Saturday, October 12, 2024

ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ: CA/CS/CMA ವೃತ್ತಿಪರ ಕೋರ್ಸ್‌ಗಳ ಆರಂಭ

ಕುಂದಾಪುರ: ವಾಣಿಜ್ಯ ವಿಭಾಗದ ಉನ್ನತ ಶ್ರೇಣಿ ಪದವಿಗಳಾದ CA, CS  ಹಾಗೂ CMA ಕೋರ್ಸುಗಳನ್ನು ಮಾಡಲು ಸುವರ್ಣ ಅವಕಾಶವನ್ನು ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ ನೀಡುತ್ತಿದೆ. ಇಲ್ಲಿನ ಪ್ರೊಫೆಷನಲ್ ಕೋರ್ಸ್ ವಿಭಾಗವು ದಿನಾಂಕ 2 ಮೇ 2024ರಿಂದ ತಮ್ಮ ನೂತನ ಬ್ಯಾಚ್‌ಗಳನ್ನು ಪ್ರಾರಂಭಿಸಿ, ವಿದ್ಯಾರ್ಥಿಗಳಿಗೆ ಪ್ರೊಫೆಷನಲ್ ಕೋರ್ಸ್ ಬಗೆಗಿನ ವಿಶೇಷ ತರಬೇತಿಗಳನ್ನು ನಿರಂತರವಾಗಿ ಕೊಡಲು ನಿರ್ಧರಿಸಿದ್ದಾರೆ. ಆಸಕ್ತ ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿ ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

V- reach Coaching Academy ಯೊಂದಿಗೆ ಒಡಂಬಡಿಕೆ:
ಪ್ರೊಫೆಷನಲ್ ಕೋರ್ಸ್ ವಿಭಾಗವನ್ನು ಮುನ್ನಡೆಸಲು ಉಡುಪಿಯ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ವಿ ರೀಚ್ ಅಕಾಡೆಮಿ ಅವರೊಡನೆ ಒಡಂಬಡಿಕೆಯನ್ನು ಮಾಡಿಕೊಂಡಿದ್ದು, ವಿ ರೀಚ್ ಸಂಸ್ಥೆಯು ಕಳೆದ ಹತ್ತು ವರ್ಷಗಳಿಂದ ಪ್ರೊಫೆಷನಲ್ ಕೋರ್ಸ್ ತರಬೇತಿಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತಾ, ಸಾಧನೆಯ ಶಿಖರಕ್ಕೆ ದಾಪುಗಾಲನ್ನು ಇಡುತ್ತಿದೆ. ಹತ್ತು ವರ್ಷಗಳ ಅವಧಿಯಲ್ಲಿ 08 ಸಿ.ಎ.ಗಳನ್ನು, 10 ಸಿ.ಎಸ್. ಗಳನ್ನು ಸಮಾಜಕ್ಕೆ ನೀಡಿದ್ದಾರೆ. ಹಲವಾರು ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿ ತರಬೇತಿಯನ್ನು ತೆಗೆದುಕೊಂಡು ಪರೀಕ್ಷೆಯಲ್ಲಿ ಆಲ್ ಇಂಡಿಯಾ ರ್‍ಯಾಂಕ್ ಪಡೆದಿರುತ್ತಾರೆ. ಈ ವರೆಗೆ ಈ ಸಂಸ್ಥೆಗೆ ಎಂಟು ಬಾರಿ ಆಲ್ ಇಂಡಿಯಾ Rank ಒದಗಿ ಬಂದಿರುವುದು ಶ್ಲಾಘನೀಯ ಸಂಗತಿ. ಪ್ರತಿ ವಿದ್ಯಾರ್ಥಿಯು ಈ ಸಂಸ್ಥೆಯ ತರಬೇತಿಯ ನಂತರ ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಿರುವುದು ಸಂಸ್ಥೆಯ ಹೆಮ್ಮೆ. ಇಂತಹ ಸಂಸ್ಥೆಯೊಟ್ಟಿಗೆ ಒಡಂಬಡಿಕೆಯನ್ನು ಮಾಡಿಕೊಂಡು ವಿದ್ಯಾರ್ಥಿಗಳಿಗೆ ಒಂದೇ ಸೂರಿನಡಿಯಲ್ಲಿ ಬಿ.ಕಾಂ. ಹಾಗೂ ಪ್ರೊಫೆಷನಲ್ ಕೋರ್ಸ್‌ಗಳ ತರಬೇತಿಯನ್ನು ನೀಡುವ ಕುಂದಾಪುರ ತಾಲ್ಲೂಕಿನಲ್ಲಿರುವ ಏಕೈಕ ಕಾಲೇಜ್ ಅಂದರೆ ಆದು ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!