spot_img
Wednesday, April 1, 2026
spot_img

ಸಾಹಿತ್ಯ ಬದುಕನ್ನು ರೂಪಿಸುತ್ತದೆ : ನಿಮಿತಾ ಪ್ರಭಾಕರ ಶೆಟ್ಟಿ

ಜನಪ್ರತಿನಿಧಿ (ಉಡುಪಿ) : ಸಾಮಾನ್ಯ ವ್ಯಕ್ತಿಗಳು ಅಸಮಾನ್ಯ ಸಾಧನೆ ಮಾಡಬೇಕಾದರೆ ಸಾಹಿತ್ಯದ ಒಲವು ಅತಿ ಅಗತ್ಯ. ಇವತ್ತಿನ ಸ್ಪರ್ದಾತ್ಮಕ ಯುಗದಲ್ಲಿ ಒತ್ತಡದಿಂದ ದೂರವಾಗಲು ಸಾಹಿತ್ಯ ನಮಗೆ ಸಹಕಾರಿಯಾಗಿದೆ ಈ ನಿಟ್ಟಿನಲ್ಲಿ ಸಾಹಿತ್ಯ ನಮ್ಮ ಬದುಕನ್ನು ರೂಪಿಸುತ್ತದೆ ಎಂದು ನಿಮಿತಾ ಪ್ರಭಾಕರ ಶೆಟ್ಟಿ ಹೇಳಿದರು.

ಮಿಲಾಗ್ರಿಸ್ ಕಾಲೇಜು ಕನ್ನಡ ವಿಭಾಗ ಆಯೋಜಿಸಿದ ʼಒತ್ತಡದ ಬದುಕಿನಲ್ಲಿ ಸಾಹಿತ್ಯದ ಮಹತ್ವʼ ಎನ್ನುವ ವಿಚಾರ ಮಂಥನ ಕಾರ್ಯಕ್ರಮದಲ್ಲಿ  ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿನ್ಸೆಂಟ್ ಆಳ್ವ ವಹಿಸಿದ್ದರು.  ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಹರಿಣಾಕ್ಷಿ ಎಂ.ಡಿ ಪ್ರಸ್ತಾವಿಕ ಮಾತುಗಳನ್ನಾಡಿ, ಸರ್ವರನ್ನು ಸ್ವಾಗತಿಸಿದರು.

ಕಾಲೇಜಿನ ಐಕ್ಯೂಎಸಿ ಕೊ-ಅಡಿನೇಟರ್ ಡಾ. ಕೆ ಜಯರಾಮ ಶೆಟ್ಟಿಗಾರ್, ಕನ್ನಡ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ದ್ವಿತೀಯ ಬಿಸಿಎ ವಿದ್ಯಾರ್ಥಿನಿ ಶ್ರೀಲತಾ ಮತ್ತು ತಂಡ ಪ್ರಾರ್ಥನೆಗೈದು, ಬಿಸಿಎ ವಿದ್ಯಾರ್ಥಿನಿ ನೇಹಾ ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!