spot_img
Friday, January 17, 2025
spot_img

ಬರ ಪರಿಹಾರ : ಮೋದಿ, ಶಾ, ನಿರ್ಮಲಾ ಸೀತಾರಾಮನ್‌ ಸುಳ್ಳು ಹೇಳುತ್ತಿದ್ದಾರೆ : ಸಿಎಂ ಸಿದ್ದರಾಮಯ್ಯ

ಜನಪ್ರತಿನಿಧಿ (ಬೆಂಗಳೂರು) : ಕೇಂದ್ರ ಸರ್ಕಾರ ರಾಜ್ಯದ ಜನತೆಗೆ ಅದರಲ್ಲೂ ರೈತ ವರ್ಗಕ್ಕೆ ಅನ್ಯಾಯ ಮಾಡುತ್ತಿದೆ. ಕರ್ನಾಟಕ ರಾಜ್ಯಕ್ಕೆ ಬರ ಪರಿಹಾರ ಹಣ ಬಿಡುಗಡೆ ಮಾಡಲು ವಿಳಂಬ ಧೋರಣೆ ತಳೆಯುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರ ವಿರುದ್ಧ ಇಂದು (ಮಂಗಳವಾರ) ವಿಧಾನಸೌಧದ ಎದುರು ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ಬಳಿಕೆ ಮಾಧ್ಯಮದ ವರದಿಗಾರರಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ಕರ್ನಾಟಕ ಬಗ್ಗೆ ಮಲತಾಯಿ ಧೋರಣೆ ಮಾಡುತ್ತಿದೆ. ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಕರ್ನಾಟಕವನ್ನು ದ್ವೇಷ ಮಾಡುತ್ತಾರೆ. ಕರ್ನಾಟಕದ ರೈತರನ್ನು ದ್ವೇಷಿಸುತ್ತಾರೆ. ಕರ್ನಾಟಕಕ್ಕೆ ನ್ಯಾಯ ಕೊಡಿ ಎಂದು ಕೇಳಿದಾಗ ಕೇಂದ್ರ ಸರ್ಕಾರ ಸ್ಪಂದಿಸದೇ ಸುಮ್ಮನೆ ಉಳಿದಿದೆ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ ಹಾಗೂ ಕೇಂದ್ರದ ವಿತ್ತ ಸಚಿವೆ ನಮಗೆ ನ್ಯಾಯ ಕೊಡುವ ವಿಚಾರದಲ್ಲಿ ಎಂದೂ ಸ್ಪಂದನೆ ನೀಡಿಲ್ಲ. ಈ ಕಾರಣಕ್ಕೆ ನಾವು ಪ್ರತಿಭಟನೆ ಮಾಡಿದ್ದೇವೆ. ಈ ಪ್ರತಿಭಟನೆಯ ಮೂಲಕ ಕೇಂದ್ರ ಸರ್ಕಾರ ನಮಗೆ ತಾರತಮ್‌ಯ ಮಾಡುತ್ತಿದೆ ಎಂದು ಹೇಳಿ ರಾಜ್ಯದ ಜನರ ಗಮನವನ್ನು, ದೇಶದ ಜನರ ಗಮನವನ್ನು ಸೆಳೆಯುವಂತಹ ಪ್ರಯತ್ನವನ್ನು ಮಾಡಿದ್ದೇವೆ ಎಂದಿದ್ದಾರೆ.

ಸಪ್ಟೆಂಬರ್‌ ತಿಂಗಳಲ್ಲೇ ರಾಜ್ಯದಲ್ಲಿನ ಬರಗಾಲದ ಬಗ್ಗೆ ಮೆಮರಂಡಮ್‌ ನೀಡಿದ್ದೇವೆ. ಆ ಬಳಿಕೆ ಕೇಂದ್ರದ ತಂಡ ನಾಲ್ಕು ದಿನಗಳ ಕಾಲ ಪರಿಶೀಲನೆ ಮಾಡಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಈ ಬಗ್ಗೆ ಸಚಿವರಾದ ಕೃಷ್ಣ ಬೈರೇಗೌಡ, ಚಲುವರಾಯ ಸ್ವಾಮಿ, ಪ್ರಿಯಾಂಕ್‌ ಖರ್ಗೆ ಸಂಬಂಧಪಟ್ಟಂತಹ ಮಂತ್ರಿಗಳನ್ನು ಭೇಟಿ ಮಾಡಿ ಕರ್ನಾಟಕ ಎದುರಿಸುತ್ತಿರುವ ಬರಗಾಲದ ಬಗ್ಗೆ ವಿವರಿಸಿದ್ದಾರೆ. ಕರ್ನಾಟಕದಲ್ಲಿ ಭೀಕರವಾದ ಬರಗಾಲವಿದೆ. 240 ತಾಲೂಕುಗಳಲ್ಲಿ 223 ತಾಲೂಕುಗಳನ್ನು ಬರಗಾಲ ಪೀಡಿತ  ತಾಲೂಕುಗಳೆಂದು ಘೋಷಣೆ ಮಾಡಿದ್ದೇವೆ. ನೂರು ವರ್ಷಗಳ ನಂತರ ಇಂತಹ ಭೀಕರ ಬರಗಾಲವನ್ನು ನಾವು ಎದುರಿಸುತ್ತಿದ್ದೇವೆ ಎಂದು ವಿವರಿಸಿದ್ದಾರೆ.

ಸಪ್ಟೆಂಬರ್‌ನಲ್ಲೇ ನಾವು ಮೆಮರಂಡಮ್‌ ಕೊಟ್ಟಿದ್ದರೂ ಕೂಡ ನಾವು ಮೆಮರಂಡಮ್‌ ಅನ್ನು ವಿಳಂಬ ಮಾಡಿ ಕೊಟ್ಟಿದ್ದೇವು ಎಂದು ಅಮಿತ್‌ ಶಾ ಸುಳ್ಳು ಹೇಳಿದ್ದಾರೆ. ನಿರ್ಮಲಾ ಸೀತಾರಾಮ್‌ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಣ ಕೇಳುತ್ತಿದ್ದಾರೆ, ಬರಗಾಲಕ್ಕೆ ಹಣ ಕೇಳುತ್ತಿಲ್ಲ ಎಂದು ಹೇಳಿದ್ದಾರೆ. ಇಬ್ಬರೂ ಹಸಿ ಸುಳ್ಳು ಹೇಳಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ನಮ್ಮ ಸರ್ಕಾರ ನಮ್ಮ ಗ್ಯಾರಂಟಿ ಯೋಜನೆಗಳಿಗೆ ಒಂದು ಪೈಸೆಯನ್ನೂ ಕೇಂದ್ರ ಸರ್ಕಾರದಿಂದ ಕೇಳಿಲ್ಲ. ಕೇಂದ್ರ ಸರ್ಕಾರದಿಂದ ಗ್ಯಾರಂಟಿ ಯೋಜನೆಗಳಿಗೆ ಹಣ ಬೇಕಾಗಿಯೂ ಇಲ್ಲ. ನಾವು ನಮ್ಮ ಗ್ಯಾರಂಟಿ ಯೋಜನೆಗಳಿಗೆ ನಮ್ಮ ಸಂಪನ್ಮೂಲಗಳಿಂದಲೇ ಹಣವನ್ನು ಭರಿಸಿದ್ದೇವೆ. ೩೬ ಸಾವಿರ ಕೋಟಿ ಹಣವನ್ನು 2023-24 ನೇ ಸಾಲಿನ ವರ್ಷಕ್ಕೆಂದು ಇಟ್ಟಿದ್ದೇವೆ. 2024-25 ಸಾಲಿನ ವರ್ಷಕ್ಕೆ 52,009 ಕೋಟಿ ರೂಗಳನ್ನು ಇಟ್ಟಿದ್ದೇವೆ ಎಂದು ಅವರು ಹೇಳಿದ್ದಾರೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!