spot_img
Saturday, December 7, 2024
spot_img

ಡಾ. ಬಿ. ಬಿ. ಹೆಗ್ಡೆ ಕಾಲೇಜು: ವಿಶೇಷ ಉಪನ್ಯಾಸ : ಬದುಕಿಗೆ ಭಾವನೆಗಳ ಆವರಣ-ಹೂರಣಗಳಿರಬೇಕು : ದಾಮೋದರ ಶರ್ಮ

ಜನಪ್ರತಿನಿಧಿ (ಕುಂದಾಪುರ) : ಬದುಕು ಭಾವನೆಗಳಿಂದ ಹೊರತಾದಾಗ ಅದು ಬಂಡೆಗಲ್ಲಿನಂತಾಗುತ್ತದೆ ಹಾಗಾಗಿ ಬದುಕಿಗೆ ಭಾವನೆಗಳ ಆವರಣ-ಹೂರಣಗಳಿರಬೇಕು. ಆ ಭಾವನಾತ್ಮಕ ಬಂಧುಗಳಾದ ಹೆತ್ತ ತಾಯಿ, ಜನ್ಮಕೊಟ್ಟ ತಂದೆ, ವಿದ್ಯೆ ನೀಡಿದ ಗುರುವಿನ ನಡುವೆ ಭಾವನೆಗಳು ಬೆಸೆಯುವಂತಾದಾಗ ಜೀವನದ ಮೌಲ್ಯ ತಿಳಿಯುತ್ತದೆ ಎಂದು ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಿಂತಕ ಎನ್. ಆರ್. ದಾಮೋದರ ಶರ್ಮ ಬಾರ್ಕೂರು ಹೇಳಿದರು.

ಅವರು ಇಲ್ಲಿನ ಡಾ| ಬಿ. ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗವು ಆಯೋಜಿಸಿದ ವಿಶೇಷ ಉಪನ್ಯಾಸದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾವನಾತ್ಮಕ ಸಂಬಂಧಗಳು ವ್ಯಕ್ತಿಯನ್ನು ಸದೃಢಗೊಳಿಸುತ್ತದೆ. ಮನುಷ್ಯನಿಗೆ ಅಂತಹ ಸಂಬಂಧಗಳು ಮುಖ್ಯ ಎಂದರು.

ಉಪಾಪ್ರಾಂಶುಪಾಲರು ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿದರು. ಕನ್ನಡ ವಿಭಾಗದ ಪ್ರಾಧ್ಯಾಪಕರಾದ ರೇವತಿ ಕುಲಾಲ್ ಅತಿಥಿಗಳನ್ನು ಪರಿಚಯಿಸಿ, ಸುಕುಮಾರ್ ಶೆಟ್ಟಿ ಕಮಲಶಿಲೆ ವಂದಿಸಿ, ರೇಷ್ಮಾ ಶೆಟ್ಟಿ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!