spot_img
Wednesday, December 4, 2024
spot_img

ಶಿವಮೊಗ್ಗ ಲೋಕಸಭಾ ಕ್ಷೇತ್ರ : ಜೆಡಿಎಸ್‌ ಬೆಂಬಲಿತ ಬಿಜೆಪಿ ಅಭ್ಯರ್ಥಿ ಬಿ. ವೈ ರಾಘವೇಂದ್ರ ಅವರ ಬಗ್ಗೆ ನಿಮಗೆಷ್ಟು ಗೊತ್ತು !? ಇಲ್ಲಿದೆ ಅವರ ಸಂಕ್ಷಿಪ್ತ ಪರಿಚಯ

ಶಿವಮೊಗ್ಗ ಲೋಕಸಭಾ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಬಿ.ವೈ.ರಾಘವೇಂದ್ರ ಅವರು ಎರಡನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದಾರೆ. ಶಿಕಾರಿಪುರ ಕ್ಷೇತ್ರದ ಶಾಸಕರಾಗಿಯೂ ಅವರು ಕೆಲಸ ಮಾಡಿದ್ದಾರೆ.

ಶಿವಮೊಗ್ಗ ಲೋಕಸಭಾ ಉಪ ಚುನಾವಣೆಯಲ್ಲಿ ಬಿ.ವೈ.ರಾಘವೇಂದ್ರ ಅವರು 5,43,306 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. 2009ರಲ್ಲಿ ಅವರು ಮೊದಲ ಬಾರಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಯಾಗಿದ್ದರು.

ಬಿ.ವೈ.ರಾಘವೇಂದ್ರ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ. 2007ರಲ್ಲಿ ಶಿಕಾರಿಪುರ ಪುರಸಭೆ ಸದಸ್ಯರಾಗಿ ರಾಜಕೀಯ ಪ್ರವೇಶ ಮಾಡಿದ ಅವರು ಶಿವಮೊಗ್ಗ ಸಂಸದರಾಗಿ, ಶಿಕಾರಿಪುರ ಕ್ಷೇತ್ರದ ಶಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಪ್ರೇರಣಾ ಎಜುಕೇಷನಲ್ ಅಂಡ್ ಸೋಷಿಯಲ್ ಟ್ರಸ್ಟ್ ಮೂಲಕ  ಶಿವಮೊಗ್ಗದಲ್ಲಿ, ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಮೂಲಕ ಶಿಕಾರಿಪುರದಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ.

ಬಿ.ವೈ.ರಾಘವೇಂದ್ರ

* ಬಿ.ವೈ.ರಾಘವೇಂದ್ರ ವಯಸ್ಸು 45 ವರ್ಷ

* ಜನನ 16 ಆಗಸ್ಟ್ 1973

* ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಶಿಕಾರಿಪುರ ಮತ್ತು ಬೆಂಗಳೂರಿನಲ್ಲಿ

* ಪದವಿ ಪೂರ್ವ ಶಿಕ್ಷಣ  ಶಿವಮೊಗ್ಗ ಡಿ.ವಿ.ಎಸ್.ಕಾಲೇಜಿನಲ್ಲಿ

*  ಶಿವಮೊಗ್ಗ ಆಚಾರ್ಯ ತುಳಸಿ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯಲ್ಲಿ ಬಿಬಿಎಂ ವ್ಯಾಸಂಗ

* ಪತ್ನಿ ತೇಜಸ್ವಿನಿ. ಸುಭಾಷ್ ಮತ್ತು ಭಗತ್ ಮಕ್ಕಳು

ರಾಜಕೀಯಕ್ಕೆ ಪಾದಾರ್ಪಣೆ

* 2007ರಲ್ಲಿ ಶಿಕಾರಿಪುರದ ಪುರಸಭಾ ಸದಸ್ಯರಾಗಿ ಆಯ್ಕೆ

* 2009ರಲ್ಲಿ ಶಿವಮೊಗ್ಗ ಸಂಸದರಾಗಿ ಆಯ್ಕೆ

* 2014ರಲ್ಲಿ ಶಿಕಾರಪುರ ಉಪ ಚುನಾವಣೆಯಲ್ಲಿ ಕ್ಷೇತ್ರದ ಶಾಸಕರಾಗಿ ಆಯ್ಕೆ

* 2018ರ ಶಿವಮೊಗ್ಗ ಉಪ ಚುನಾವಣೆಯಲ್ಲಿ ಸಂಸದರಾಗಿ ಆಯ್ಕೆ

* 2019ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಸಂಸದರಾಗಿ ಆಯ್ಕೆ.

ವಿವಿಧ ಸಂಸ್ಥೆಗಳ ಸದಸ್ಯರಾಗಿ ಬಿ. ವೈ. ರಾ

* 1995ರಿಂದ ಶ್ರೀಮತಿ ಗಂಗಮ್ಮ ವೀರಭದ್ರಶಾಸ್ತ್ರಿ ಸ್ಮಾರಕ ಟ್ರಸ್ಟ್ (ರಿ) ಅಡಿಯಲ್ಲಿ ಕಲೆ, ಸಾಹಿತ್ಯ, ಸಂಗೀತ ಪ್ರೋತ್ಸಾಹಿಸಲು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹ.

* 1993ರಲ್ಲಿ ಕುವೆಂಪು ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿ ಕಾರ್ಯ ನಿರ್ವಹಣೆ

* ಅಕ್ಟೋಬರ್ 8, 2012ರಂದು 6 ವರ್ಷಗಳ ಅವಧಿಗೆ ಅಖಿಲ ಭಾರತ ವೀರಶೈವ ಮಹಾಸಭಾದ ಕೇಂದ್ರ ಸಮಿತಿ ಸದಸ್ಯರಾಗಿ ಆಯ್ಕೆ

* ಸೆಪ್ಟೆಂಬರ್ 26, 2010ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಯುವ ಘಟಕದ ಅಧ್ಯಕ್ಷರಾಗಿ ಆಯ್ಕೆ

ಶೈಕ್ಷಣಿಕ ಕಾರ್ಯಗಳು :

* 2008ರಲ್ಲಿ ಪ್ರೇರಣಾ ಎಜುಕೇಷನಲ್ ಅಂಡ್ ಸೋಷಿಯಲ್ ಟ್ರಸ್ಟ್‌ ಮೂಲಕ ಕಾಲೇಜುಗಳನ್ನು ಸ್ಥಾಪಿಸಿ ಪಬ್ಲಿಕ್ ಸ್ಕೂಲ್, ಡಿಪ್ಲೊಮಾ, ಪಿಯುಸಿ, ಇಂಜಿನಿಯರಿಂಗ್ ಹಾಗೂ ಎಂಬಿಎ ಕಾಲೇಜುಗಳ ಮ್ಯಾನೇಜಿಂಗ್ ಟ್ರಸ್ಟಿಯಾಗಿ ಕಾರ್ಯ ನಿರ್ವಹಣೆ

* 1996ರಿಂದ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯ ಮೂಲಕ ಶಿಕಾರಿಪುರದಲ್ಲಿ ಕಾಲೇಜುಗಳನ್ನು ಆರಂಭಿಸಿ ಪ್ರಾಥಮಿಕ ಶಿಕ್ಷಣ/ ಪ್ರೌಢ ಶಿಕ್ಷಣ/ಪದವಿಪೂರ್ವ ಶಿಕ್ಷಣ/ಡಿಎಡ್ ಕಾಲೇಜು/ಬಿಎಡ್ ಕಾಲೇಜು/ನರ್ಸಿಂಗ್ ಕಾಲೇಜುಗಳ ಕಾರ್ಯದರ್ಶಿಯಾಗಿ ಸೇವೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!