spot_img
Wednesday, April 1, 2026
spot_img

ದೇಶದಲ್ಲಿ 80 ಕೋಟಿ ಬಡವರು ಇದ್ದಾರೆ, ತನ್ನ ಆಡಳಿತದಲ್ಲಿ ಬಡತನವನ್ನು ವೃದ್ಧಿಗೊಳಿಸಿದ್ದೇವೆಂದು ಬಿಜೆಪಿ ಒಪ್ಪಿಕೊಂಡಿದೆ : ಕಾಂಗ್ರೆಸ್‌

ಜನಪ್ರತಿನಿಧಿ (ಬೆಂಗಳೂರು) : ಕಾಂಗ್ರೆಸ್ ಜಾರಿಗೆ ತಂದಿದ್ದ ಆಹಾರ ಹಕ್ಕು ಕಾಯ್ದೆಯ ಅಡಿಯಲ್ಲಿ ಬಡವರಿಗೆ ಪಡಿತರ ವಿತರಣೆ ಮಾಡುವುದು ಸರ್ಕಾರದ ಹೊಣೆಗಾರಿಕೆ, ಅದರ ಅಡಿಯಲ್ಲೇ 80 ಕೋಟಿ ಜನರಿಗೆ ನೀಡುತ್ತಿರುವ ಪಡಿತರವನ್ನು ಮುಂದುವರೆಸುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಹೇಳಿರುವ ಬಿಜೆಪಿ 80 ಕೋಟಿ ಬಡವರು ಇದ್ದಾರೆ ಹಾಗೂ ತನ್ನ ಆಡಳಿತದಲ್ಲಿ ಬಡತನವನ್ನು ವೃದ್ಧಿಗೊಳಿಸಿದ್ದೇವೆ ಎಂದು ಒಪ್ಪಿಕೊಂಡಿದೆ ಎಂದು ಕಾಂಗ್ರೆಸ್‌ ಟೀಕೆ ಮಾಡಿದೆ.

ಬಿಜೆಪಿಯ ಪ್ರಣಾಳಿಕೆಯನ್ನು ತನ್ನ ಅಧಿಕೃತ ಎಕ್ಸ್‌ ಖಾತೆಯ ಮೂಲಕ ಟೀಕಿಸಿದ ರಾಜ್ಯ ಕಾಂಗ್ರೆಸ್‌, ತನ್ನ ಪ್ರಣಾಳಿಕೆಯಲ್ಲಿ ಬಡತನವನ್ನು ಹೋಗಲಾಡಿಸಲು ಯಾವುದೇ ಯೋಜನೆ ರೂಪಿಸಿಲ್ಲ, ದೂರದೃಷ್ಟಿಯನ್ನೂ ಹೊಂದಿಲ್ಲ.  ಆದರೆ, ಕಾಂಗ್ರೆಸ್ ಪಕ್ಷ ಬಡತನ ನಿರ್ಮೂಲನೆಗೆ ಸ್ಪಷ್ಟ ರೂಪುರೇಷೆ ಹೊಂದಿದೆ, ಮಹಾಲಕ್ಷ್ಮಿ ಯೋಜನೆಯಲ್ಲಿ ವಾರ್ಷಿಕ 1 ಲಕ್ಷ ರೂಪಾಯಿ ನೀಡುವ ಗ್ಯಾರಂಟಿಯೊಂದಿಗೆ ಬಡತನ ನಿರ್ಮೂಲನೆಗೆ ಪಣ ತೊಟ್ಟಿದೆ ಎಂದು ಹೇಳಿದೆ.

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬಂದನಂತರ ಕೇವಲ 2 ವರ್ಷಗಳ ಅವಧಿಯಲ್ಲಿ ದೇಶದ ಬಡತನವನ್ನು ನಿರ್ಮೂಲನೆ  ಮಾಡುವುದು ನಿಶ್ಚಿತ, ಜನರ ಜೀವನ ಸುಧಾರಿಸುವುದು ಖಚಿತ ಎಂದು ಹೇಳಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!