spot_img
Friday, January 17, 2025
spot_img

‘ಕಲಾ ಸಿರಿ-2024’ ಅಂತರ್ ವಿಭಾಗೀಯ ಮಟ್ಟದ ಪ್ರಾಯೋಗಿಕ ಮಾದರಿಗಳ ಪ್ರದರ್ಶನ

ಜನಪ್ರತಿನಿಧಿ (ಉಡುಪಿ) : ಪ್ರಾಯೋಗಿಕ ಮಾದರಿಗಳು ಕೇವಲ ವಿಜ್ಞಾನ, ಗಣಕಯಂತ್ರ ಮತ್ತು ವಾಣಿಜ್ಯ ವಿಭಾಗಗಳಿಗೆ ಮಾತ್ರ ಸೀಮಿತವಾಗಿರದೆ, ಕಲಾ ಮತ್ತು ಭಾಷಾ ವಿಷಯಗಳಿಗೂ ಸಂಬಂಧಿಸಿದೆ. ಇಲ್ಲಿ ಸಮಾಜದಿಂದ ಪಡೆದುಕೊಳ್ಳುವ ಅನುಭವಗಳೇ ಪ್ರಾಯೋಗಿಕ ಮಾದರಿಗಳಾಗುತ್ತವೆ ಎಂದು ಉದ್ಯಮಿ ಮತ್ತು ಪೇಪರ್ ಕೊಲಾಜ್ ಕಲಾವಿದ ಪ್ರಭಾಕರ ಕಿಣಿ ಅಭಿಪ್ರಾಯಪಟ್ಟರು.

ಇವರು ಡಾ. ಜಿ ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರಧ್ಯಯನ ಕೇಂದ್ರ ಅಜ್ಜರಕಾಡು ಇಲ್ಲಿನ ಐಕ್ಯೂಎಸಿ ಮತ್ತು ಮಾನವಿಕ ಸಂಘದ ಸಹಯೋಗದಲ್ಲಿ ಆಯೋಜಿಸಲಾದ ಕಲಾ ಸಿರಿ-2024 ಅಂತರ್ ವಿಭಾಗೀಯ ಮಟ್ಟದ ಪ್ರಾಯೋಗಿಕ ಮಾದರಿಗಳ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.

ಮಾನವಿಕ ವಿಷಯಗಳನ್ನು ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳಲ್ಲಿನ ಕೌಶಲ್ಯ, ಸೃಜನಶೀಲತೆ, ಪಾಲ್ಗೊಳುವಿಕೆ ಮತ್ತು ಅವರಿಗೊಂದು ವೇದಿಕೆಯನ್ನು ಕಲ್ಪಸಿಕೊಡಲು ಇಂತಹ ಕಾರ್ಯಕ್ರಮಗಳು ಅಗತ್ಯ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರು ಪ್ರೊ. ಭಾಸ್ಕರ್ ಎಸ್ ಶೆಟ್ಟಿ ವಹಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಐಕ್ಯೂಎಸಿ ಸಂಚಾಲಕರಾದ ಶ್ರೀ ಸೋಜನ್ ಕೆ.ಜಿ, ಕಲಾನಿಕಾಯದ ಡೀನ್ ಪ್ರೊ. ನಿಕೇತನ, ವಿದ್ಯಾರ್ಥಿಕ್ಷೇಮಪಾಲನಾಧಿಕಾರಿ ಡಾ. ವಾಣಿ ಆರ್ ಬಲ್ಲಾಳ್ ಉಪಸ್ಥಿತರಿದ್ದರು.

ಡಾ. ಗುರುರಾಜ್ ಪ್ರಭು ಕೆ, ಮಾನವಿಕ ಸಂಘದ ಸಂಚಾಲಕರು ಪ್ರಸ್ಥಾವಿಕವಾಗಿ ಮಾತನಾಡಿ, ಅಥಿತಿಗಳನ್ನು ಸ್ವಾಗತಿಸಿದರು, ಚೈತ್ರಾ ಕೆ ಸಿ ಕಾರ್ಯಕ್ರಮವನ್ನು ನಿರೂಪಿಸಿ, ಗಾನವಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!