spot_img
Wednesday, January 22, 2025
spot_img

ಮೂಡ್ಲಕಟ್ಟೆ ಎಂ.ಐ.ಟಿಯಲ್ಲಿ ಮೇ.1-2ರಂದು ರಾಜ್ಯಮಟ್ಟದ ‘ಸಾವಿಷ್ಕಾರ್’

ಕುಂದಾಪುರ: ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮೇ 1 ಮತ್ತು 2 ರಂದು ರಾಜ್ಯಮಟ್ಟದ ಎರಡು ದಿನಗಳ ಸಾಂಸ್ಕೃತಿಕ, ತಾಂತ್ರಿಕ ಮತ್ತು ಮ್ಯಾನೇಜ್‌ಮೆಂಟ್ ಸ್ಪರ್ಧಾಕೂಟ ‘ಸಾವಿಷ್ಕಾರ್’ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ 20 ಕ್ಕೂ ಅಧಿಕ ಅಧಿಕ ಸ್ಪರ್ಧೆಗಳು ನಡೆಯಲಿದ್ದು ರಾಜ್ಯದ ಸುಮಾರು 30 ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಕೌಶಲ್ಯತೆಯನ್ನು ಪ್ರದರ್ಶಿಸಲಿದ್ದಾರೆ. ಎಲ್ಲಾ ಸ್ಪರ್ಧೆಯ ವಿಜೇತರಿಗೆ ನಗದು ಬಹುಮಾನ, ಪ್ರಮಾಣಪತ್ರ ನೀಡಿ ಗೌರವಿಸಲಾಗುವುದು ಎಂದು ಎಂ.ಐ.ಟಿ ಕುಂದಾಪುರದ ಉಪ ಪ್ರಾಂಶುಪಾಲರಾದ ಪ್ರೊ.ಮೆಲ್ವಿನ್ ಡಿಸೋಜಾ ಹೇಳಿದರು.

ಅವರು ಎ.29ರಂದು ಕುಂದಾಪುರ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕಾರ್ಯಕ್ರಮದ ರಂಗು ಏರಿಸಲು ಎರಡೂ ದಿನ, ಪ್ರಮುಖ ಆಕರ್ಷಣೆಯಾಗಿ ವಿವಿಧ ಮನೋರಂಜನ ಕಾರ್ಯಕ್ರಮಗಳು ಜರುಗಲಿವೆ. ಮೇ.1ರ ಸಂಜೆ ಕನ್ನಡ ಸಂಗೀತ ಕ್ಷೇತ್ರದಲ್ಲಿ ರಾಪ್ ಮಾದರಿಯ ಗೀತೆಗಳನ್ನು ಪರಿಚಯಿಸಿದ ಹೆಸರಾಂತ ರಾಪರ್ ಮತ್ತು ಬಿಗ್ ಬಾಸ್ ವಿಜೇತರಾದ ಚಂದನ್ ಶೆಟ್ಟಿ ಅವರು ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ. ಹಾಗೆಯೇ ರಿಯಾಲಿಟಿ ಶೋ ನಲ್ಲಿ ಹೆಸರು ಗಳಿಸಿದ ಗಾಯಕಿ ಶಶಿಕಲಾ ಸುನಿಲ್ ಮತ್ತು ಗಾಯಕ ಧನುಷ್ ಅವರ ಸಂಗೀತಾ ಕಾರ್ಯಕ್ರಮವೂ ನಡೆಯಲಿದೆ ಎಂದರು.

ಮೇ.1ರಂದು ಬೆಳಗ್ಗೆ 10 ಗಂಟೆಗೆ ಸ್ಪರ್ಧೆಗಳು ಆರಂಭವಾಗಲಿದೆ. ಮಧ್ಯಾಹ್ನ 3.30ಕ್ಕೆ ಬೈಕ್ ಸ್ಟಂಟ್ ನಡೆಯಲಿದೆ. ಅನುಭವಿ ಮತ್ತು ತರಬೇತಿ ಪಡೆದಿರುವ ಸ್ಪಂಟ್ ಮಾಸ್ಟರಗಳು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದರು.

ಎರಡನೇ ದಿನದ ಪ್ರಮುಖ ಆಕರ್ಷಣೆಯಾಗಿ, ಸ್ಯಾಂಡಲ್ ವುಡ್ ನ ಪ್ರಸಿದ್ಧ ಗಾಯಕ, ತನ್ನ ಜಾನಪದ ಶೈಲಿಯಲ್ಲಿ ಹಾಡಿ ಪ್ರಸಿದ್ದಿ ಪಡೆದಿರುವ, ನವೀನ್ ಸಜ್ಜು ಅವರು ತಮ್ಮ ಬ್ಯಾಂಡ್ ನೊಂದಿಗೆ ಅದ್ದೂರಿ ಕಾರ್ಯಕ್ರಮ ನೀಡಲಿದ್ದಾರೆ. ಚಂದನ್ ಶೆಟ್ಟಿ ಮತ್ತು ನವೀನ್ ಸಜ್ಜು ಅವರ ಕಾರ್ಯಕ್ರಮ ಉಡುಪಿಯಲ್ಲೇ ಮೊದಲ ಬಾರಿ ನಡೆಯಲಿದ್ದು, ಬಹು ದೊಡ್ಡ ಅಕರ್ಷಣೆಯಾಗಲಿದೆ. ಆ ದಿನ ಮಧ್ಯಾಹ್ನ ೩.೩೦ಕ್ಕೆ ಆರ್.ಸಿ ಏರ್ ಶೋ ನಡೆಯಲಿದೆ ಎಂದರು.

ನೃತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದಂತ ಕೌಶಿಕ್ ಸುವರ್ಣ ಅವರ ಕಾರ್ಯಕ್ರಮ ಕೂಡ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ಧ್ವನಿವರ್ಧಕಗಳ ವ್ಯವಸ್ಥೆ ಪರಿಚಯಿಸುತ್ತಿರುವುದು ಮತ್ತೊಂದು ವಿಶೇಷವಾಗಿದೆ ಎಂದರು.

ಸಾವಿಷ್ಕಾರ್‌ನಲ್ಲಿ ಯಾವುದೇ ಪದವಿ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ. ಸುಮಾರು 1ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ.ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದರು.

ಸುದ್ಧಿಗೋಷ್ಠಿಯಲ್ಲಿ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕ ಡಾ.ರಾಮಕೃಷ್ಣ ಹೆಗಡೆ, ಕಾರ್ಯಕ್ರಮದ ಆಯೋಜಕ ಪ್ರೊ. ವರುಣ್ ಕುಮಾರ್ ಉಪಸ್ಥಿತರಿದ್ದರು.

 

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!