spot_img
Wednesday, December 4, 2024
spot_img

ಏ.23ರಂದು ಬಗ್ವಾಡಿ ಬ್ರಹ್ಮರಥೋತ್ಸವ

ಕುಂದಾಪುರ: ಬಗ್ವಾಡಿ ಶ್ರೀ ಮಹಿಷಾಸುರಮರ್ದಿನಿ ದೇವಸ್ಥಾನದಲ್ಲಿ ಬ್ರಹ್ಮರಥೋತ್ಸವ ಹಾಗೂ ಮಹಾ ಅನ್ನಸಂತರ್ಪಣೆ ಏಪ್ರಿಲ್ 23ರಂದು ಮಂಗಳವಾರ ನಡೆಯಲಿದೆ.

ರಥೋತ್ಸವದ ಅಂಗವಾಗಿ ಏಪ್ರಿಲ್ 21ರಂದು ಧ್ವಜಾರೋಹಣ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿದೆ. ಏಪ್ರಿಲ್ 22ರಂದು ನಿತ್ಯಪೂಜೆ,ಕಟ್ಟೆ ಪೂಜೆ, ಹಿರೇರಂಗಪೂಜೆ,ಬಲಿ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಏ.23ರಂದು ಅಭಿಜಿನ್ ಮಹೂರ್ತದಲ್ಲಿ ರಥಾರೋಹಣ, ಮಹಾ ಅನ್ನಸಂತರ್ಪಣೆ, ಸಂಜೆ ರಥಾವರೋಹಣ, ಅಷ್ಟಾವಧಾನ ಸೇವೆ, ನಿತ್ಯ ಪೂಜೆ, ಭೂತಬಲಿ, ಶಯನೋತ್ಸವ ನಡೆಯಲಿದೆ. ಏಪ್ರಿಲ್ 24ರಂದು ಪ್ರಭುದೋತ್ಸವ, ಮಹಾಪೂಜೆ,ರಾತ್ರಿ ಪೂಜಾ ಸಹಿತ ಬಲಿ, ಚೂರ್ಣೋತ್ಸವ, ಅಷ್ಠವಾದಾನ ಸೇವೆ, ವಾರುಣ ಹೋಮ, ಧ್ವಜಾವಾರೋಹಣ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಏಪ್ರಿಲ್ 25ರ ಬೆಳಿಗ್ಗೆ ಸಂಪ್ರೋಕ್ಷಣೆ ನಡೆಯಲಿದೆ.

ರಥೋತ್ಸವದ ಅಂಗವಾಗಿ ಏ.21ರಂದು ರಾತ್ರಿ 7 ಗಂಟೆಯಿಂದ ವಿವಿಧ ತಂಡಗಳಿಂದ ಕುಣಿತ ಭಜನೆ, ಏ.22ರಂದು ಸಂಜೆ 4.30ಕ್ಕೆ 15ನೇ ವರ್ಷದ ದೇವಿಯ ವಿಜೃಂಭಣೆಯ ಪುರಮೆರವಣಿಗೆ, ರಾತ್ರಿ 8 ಗಂಟೆಗೆ ಅಭಿನವ ಕಲಾತಂಡ ಕುಂದಾಪುರ ಇವರಿಂದ ಕಂದಗನ್ನಡದ ಹಾಸ್ಯನಾಟಕ ರತ್ನ ಶಾಮಿಯಾನ, ಏಪ್ರಿಲ್ 23ರ ಬೆಳಿಗ್ಗೆ 10 ಗಂಟೆಯಿಂದ ಕುಣಿತ ಭಜನೆ, ಮಧ್ಯಾಹ್ನ 1 ಗಂಟೆಯಿಂದ ಮನೋರಂಜನಾ ಕಾರ್ಯಕ್ರಮ, ಸಂಜೆ 6 ಗಂಟೆಯಿಂದ ಯಕ್ಷಗುರು ಪ್ರಸಾದ್ ಮೊಗೆಬೆಟ್ಟು ಬಳಗದವರಿಂದ ಮತ್ಸ್ಯಗಂಧ ತಂಡದವರಿಂದ ಯಕ್ಷಗಾನ ಮಾಯಾಪುರಿ ಮಹಾತ್ಮೆ-ಶಿವಭಕ್ತ ವೀರಮಣಿ ಪ್ರದರ್ಶನಗೊಳ್ಳಲಿದೆ. ಏ.24ರಂದು ಸಂಜೆ 6.30ರಿಂದ ಕುಣಿತ ಭಜನೆ, ಸಂಜೆ 7ಗಂಟೆಯಿಂದ ಬಗ್ವಾಡಿ ಫ್ರೆಂಡ್ಸ್ ಪ್ರಾಯೋಜಕತ್ವದಲ್ಲಿ 14ನೇ ವರ್ಷದ ಸಾಂಸ್ಕøತಿಕ ಕಾರ್ಯಕ್ರಮ ಕಲರವ-2024 ಪ್ರದರ್ಶನಗೊಳ್ಳಲಿದೆ. ರಾತ್ರಿ 8.30ರಿಂದ ತ್ರಿನೇತ್ರ ಕಲಾವಿದರು ಉಪ್ಲಾಡಿ ಇವರಿಂದ ನಾಟಕ ಗಗ್ಗರ…ದೈವದನಿ ಪ್ರದರ್ಶನ, ಏ.25ರಂದು ಬೆಳಿಗ್ಗೆ5.30ಕ್ಕೆ ತೆಪ್ಪೋತ್ಸವ ನಡೆಯಲಿದೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!