spot_img
Saturday, December 7, 2024
spot_img

ಅಣ್ಣಾಮಲೈ ತನ್ನ ಬದುಕಿನಲ್ಲಿ ಐಡೆಂಟಿಟಿ ಪಡೆದದ್ದು ಕರ್ನಾಟಕದಲ್ಲಾ ಪಾಕಿಸ್ತಾನದಲ್ಲಾ? : ಪ್ರಿಯಾಂಕ್‌ ಖರ್ಗೆ ಆಕ್ರೋಶ

ಜನಪ್ರತಿನಿಧಿ (ಬೆಂಗಳೂರು) : ಕರ್ನಾಟಕ ಪಾಕಿಸ್ತಾನದ ರೀತಿಯಂತೆ. ಬಿಜೆಪಿ ಹಾಗೂ ಅದರ ಮಿತ್ರರು ಕನ್ನಡಿಗರಿಗೆ ಇನ್ನೆಷ್ಟು ಅವಮಾನ ಮಾಡಲು ಯೋಜಿಸಿದ್ದಾರೆ? ಕರ್ನಾಟಕದ ಮಹಿಳೆಯರನ್ನು ದಾರಿ ತಪ್ಪಿದವರು ಎಂದಾಯ್ತು, ಕನ್ನಡಿಗರನ್ನು ಕುಡುಕರು ಎಂದಾಯ್ತು, ಈಗ ಕನ್ನಡಿಗರು ಪಾಕಿಸ್ತಾನಿಗಳಂತೆ. ಕನ್ನಡಿಗರು ಹಾಗೂ ಕರ್ನಾಟಕವನ್ನು ಅವಮಾನಿಸುವುದು ಬಿಜೆಪಿಗೆ ಸುಲಭದ ಚಟವಾಗಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಇತ್ತೀಚೆಗೆ ಇಂಗ್ಲೀಷ್‌ ಸುದ್ದಿ ಸಂಸ್ಥೆಯೊಂದರ ಸಂದರ್ಶನದಲ್ಲಿ ಕರ್ನಾಟಕವನ್ನು ಪಾಕಿಸ್ತಾನಕ್ಕೆ ಹೋಲಿಸಿ ಮಾತನಾಡಿದ್ದರು. ಆ ವೀಡಿಯೋ ತುಣುಕನ್ನು ಉಲ್ಲೇಳಿಸಿ ಅಣ್ಣಾಮಲೈ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ ಪ್ರಿಯಾಂಕ್‌ ಖರ್ಗೆ, ಬಿಜೆಪಿಯ ಅಣ್ಣಾಮಲೈ ಅವರು ಕರ್ನಾಟಕವನ್ನು ಪಾಕಿಸ್ತಾನಕ್ಕೆ ಹೋಲಿಸಿ ಘೋರ ಅವಮಾನ ಮಾಡಿದ್ದಾರೆ, ಅಣ್ಣಾಮಲೈ ತಮ್ಮ ವೃತ್ತಿ ಬದುಕನ್ನು ರೂಪಿಸಿಕೊಂಡಿದ್ದು ಕರ್ನಾಟಕದಲ್ಲಾ, ಪಾಕಿಸ್ತಾನದಲ್ಲಾ? ಅನ್ನ ತಿಂದು, ನೀರು ಕುಡಿದು, ಸಂಬಳ ಪಡೆದು ಬದುಕಿದ್ದು ಕರ್ನಾಟಕದಲ್ಲಾ, ಪಾಕಿಸ್ತಾನದಲ್ಲಾ?  ಈ ಅಣ್ಣಾಮಲೈ ತನ್ನ ಬದುಕಿನಲ್ಲಿ ಐಡೆಂಟಿಟಿ ಪಡೆದದ್ದು ಕರ್ನಾಟಕದಲ್ಲಾ ಪಾಕಿಸ್ತಾನದಲ್ಲಾ? ಎಂದು ಪ್ರಶ್ನೆಗಳ ಸುರಿಮಳೆಯ ಮೂಲಕ ಕಿಡಿ ಕಾರಿದ್ದಾರೆ.

ಈ ಬಗ್ಗೆ ರಾಜ್ಯ ಬಿಜೆಪಿ  ನಾಯಕರು ಉತ್ತರಿಸಬೇಕು ಎಂದು ಖರ್ಗೆ ಆಗ್ರಹಿಸಿದ್ದಲ್ಲದೇ, ಕನ್ನಡಿಗರು ಬೆವರು ಸುರಿಸಿ ಕಟ್ಟಿದ ತೆರಿಗೆಯ ಹಕ್ಕನ್ನು ಕೇಂದ್ರದಿಂದ ಕೇಳುತ್ತಿದ್ದಾರೆಯೇ ಹೊರತು ಬಿಕ್ಷೆಯನ್ನಲ್ಲ, ಕರ್ನಾಟಕ ತೆರಿಗೆ ಸಂಗ್ರಹದಲ್ಲಿ 2ನೇ ಅತಿ ದೊಡ್ಡ ರಾಜ್ಯ. ಕನ್ನಡಿಗರ ಬೆವರಿನ ಹಣದಲ್ಲಿ ಕೇಂದ್ರ ಸರ್ಕಾರ ನಡೆಯುತ್ತಿದೆಯೇ ಹೊರತು ಒಕ್ಕೂಟ ಸರ್ಕಾರದ ಬಿಕ್ಷೆಯಲ್ಲಿ ಕನ್ನಡಿಗರು ಬದುಕುತ್ತಿಲ್ಲ ಎಂದು ಹೇಳಿದ್ದಾರೆ.

ಇನ್ನು, ತಮ್ಮ ಹಕ್ಕನ್ನು ಕೇಳುವ ಕನ್ನಡಿಗರನ್ನು ಪಾಕಿಸ್ತಾನಕ್ಕೆ ಹೋಲಿಸುವ ಬಿಜೆಪಿಯನ್ನು ಕನ್ನಡಿಗರು ತಿರಸ್ಕರಿಸುವುದು ನಿಶ್ಚಿತ, ಇಲ್ಲಿ ತಿರಸ್ಕಾರಗೊಂಡವರು ತಮ್ಮ ಪ್ರೀತಿಯ ಪಾಕಿಸ್ತಾನಕ್ಕೆ ಹೋಗಿ ರಾಜಕಾರಣ ಮಾಡಲಿ! ಎಂದು ವ್ಯಂಗ್ಯವಾಡಿದ್ದಾರೆ.
https://x.com/PriyankKharge/status/1782316914192294272

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!