕಾ ಕೋರ್ಟ್ ಗೆ ನೀಡಿದ್ದ ಹೇಳಿಕೆಯಲ್ಲಿ ತನ್ನ ಲಸಿಕೆ ಸಂಪೂರ್ಣ ಸುರಕ್ಷಿತವಾಗಿದ್ದು, ಅತ್ಯಪರೂಪದ ಅಡ್ಡಪರಿಣಾಮ ಹೊಂದಿರಬಹುದು ಎಂಬ ಹೇಳಿಕೆ ಬೆನ್ನಲ್ಲೇ ಭಾರತದಲ್ಲಿ ಕೋವ್ಯಾಕ್ಸಿನ್ ಲಸಿಕೆಯ ಸುರಕ್ಷತೆ ಬಗ್ಗೆ ಅನುಮಾನಗಳು ವ್ಯಾಪಕವಾಗಿದ್ದವು.

ಇದೀಗ ಈ ಎಲ್ಲ ಅನುಮಾನಗಳಿಗೆ ಕೋವ್ಯಾಕ್ಸಿನ್ ತಯಾರಿಕಾ ಸಂಸ್ಥೆ ಭಾರತ್ ಬಯೋಟೆಕೆ ತೆರೆ ಎಳೆದಿದ್ದು, ಈ ಬಗ್ಗೆ ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಮಾಹಿತಿ ನೀಡಿದೆ.

ಭಾರತ್ ಬಯೋಟೆಕ್ ಸಂಸ್ಥೆ, ಕೋವ್ಯಾಕ್ಸಿನ್ ಲಸಿಕೆಯನ್ನು ಸುರಕ್ಷೆತೆಯ ಏಕೈಕ ಉದ್ದೇಶವನ್ನು ಮನದಲ್ಲಿಟ್ಟುಕೊಂಡು ತಯಾರಿಸಲಾಗಿದೆ ಎಂದು ಹೇಳಿದ್ದು, ಈ ಲಸಿಕೆಯು ಸುರಕ್ಷಿತವಾಗಿದ್ದು, ಯಾವುದೇ ಅಡ್ಡ ಪರಿಣಾಮಮ ಬೀರುವ ಯಾವುದೇ ಸಾಧ್ಯತೆ ಇಲ್ಲ ಎಂದು ಹೇಳಿದೆ. 27,000ಕ್ಕೂ ಹೆಚ್ಚು ವಿಷಯಗಳಲ್ಲಿ ಪರವಾನಗಿ ಪ್ರಕ್ರಿಯೆಯ ಭಾಗವಾಗಿ ಲಸಿಕೆಯನ್ನು ಮೌಲ್ಯಮಾಪನಕ್ಕೆ ಒಳಪಡಿಸಲಾಗಿದೆ ಎಂದೂ ತಿಳಿಸಿದೆ.

ಕ್ಲಿನಿಕಲ್ ಟ್ರಯಲ್‌ನಲ್ಲಿ ನಿರ್ಬಂಧಿತ ಬಳಕೆ ಅಡಿಯಲ್ಲಿ ಇದಕ್ಕೆ ಪರವಾನಗಿ ನೀಡಲಾಗಿತ್ತು. ಹಲವು ಆಯಾಮಗಳಲ್ಲಿ ಸುರಕ್ಷತೆಯ ಪರೀಕ್ಷೆ ನಡೆಸಲಾಗಿದೆ. ಲಸಿಕೆಯನ್ನು ಕೇಂದ್ರದ ಗೃಹ ಸಚಿವಾಲಯ ಸಹ ಮೌಲ್ಯಮಾಪನ ಮಾಡಿದೆ ಎಂದು ಹೇಳಿದೆ.

ಅಲ್ಲದೆ ಭಾರತದಲ್ಲಿ ಪರಿಣಾಮಕಾರಿತ್ವದ ಪ್ರಯೋಗಗಳನ್ನು ನಡೆಸಿದ ಭಾರತ ಸರ್ಕಾರದ COVID-19 ಪ್ರತಿರಕ್ಷಣೆ ಕಾರ್ಯಕ್ರಮದಲ್ಲಿ ಕೋವಾಕ್ಸಿನ್ ‘ಏಕೈಕ ಕೋವಿಡ್ ಲಸಿಕೆ’ ಎಂದು ತಿಳಿಸಿದೆ.

ಕೋವಾಕ್ಸಿನ್‌ ಎಕ್ಸಲೆಂಟ್‌ ಸೇಫ್ಟಿ ರೆಕಾರ್ಡ್‌ :

ಕೋವ್ಯಾಕ್ಸಿನ್ ಲಸಿಕೆ ಮೇಲಿನ ಅಧ್ಯಯನಗಳು ಹಾಗೂ ಅನುಸರಣಾ ಚಟುವಟಿಕೆಗಳು ಕೋವಾಕ್ಸಿನ್‌ಗಾಗಿ ಅದರ “ಅತ್ಯುತ್ತಮ ಸುರಕ್ಷತಾ ದಾಖಲೆ”ಯನ್ನು ಪ್ರದರ್ಶಿಸಿವೆ. ರಕ್ತ ಹೆಪ್ಪುಗಟ್ಟುವಿಕೆ, ಥ್ರಂಬೋ ಸೈಟೋಪೆನಿಯಾ, ಪೆರಿಕಾರ್ಡಿಟಿಸ್ ಹಾಗೂ ಮಯೋಕಾರ್ಡಿಟಿಸ್ ಸೇರಿದಂತೆ ಲಸಿಕೆ-ಸಂಬಂಧಿತ ಘಟನೆಗಳ ಯಾವುದೇ ವರದಿಗಳಿಲ್ಲ.

ಪರಿಣಿತ ಸಂಶೋಧಕರು ಹಾಗೂ ಉತ್ಪನ್ನ ಡೆವಲಪರ್‌ಗಳಾಗಿ, ಭಾರತ್ ಬಯೋಟೆಕ್ ತಂಡವು ಕೋವಿಡ್ -19 ಲಸಿಕೆಗಳ ಪರಿಣಾಮಕಾರಿತ್ವವು ಅಲ್ಪಾವಧಿಯದ್ದಾಗಿದ್ದರೂ, ರೋಗಿಗಳ ಸುರಕ್ಷತೆಯ ಮೇಲಿನ ಪರಿಣಾಮವು ಜೀವಿತಾವಧಿಯಲ್ಲಿ ಉಳಿಯಬಹುದು ಎಂದು ಚೆನ್ನಾಗಿ ತಿಳಿದಿತ್ತು. ಆದ್ದರಿಂದ, ನಮ್ಮ ಲಸಿಕೆಗಳಲ್ಲಿ ಸುರಕ್ಷತೆಯೇ ಎಲ್ಲರಿಗೂ ನಮ್ಮ ಮೊದಲನೇ ಆದ್ಯತೆ ಎಂದು ಭಾರತ್ ಬಯೋಟೆಕ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ತಮ್ಮ ಲಸಿಕೆ ಪಡೆದವರ ಪೈಕಿ ವಿರಳ ಪ್ರಕರಣಗಳಲ್ಲಿ ಅಡ್ಡ ಪರಿಣಾಮ ಕಂಡುಬಂದಿದೆ ಎಂದು ಕೋವಿಶೀಲ್ಡ್ ಲಸಿಕೆ ಉತ್ಪಾದಕ ಸಂಸ್ಥೆ ಆಸ್ಟ್ರಾಜೆನಿಕಾ ಒಪ್ಪಿಕೊಂಡ ಬಳಿಕ ಭಾರತ್ ಬಯೋಟೆಕ್ ಈ ಹೇಳಿಕೆ ನೀಡಿದೆ.

https://x.com/BharatBiotech/status/1785995597671285002

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!