Sunday, September 8, 2024

ಕೋಣಿ: ಆಚಾರಕೇರಿ ನಾಗಬನದ ದ್ವಿತೀಯ ವರ್ಧಂತ್ಯೋತ್ಸವ

ಕುಂದಾಪುರ: ಕೋಣಿ ಆಚಾರಕೇರಿ ನಾಗಬನದ ದ್ವಿತೀಯ ವರ್ಧಂತ್ಯೋತ್ಸವವು ಎ.18ರಂದು ಗುರುವಾರ ಬೆಳಿಗ್ಗೆ ನೇರಂಬಳ್ಳಿ ವೇದಮೂರ್ತಿ ಪ್ರಾಣೇಶ ತಂತ್ರಿ ಇವರ ನೇತೃತ್ವದಲ್ಲಿ ನೆರವೇರಿತು. ಮಧ್ಯಾಹ್ನ ಅನ್ನಸಂತರ್ಪಣೆ ನೇರವೇರಿತು. ಸಂಜೆ ಭಜನ ಕಾರ್ಯಕ್ರಮ ಜರಗಿತು.

ಸಂಜೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಕೋಣಿ ಕೃಷ್ಣದೇವ ಕಾರಂತ ಮಾತನಾಡುತ್ತಾ, ನಾಗನ ಸಾನಿಧ್ಯ ಅತಿ ಶ್ರೇಷ್ಠವಾದುದು, ಈ ಪ್ರಕೃತಿಯನ್ನು ಜನರೊಂದಿಗೆ ಬಾಂಧವ್ಯವನ್ನು ಭಕ್ತಿಯೊಂದಿಗೆ ನಾಗ ಉಳಿಸಿಕೊಂಡು, ಕೃಷಿ ಚಟುವಟಿಕೆಗೆ ಪೂರಕವಾಗಿದ್ದಾನೆ. ವಾಸುಕಿಯ ಸೇವೆ ಮಾಡಿದವರಿಗೆ ದೇವರು ಎಲ ರೀತಿಯಲ್ಲಿ, ಆಯುರಾರೋಗ್ಯ, ಐಶ್ವರ್ಯ ಕರುಣಿಸುತ್ತಾನೆ. ಹೋಮಹವನಾದಿಗಳ ಹವಿಸ್ಸಿನ ಸೇವೆ ಪ್ರಕೃತಿಯನ್ನು ಉಳಿಸುವುದರೊಂದಿಗೆ ಸಾನಿಧ್ಯ ವೃದ್ದಿಯಾಗುವುದು ಎಂದು ಅಭಿಪ್ರಾಯಪಟ್ಟರು.

ಸಭಾಧ್ಯತೆಯನ್ನು ಸಮಿತಿ ಅಧ್ಯಕ್ಷರಾದ ಕೋಣಿ ನಾರಾಯಣ ಆಚಾರ್ ವಹಿಸಿ ಮಾತನಾಡುತ್ತ ಪುರಾತನ ಕಾಲದಿಂದಲೂ ನಾಗನ ಸಾನಿಧ್ಯ ಜನರ ಧಾರ್ಮಿಕ ಭಾವನೆಯನ್ನು ಒಗ್ಗೂಡಿಸಿಕೊಂಡು ಬಂದಿದೆ ಎಂದರು.

ವೇದಿಕೆಯಲ್ಲಿ ಆಡಿಟರ್ ರಮಾನಂದ ಆಚಾರ್ ಕುಂದಾಪುರ, ಅಶೋಕ ಭಂಡಾರಿ, ಸುಬ್ರಹ್ಮಣ್ಯ ಆಚಾರ್, ಗಂಗಾದರ ಆಚಾರ್ ಉಪಸ್ಥಿತರಿದ್ದರು.

ಸುಬ್ರಹ್ಮಣ್ಯ ಆಚಾರ್ ಸ್ವಾಗತಿಸಿ, ಪ್ರವೀಣ ಭಂಡಾರಿ ಕಾರ್ಯಕ್ರಮ ನಿರೂಪಿಸಿ, ಲಕ್ಷ್ಮೀಕಾಂತ ಆಚಾರ್ಯ ವಂದಿಸಿದರು

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!