spot_img
Wednesday, April 1, 2026
spot_img

ದೇಶಭಕ್ತರು ಎಂದು ಕರೆಸಿಕೊಳ್ಳುವ ಬಿಜೆಪಿಗರು ಜಾತಿ ಗಣತಿಯ ‘ಎಕ್ಸ್-ರೇ’ಗೆ ಹೆದರುತ್ತಾರೆ : ರಾಗಾ

ಜನಪ್ರತಿನಿಧಿ (ನವದೆಹಲಿ) : ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತೀಯ ಜನತಾ ಪಕ್ಷ (BJP) ವಿರುದ್ಧ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದು, ತಮ್ಮನ್ನು ದೇಶಭಕ್ತರೆಂದು ಕರೆದುಕೊಳ್ಳುವವರು ಶೇ. 90ರಷ್ಟು ಜನರಿಗೆ ‘ನ್ಯಾಯ’ ಕೊಡಿಸುತ್ತಿಲ್ಲ. ಆದರೆ ಅವರು ಜಾತಿ ಆಧಾರಿತ ಜನಗಣತಿಯನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ರಾಗಾ ಹೇಳಿದ್ದಾರೆ.

‘ಸಮೃದ್ಧ ಭಾರತ’ ಎಂಬ ಸಂಘಟನೆಯು ಆಯೋಜಿಸಿದ್ದ ಸಾಮಾಜಿಕ ನ್ಯಾಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ದೇಶದ ಶೇ.90 ರಷ್ಟು ಜನರಿಗೆ ನ್ಯಾಯ ಕೊಡಿಸುವದು ‘ನನ್ನ ಜೀವನದ ಧ್ಯೇಯವಾಗಿದೆ’. ಇಂದು ಭಾರತದಲ್ಲಿ ಶೇ.90 ರಷ್ಟು ಜನರು ಭೀಕರ ಅನ್ಯಾಯವನ್ನು ಎದುರಿಸುತ್ತಿದ್ದಾರೆ. ಇದರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತೇವೆ ಎಂದು ನಾನು ಹೇಳಿಲ್ಲ, ಎಷ್ಟು ಅನ್ಯಾಯವಾಗಿದೆ ಎಂಬುದನ್ನು ಪತ್ತೆ ಹಚ್ಚುತ್ತೇವೆ ಎಂದಿದ್ದಲ್ಲದೇ, ಕಾಂಗ್ರೆಸ್ ಪಕ್ಷದ ಕ್ರಾಂತಿಕಾರಿ ಪ್ರಣಾಳಿಕೆಯಿಂದ ಪ್ರಧಾನಿ ಮೋದಿ ಭಯಗೊಂಡಿದ್ದಾರೆ ಎಂದು ರಾಗಾ ಹೇಳಿದ್ದಾರೆ.

ಎಷ್ಟು ಅನ್ಯಾಯವಾಗಿದೆ ಎಂದು ತಿಳಿದುಕೊಳ್ಳೋಣ ಎಂದು ಸುಮ್ಮನೆ ಹೇಳಿದಾಗ ಅವರೆಲ್ಲ ಎದ್ದು ನಿಂತು ದೇಶ ಒಡೆಯುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿದರು. ಆದರೆ ಜನಗಣತಿ ಎಂಬ X-ray ಮಾಡೋಣ. ಅದರಿಂದ ಎಷ್ಟು ಜನರಿಗೆ ಅನ್ಯಾಯವಾಗಿದೆ ಎಂದು ತಿಳಿಯುತ್ತದೆ ಎಂದು ರಾಹುಲ್ ಗಾಂಧಿ ಹೇಳಿದರು.

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಜಾತಿ ಆಧಾರಿತ ಜನಗಣತಿಯನ್ನು ಯಾವುದೇ ಶಕ್ತಿ ತಡೆಯಲು ಸಾಧ್ಯವಿಲ್ಲ. ಏಕೆಂದರೆ ಭಾರತದ 90 ಪ್ರತಿಶತ ಜನರು ಇದನ್ನು ಅರ್ಥಮಾಡಿಕೊಂಡಿದ್ದಾರೆ ಎಂದರು.

ಬಿಜೆಪಿಯನ್ನು ಟಾರ್ಗೆಟ್ ಮಾಡಿದ ರಾಗಾ, ಎಲ್ಲಾ ದೇಶಪ್ರೇಮಿಗಳು ಇದನ್ನು ಇಷ್ಟಪಡಬೇಕು. ಒಬ್ಬ ದೇಶಪ್ರೇಮಿ ನ್ಯಾಯವನ್ನು ಬಯಸುತ್ತಾನೆ ಹೊರತು ಅನ್ಯಾಯವನ್ನು ಬಯಸುವುದಿಲ್ಲ ಎಂದು ಹೇಳಿದರು.

ಬಿಜೆಪಿಯ ಜನರು ತಮ್ಮನ್ನು ದೇಶಭಕ್ತರೆಂದು ಕರೆದುಕೊಳ್ಳುತ್ತಾರೆ. ಆದರೆ ಜಾತಿ ಗಣತಿಯ ‘ಎಕ್ಸ್-ರೇ’ಗೆ ಹೆದರುತ್ತಾರೆ ಎಂದು ಕಾಂಗ್ರೆಸ್ ನಾಯಕ ವ್ಯಂಗ್ಯವಾಡಿದರು. ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ಮೋದಿ 10 ವರ್ಷಗಳ ಹಿಂದೆ ದೇಶಕ್ಕೆ ತಾನು ಒಬಿಸಿ ಎಂದು ಹೇಳಿದ್ದರು. ಜಾತಿ ಆಧಾರಿತ ಜನಗಣತಿ ಮತ್ತು ಎಕ್ಸ್ ರೇ ಬಗ್ಗೆ ಮಾತನಾಡಿದ ತಕ್ಷಣ ನರೇಂದ್ರ ಮೋದಿಯವರು ಜಾತಿ ಇಲ್ಲ ಎಂದು ಹೇಳಿದರು. ಜಾತಿ ಇಲ್ಲ ಎಂದಾದರೆ ಒಬಿಸಿ ಹೇಗೆ? ನನಗೆ ಜಾತಿ ಇಲ್ಲ ಎಂದು ಆ ಕ್ಷಣವೇ ನೀನು ಹೇಳಬೇಕಿತ್ತು ಎಂದು ಹೇಳಬೇಕಿತ್ತು ಎಂದು ಸವಾಲು ಹಾಕಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!