Wednesday, September 11, 2024

ಮೋದಿ ರೋಡ್‌ ಶೋ ಸಮಯದಲ್ಲಿ ಬದಲಾವಣೆ | ಚುನಾವಣೆಗಷ್ಟೆ ಬಿಜೆಪಿಗೆ ಬಿಲ್ಲವರು ಬೇಕು : ಕಾಂಗ್ರೆಸ್‌ ಆಕ್ರೋಶ

ಜನಪ್ರತಿನಿಧಿ (ಮಂಗಳೂರು) : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬ್ರಿಜೇಷ್ ಚೌಟ ಪರ ಪ್ರಚಾರಕ್ಕೆ ಪ್ರಧಾನಿ  ನರೇಂದ್ರ ಮೋದಿ ನಗರದಲ್ಲಿ ರೋಡ್‌ ಶೋ ಸಮಯದಲ್ಲಿ ತುಸು ಬದಲಾವಣೆ ಆಗಿದ್ದು, ಏ.14 ರಂದು ಸಂಜೆ 7:45 ಕ್ಕೆ ರೋಡ್‌ ಶೋ ಆರಂಭವಾಗಲಿದೆ ಎಂದು ಬಿಜೆಪಿ ರಾಜ್ಯ ಘಟಕದ ಚುನಾವಣಾ ಸಂಚಾಲಕ ವಿ. ಸುನೀಲ್‌ ಕುಮಾರ್‌ ಹೇಳಿದ್ದಾರೆ.

ಇಂದು (ಶನಿವಾರ) ವರದಿಗಾರರೊಂದಿಗೆ ಮಾತನಾಡಿದ ಸುನೀಲ್‌ ಕುಮಾರ್‌, ಮೋದಿ ಅವರ ಸ್ವಾಗತಕ್ಕೆ ದಕ್ಷಿಣ ಕನ್ನಡ ಜಿಲ್ಲೆ ತಯಾರಾಗಿದೆ. ಮೋದಿ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ೭:೩೦ಕ್ಕೆ ಬಂದು ಅಲ್ಲಿಂದ ವಾಹನದಲ್ಲಿ ನಾರಾಯಣ ಗುರು ಸರ್ಕಲ್‌ಗೆ ಬರಲಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ರೋಡ್‌ ಶೋ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.

ಲಾಲ್‌ ಬಾಗ್‌, ಬಳ್ಳಾಲ್‌ ಬಾಗ್‌, ಪಿವಿಎಸ್‌ ಸರ್ಕಲ್‌ ಮಾರ್ಗವಾಗಿ ನವ ಭಾರತ್‌ ಸರ್ಕಲ್‌ ನಲ್ಲಿ ರೋಡ್‌ ಶೋ ಮುಕ್ತಾಯಗೊಳ್ಳಲಿದೆ. ಕಾರ್ಯಕರ್ತರಯ, ಸಾರ್ವಜನಿಕರು ಸಂಜೆ ೬:೩೦ರೊಳಗಾಗಿ ರಸ್ತೆಯ ಇಕ್ಕೆಲಗಳಲ್ಲಿ ಬಂದು ಮೋದಿ ಅವರನ್ನು ಸ್ವಾಗತಿಸಲು ನಿಂತಿರಬೇಕು ಎಂದು ಅವರು ವಿನಂತಿಸಿಕೊಂಡಿದ್ದಾರೆ.

ಇನ್ನೊಂದೆಡೆ, ಮೋದಿ ರೋಡ್‌ ಶೋ ಬಗ್ಗೆ ಜಿಲ್ಲಾ ಕಾಂಗ್ರೆಸ್‌ ಆಕ್ರೋಶ ವ್ಯಕ್ತ ಪಡಿಸಿದ್ದು, ಚುನಾವಣೆ ಬಂದಾಗ ಬಿಜೆಪಿಯವರಿಗೆ ಬಿಲ್ಲವರ ನೆನಪಾಗಿದೆ. ಈವರೆಗೆ ಬಿಲ್ಲವರು ಬೇಡವಾಗಿತ್ತು. ಚುನಾವಣೆ ಬಂದಾಗ ಕೋಟಿ ಚೆನ್ನಯ್ಯ ಬೇಕಾಗಿದ್ದಾರೆ, ನಾರಾಯಣ ಗುರುಗಳು ಬೇಕಾಗಿದ್ದಾರೆ ಎಂದು ಬಿಜೆಪಿ ವಿರುದ್ಧ ಕಿಡಿ ಕಾರಿದೆ. ಮೋದಿ ಅವರಿಂದ ನಾರಾಯಣ ಗುರುಗಳಿಗೆ ಮಾಲಾರ್ಪಣೆ ಮಾಡಿಸುವ ಎಲ್ಲಾ ನಾಟಕಗಳನ್ನು ರಾಜ್ಯ ಬಿಜೆಪಿ ಮಾಡಿಸುತ್ತಿದೆ. ಬಿಜೆಪಿಗೆ ಸೋಲಿನ ಭಯ ಕಾಡುತ್ತಿದೆ ಎಂದು ಕಾಂಗ್ರೆಸ್‌ ಹೇಳಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!