Saturday, October 12, 2024

ಚುನಾವಣೆ ಸಂದರ್ಭ ನಿಷೇಧಾಜ್ಞೆ ರದ್ದು ಕೋರಿ ಅರ್ಜಿ : ವಿಚಾರಣೆಗೆ ‘ಸುಪ್ರೀಂ’ ಅಸ್ತು

ಜನಪ್ರತಿನಿಧಿ (ನವ ದೆಹಲಿ) : ಚುನಾವಣಾ ಕಾರಣದಿಂದ ಸಿಆರ್‌ಪಿಸಿ ಸೆಕ್ಷನ್‌ 144 ಅಡಿಯಲ್ಲಿ ಹೇರಲಾಗುವ ನಿಷೇಧಾಜ್ಙೆಯನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಸಿಕೆಯಾಗಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಇಂದು(ಶುಕ್ರವಾರ) ಒಪ್ಪಿಗೆ ಕೊಟ್ಟಿದೆ.

ನ್ಯಾಯಮೂರ್ತಿಗಳಾದ ಬಿ.ಆರ್‌ ಗವಾಯಿ ಹಾಗೂ ಸಂದೀಪ್‌ ಮೆಹ್ತಾ ಅವರನ್ನು ಒಳಗೊಂಡು ಸುಪ್ರೀಂ ಕೋರ್ಟ್‌ ನ್ಯಾಯ ಪೀಠ, ʼಚುನಾವಣೆ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ರ್ಯಾಲಿ ಅಥವಾ ಸಾರ್ವಜನಿಕ ಸಭೆಗಳನ್ನು ನಡೆಸಲು ಅನುಮತಿ ನೀಡುವಂತೆ ಅರ್ಜಿ ಸಲ್ಲಿಕೆಯಾದ ಮೂರು ದಿನಗಳ ಒಳಗಾಗಿ ಸಂಬಂಧಿಸಿದ ಅಧಿಕಾರಿಗಳು ತೀರ್ಮಾನ ಕೈಗೊಳ್ಳಬೇಕೆಂದು ನಿರ್ದೇಶನ ನೀಡಿದೆ.

ಸಾಮಾಜಿಕ ಕಾರ್ಯಕರ್ತ ಅರುಣ್‌ ರಾಯ್‌ ಹಾಗೂ ನಿಖಿಲ್‌ ಡೇ, ಪ್ರತಿ ಲೋಕಸಭಾ ಅಥವಾ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಫಲಿತಾಂಶ ಘೋಷಣೆಯಾಗುವವರೆಗೆ ಸಭೆ, ಸಮಾರಂಭ, ರ್ಯಾಲಿ ಅಥವಾ ಧರಣಿಗಳಿಗೆ ರಾಜ್ಯ ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳು ಸಿಆರ್‌ಪಿಸಿ ಸೆಕ್ಷನ್‌ ಅಡಿಯಲ್ಲಿ ನಿಷೇಧ ಹೇರುವ ಕ್ರಮವನ್ನು ರದ್ದು ಮಾಡಬೇಕುʼ ಎಂದು ಅರ್ಜಿ ಮುಖೇನ ಕೋರಿದ್ದರು.

ಅರ್ಜಿದಾರರ ಪರವಾದ ಆಲಿಸಿದ ನ್ಯಾಯಾಲಯವು ಎರಡು ವಾರಗಳ ನಂತರ ವಿಚಾರಣೆ ನಡೆಸುವುದಾಗಿ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!