spot_img
Saturday, December 7, 2024
spot_img

ನಮ್ಮ ಸರ್ಕಾರದ ಆದ್ಯತೆ ಸಂಶೋಧನೆ, ಕಲಿಕೆ ಹಾಗೂ ನಾವಿನ್ಯತೆ : ಪ್ರಧಾನಿ ಮೋದಿ

ಜನಪ್ರತಿನಿಧಿ (ನವ ದೆಹಲಿ) : ನಮ್ಮ ಸರ್ಕಾರ ಸಂಶೋಧನೆ, ಕಲಿಕೆ ಹಾಗೂ ನಾವಿನ್ಯತೆಗೆ ಪ್ರಮುಖ ಆಧ್ಯತೆ ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಲಂಡನ್‌ ಮೂಲದ ಉನ್ನತ ಶಿಕ್ಷಣ ವಿಶ್ಲೇಷಣಾ ಸಂಸ್ಥೆ ಕ್ವಾಕ್ವೇರೆಲ್ಲಿ ಸೈಮಂಡ್ಸ್‌ (ಕ್ಯೂಸ್)‌ ಅಧ್ಯಕ್ಷ ನಂಝೀಯೋ ಕ್ವಾಕ್ವೇರೆಲ್ಲಿ, ಭಾರತದ ವಿಶ್ವವಿದ್ಯಾನಿಲಯಗಳಲ್ಲಿನ ಕಾರ್ಯಕ್ಷಮತೆಯನ್ನು ಗಣನೀಯ ಸುಧಾರಣೆ ಬಗ್ಗೆ ಪ್ರಶಂಸಿಸಿದ ಬೆನ್ನಿಗೆ ಪ್ರಧಾನಿ ಮೋದಿ ಈ ಬಗ್ಗೆ ಪ್ರತಿಕಿಯೆ ನೀಡಿದ್ದಾರೆ.

ಈ ವರ್ಷ ಎಲ್ಲಾ ಜಿ ಟ್ವೆಂಟಿ ರಾಷ್ಟ್ರಗಳ ಪೈಕಿ ಭಾರತೀಯ ವಿಶ್ವವಿದ್ಯಾನಿಲಯಗಳು ಅತ್ಯಧಿಕ ಕಾರ್ಯಕ್ಷಮತೆಯ ಸುಧಾರಣೆ ಕಂಡಿವೆ. ವರ್ಷದಿಂದ ವರ್ಷಕ್ಕೆ ಸರಾಸರಿ ರ್ಯಾಂಕಿಂಗ್‌ನಲ್ಲಿ ಶೇ.14 ರಷ್ಟು ಸುಧಾರಣೆ ಸಾಧಿಸಿವೆ ಎಂದು ಕ್ವಾಕ್ವೇರೆಲ್ಲಿ ತಿಳಿಸಿದ್ದಾರೆ.

ಈ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಮೋದಿ, ʼಇದು ನಿಜಕ್ಕೂ ಹುರಿದುಂಬಿಸುತ್ತಿದೆ. ನಮ್ಮ ಸರ್ಕಾರ ಸಂಶೋಧನೆ, ಕಲಿಕೆ ಹಾಗೂ ನಾವಿನ್ಯತೆಗಳ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸುತ್ತಿದೆ. ಇದರಿಂದ ನಮ್ಮ ಯುವಶಕ್ತಿಗೆ ಪ್ರಯೋಜನವಾಗಲಿದೆ ಎಂದು ಅವರು ಹೇಳಿದ್ದಾರೆ.

ದೇಶದ ವಿಶ್ವವಿದ್ಯಾನಿಲಯಗಳ ಪೈಕಿ ಜವಾಹರಲಾಲ್‌ ನೆಹರು ವಿಶ್ವವಿದ್ಯಾನಿಲಯ (ಜೆಎನ್‌ಯು) ಅತ್ಯುತ್ತಮ ಶ್ರೇಣಿಯ ವಿಶ್ವವಿದ್ಯಾನಿಯವಾಗಿ ಹೊರಹೊಮ್ಮಿದೆ. ಅಭಿವೃಧ್ಧೊ ಅಧ್ಯಯನದಲ್ಲಿ ಜೆಎನ್‌ಯು ಜಾಗತಿಕವಾಗಿ ಇಪ್ಪತ್ತನೇ ಸ್ಥಾನ ಪಡೆದಿದೆ.

ಬ್ಯುಸಿನೆಸ್‌ ಮತ್ತು ಮ್ಯಾನೇಜ್‌ಮೆಂಟ್‌ ಸ್ಟಡೀಸ್‌ನಲ್ಲಿ ಐಐಎಂ ಅಹಮದಾಬಾದ್‌ ಜಾಗತಿಕವಾಗಿ ಟಾಪ್‌ 25ರಲ್ಲಿ ಹಾಗೂ ಐಐಎಂ ಬೆಂಗಳೂರು ಹಾಗೂ ಐಐಎಂ ಕಲ್ಕತ್ತ ಟಾಪ್‌ ೫೦ರಲ್ಲಿ ಸ್ಥಾನ ಪಡೆದಿದೆ.
https://x.com/narendramodi/status/1782606466727419967

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!