spot_img
Saturday, December 7, 2024
spot_img

ಈ ಜನ್ಮದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಲ್ಲ | ಬಿಜೆಪಿಯಿಂದ ನನ್ನ ಉಚ್ಛಾಟನೆ ತಾತ್ಕಾಲಿಕ : ಈಶ್ವರಪ್ಪ

ಜನಪ್ರತಿನಿಧಿ (ಶಿವಮೊಗ್ಗ) :  ಗೆದ್ದ ಬಳಿಕ ನಾನೇ ಬಿಜೆಪಿಗೆ ಸೇರುತ್ತೇನೆ. ಬಿಜೆಪಿಯಿಂದ ನನ್ನ ಉಚ್ಛಾಟನೆ ತಾತ್ಕಾಲಿಕವಾಗಿದ್ದು ನಾನು ಗೆದ್ದ ಬಳಿಕ ಪಕ್ಷಕ್ಕೆ ಬೇಡ ಎಂದರೂ ಕರೆದುಕೊಳ್ತಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಂಡಾಯ ಅಭ್ಯರ್ಥಿ ಕೆಎಸ್ ಈಶ್ವರಪ್ಪ ಅವರು ಹೇಳಿದ್ದಾರೆ.

ಅವರು ಇಂದು(ಮಂಗಳವಾರ) ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಬಿಜೆಪಿಯಿಂದ ನನ್ನ ಉಚ್ಛಾಟನೆ ತಾತ್ಕಾಲಿಕ. ತಾತ್ಕಾಲಿಕವಾಗಿ ಬಿಜೆಪಿಯಿಂದ ಹೊರಗಿದ್ದೇನೆ. ಕೆಲವರ ಕುತಂತ್ರದಿಂದಾಗಿ ಹೊರಗಿದ್ದೇನೆ. ನಾನು ಯಾವುದೇ ಕಾರಣಕ್ಕೂ, ಈ ಜನ್ಮದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರುವುದಿಲ್ಲ. ಬಿಜೆಪಿ ನನ್ನ ತಾಯಿ, ಬಿಜೆಪಿ ಬಿಟ್ಟು ಎಲ್ಲೂ ಹೋಗುವುದಿಲ್ಲ. ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಈ ಬಾರಿ ಚುನಾವಣೆಯಲ್ಲಿ ನಾನು ಗೆಲ್ಲುವುದು ಖಚಿತ. ಆ ಮೇಲೆ ಬಿಜೆಪಿಗೆ ಬೇಡ ಎಂದರೂ ಕರೆದುಕೊಳ್ತಾರೆ. ನಾನೇ ಬಿಜೆಪಿಗೆ ಸೇರುತ್ತೇನೆ ಮತ್ತು ನರೇಂದ್ರ ಮೋದಿಯವರ ಪರವಾಗಿ ಕೈ ಎತ್ತುತ್ತೇನೆ ಎಂದು ಅವರು ಹೇಳಿದರು.

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪಕ್ಷ ಬಿಟ್ಟು ಹೋಗಿ ಕಾಂಗ್ರೆಸ್ ಸೇರ್ಪಡೆಗೊಂಡರು. ನಾನು ಎಂದು ಕೂಡ ಬಿಜೆಪಿ ಬಿಟ್ಟು ಹೋದವನಲ್ಲ. ಕಾಂಗ್ರೆಸ್ ಗೆ ನನ್ನ ಜನ್ಮದಲ್ಲಿ ಸೇರ್ಪಡೆಗೊಳ್ಳುವುದಿಲ್ಲ. ನನ್ನ ತಾಯಿ ಭಾರತೀಯ ಜನತಾ ಪಾರ್ಟಿ ಎಂದು ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಈಶ್ವರಪ್ಪ ಮುನಿಸು ಮತ್ತು ಬಿಜೆಪಿಯಿಂದ ಉಚ್ಛಾಟನೆ :

ಇನ್ನು, ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಹೈಕಮಾಂಡ್ ನಾಯಕರು ಈಶ್ವರಪ್ಪ ಅವರನ್ನು ಸಂಪರ್ಕಿಸಿ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು. ಹೈಕಮಾಂಡ್ ಸೂಚನೆಗೆ ಒಪ್ಪಿಗೆ ಸೂಚಿಸಿದ್ದ ಮಾಜಿ ಉಪಮುಖ್ಯಮಂತ್ರಿ ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದರು. ಟಿಕೆಟ್ ಸಿಗದ್ದಕ್ಕೆ ಅಸಮಾಧಾನದಿಂದ ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿ ಮೊದಲಾದವರು ಕಾಂಗ್ರೆಸ್ ಸೇರ್ಪಡೆಗೊಂಡರೆ ಮಾಜಿ ಮುಖ್ಯಮಂತ್ರಿ ಈಶ್ವರಪ್ಪ ಅವರು ಬಿಜೆಪಿಯಲ್ಲೇ ಉಳಿದುಕೊಂಡು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದರು. ರಾಜ್ಯ ಬಿಜೆಪಿಯನ್ನು ಶುದ್ಧೀಕರಿಸಬೇಕು ಎಂದು ಬಹಿರಂಗವಾಗಿ ಹೇಳಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಹಾಗೂ ಅವರ ಪತ್ರರುಗಳಾದ ಬಿ. ವೈ ವಿಜಯೇಂದ್ರ ಹಾಗೂ ಬಿ. ವೈ ರಾಘವೇಂದ್ರ ವಿರುದ್ಧ ಬಹರಿಂಗ ಪ್ರಚಾರ ಸಭೆಗಳಲ್ಲಿ ವೈಯಕ್ತಿಕ ಟೀಕೆ ಮಾಡಿದ್ದರು. ಯಡಿಯೂರಪ್ಪ ಅವರಿಗೆ ಬಕೇಟ್‌ ಹಿಡಿಯುವವರಿಗೆ ಟಿಕೇಟ್‌ ನೀಡಲಾಗಿದೆ ಎಂದು ತಮ್ಮದೇ ಪಕ್ಷದ ನಾಯಕರಾದ ಯಡಿಯೂರಪ್ಪ ಅವರ ವಿರುದ್ಧ ಹರಿಹಾಯ್ದಿದ್ದರು.

ಈ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪುತ್ರ ಕಾಂತೇಶ್ ಗೆ ಹಾವೇರಿ ಲೋಕಸಭೆಯಿಂದ ಬಿಜೆಪಿ ಟೆಕೆಟ್ ಕೊಡಿಸಲು ಈಶ್ವರಪ್ಪ ಇನ್ನಿಲ್ಲದ ಪ್ರಯತ್ನ ನಡೆಸಿದ್ದರು. ಆದರೆ ಹೈಕಮಾಂಡ್ ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರ ಶಿಫಾರಸ್ಸಿನ ಮೇರೆಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಟಿಕೆಟ್ ನೀಡಿದ್ದಕ್ಕೆ ಅಸಮಾಧಾನಗೊಂಡು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಬಿಜೆಪಿ ಮತ್ತು ಜೆಡಿಎಸ್‌ ಅಭ್ಯರ್ಥಿ ಬಿ.ವೈ ರಾಘವೇಂದ್ರ ವಿರುದ್ಧ ಕಣಕ್ಕಿಳಿದಿದ್ದಾರೆ. ಬಿ. ವೈ ರಾಘವೇಂದ್ರ ವಿರುದ್ಧ ಕ್ಷೇತ್ರದಿಂದ ಗೆಲ್ಲುತ್ತೇನೆ ಎಂದು ಈಶ್ವರಪ್ಪ ವಿಶ್ವಾಸದಲ್ಲಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ನನ್ನ ಮಗನಿಗೆ ಟಿಕೆಟ್ ಕೊಟ್ಟು ಪ್ರಚಾರ ಮಾಡಿ ಗೆಲ್ಲಿಸುವುದಾಗಿ ಮಾತು ಕೊಟ್ಟಿದ್ದರು. ಈದರೆ ಈಗ ಉದ್ದೇಶಪೂರ್ವಕವಾಗಿ ನನ್ನನ್ನು ಮೂಲೆಗುಂಪು ಮಾಡಲು ಪ್ರಯತ್ನಿಸಿದ್ದಾರೆ ಎಂದು ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೆ ಬಿಜೆಪಿಯ ಪ್ರಮುಖ ನಾಯಕರು ಮಾತುಕತೆಗೆ ಪ್ರಯತ್ನ ಪಟ್ಟರೂ ಈಶ್ವರಪ್ಪ ಅವರು ಕ್ಯಾರೇ ಅಂದಿಲ್ಲ. ಅಮಿತ್ ಶಾ ಅವರು ದಿಲ್ಲಿಗೆ ಕರೆಸಿ ಮಾತುಕತೆ ನಡೆಸದೆ ಹಿಂದಕ್ಕೆ ಕಳಿಸಿದರು. ಈ ಹಂತದಲ್ಲಿ ನನ್ನ ಸ್ಪರ್ಧೆ ಖಚಿತ ಎಂದಿರುವ ಈಶ್ವರಪ್ಪ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ನಿನ್ನೆ(ಸೋಮವಾರ) ಸಂಜೆಯವರೆಗೂ ಕಾದು ನೋಡುವ ತಂತ್ರವನ್ನು ಬಳಸಿದ್ದ ಬಿಜೆಪಿ ಅಂತಿಮವಾಗಿ ಈಶ್ವರಪ್ಪ ಅವರನ್ನು 6 ವರ್ಷಕ್ಕೆ ಪಕ್ಷದಿಂದ ಉಚ್ಚಾಟನೆ ಮಾಡಿ ಘೋಷಣೆ ಮಾಡಿದೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!