spot_img
Thursday, April 2, 2026
spot_img

ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ 9 ‌ವಿದ್ಯಾರ್ಥಿಗಳಿಗೆ ರಾಜ್ಯದ ಟಾಪ್‌ 10 ಸ್ಥಾನ:59 ವಿದ್ಯಾರ್ಥಿಗಳು ಶೇಕಡಾ 95ಕ್ಕಿಂತ ಅಧಿಕ ಅಂಕ

ಕುಂದಾಪುರ: ಪ್ರಸಕ್ತ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು  ಶೇ. 100 ಫಲಿತಾಂಶದೊಂದಿಗೆ ಸಾಧನೆ ಮೆರೆದಿದ್ದು , ವಿಜ್ಞಾನ ವಿಭಾಗದಲ್ಲಿ ವಿದ್ಯಾರ್ಥಿನಿ ಸಂಜನಾ   ಹಾಗೂ ಮಾನ್ಯ 592 ಅಂಕಗಳನ್ನು ಪಡೆಯುವುದರ  ಮೂಲಕ ರಾಜ್ಯಕ್ಕೆ 7 ನೇ rank, ಸುಜಯಾ ಎಚ್‌ ಮತ್ತು ಅನಿರುದ್ದ್‌ ಶೇಟ್‌    591 ಅಂಕಗಳೊಂದಿಗೆ   8 ನೇ rank, ಪೂಜಾ ಕಾರಂತ 590 ಅಂಕಗಳೊಂದಿಗೆ 9ನೇ rank, ನಮ್ರತಾ 589 ಅಂಕಗಳೊಂದಿಗೆ 10ನೇ rank ಪಡೆದಿರುತ್ತಾರೆ .

ವಾಣಿಜ್ಯ ವಿಭಾಗದಲ್ಲಿ ಸಿಂಚನಾ 590 ಅಂಕಗಳೊಂದಿಗೆ 8ನೇ  rank, ವಿನಯ ಶ್ಯಾನುಭಾಗ್ 589 ಅಂಕಗಳೊಂದಿಗೆ  9 ನೇ rank, ಶ್ರದ್ಧಾ 588 ಅಂಕಗಳೊಂದಿಗೆ 10ನೇ rank ಪಡೆದು ರಾಜ್ಯದ  ಅಗ್ರ ಸ್ಥಾನಿಯರ ಪಟ್ಟಿಯಲ್ಲಿ  ಸ್ಥಾನ ಪಡೆದಿದ್ದಾರೆ.
229 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು , ಡಿಸ್ಟಿಂಕ್ಷನ್‌ ನಲ್ಲಿ 182 ವಿದ್ಯಾರ್ಥಿಗಳು, ಪ್ರಥಮ ಶ್ರೇಣಿಯಲ್ಲಿ 47 ವಿದ್ಯಾರ್ಥಿಗಳು
ತೇರ್ಗಡೆ ಹೊಂದಿದ್ದಾರೆ.59 ವಿದ್ಯಾರ್ಥಿಗಳು ಶೇಕಡಾ 95ಕ್ಕಿಂತ ಅಧಿಕ ಅಂಕ ಪಡೆದಿರುತ್ತಾರೆ.
ಕಂಪ್ಯೂಟರ್‌ ಸೈನ್ಸ ನಲ್ಲಿ 20, ಸಂಸ್ಕ್ರತದಲ್ಲಿ 19,  ಗಣಿತಶಾಸ್ತ್ರ ದಲ್ಲಿ 16, ರಸಾಯನ ಶಾಸ್ತ್ರ ದಲ್ಲಿ 07, ಲೆಕ್ಕಶಾಸ್ತ್ರ ದಲ್ಲಿ 05
,ಕನ್ನಡದಲ್ಲಿ 04, ಸಂಖ್ಯಾಶಾಸ್ತ್ರದಲ್ಲಿ03,  ಜೀವಶಾಸ್ತ್ರದಲ್ಲಿ 03,   ಅರ್ಥಶಾಸ್ತ್ರ ದಲ್ಲಿ 02  ವಿದ್ಯಾರ್ಥಿಗಳು ವಿಷಯವಾರು ನೂರಕ್ಕೆ
ನೂರು ಅಂಕ ಪಡೆದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ  – ಬೋಧಕೇತರ   ಸಿಬ್ಬಂದಿಗಳು ಅಭಿನಂದನೆ
ಸಲ್ಲಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!