spot_img
Friday, April 25, 2025
spot_img

ಸಂಶೋಧನಾ ವಿಧಾನಗಳ ಅರಿವು ಅಗತ್ಯ : ಡಾ. ನಾರಾಯಣಸ್ವಾಮಿ

ಜನಪ್ರತಿನಿಧಿ (ಕೋಟೇಶ್ವರ) : ಭಾರತದಲ್ಲಿ ಸಂಶೋಧನಾ ವಿಧಾನಗಳ ಶಿಕ್ಷಣ ಮಹತ್ವ ಪಡೆದುಕೊಳ್ಳುತ್ತಿದೆ ಉತ್ತಮ ಸಂಶೋಧನೆ ನಡೆಯಲು ಸಂಶೋಧನಾ ವಿಧಾನಗಳ ಅರಿವು ಅತ್ಯಗತ್ಯ ಗುಣಮಟ್ಟದ ಸಂಶೋಧನೆ ಗೆ ಅಪಾರ ಬೇಡಿಕೆ ಮತ್ತು ಮೌಲ್ಯ ಇದೆ ಸಮಾಜ ವಿಜ್ಞಾನ ಕ್ಷೇತ್ರದಲ್ಲಿ ಇರುವ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಸರ್ಕಾರದ ನೀತಿ ನಿರೂಪಣೆಯಲ್ಲಿ ಸಂಶೋಧನೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಭಂಡಾರ್ಕರ್ಸ್ ಕಾಲೇಜ್ ಕುಂದಾಪುರ ಇದರ ನಿವೃತ್ತ ಪ್ರಾಧ್ಯಾಪಕ ಡಾ. ನಾರಾಯಣಸ್ವಾಮಿ ಹೇಳಿದರು.

ಅವರು ಕೋಟೇಶ್ವರದ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಇದರ ಆಂತರಿಕ ಗುಣಮಟ್ಟ ಭರವಸಕೋಶ ಮತ್ತು ಸಂಶೋಧನಾ ಸಮಿತಿ ಸಂಘಟಿಸಿದ ಒಂದು ದಿನದ ರಾಷ್ಟ್ರಮಟ್ಟದ ಸಂಶೋಧನಾ ವಿಧಾನಗಳು ಎಂಬ ವಿಚಾರ ಸಂಕಿರಣದಲ್ಲಿ ಮಾತನಾಡುತ್ತಾ ಸಂಶೋಧನೆಯ ಮಹತ್ವದ ಕುರಿತು ವಿಚಾರ ಮಂಡಿಸಿದರು.

ಕಾರ್ಯಕ್ರಮವನ್ನು ಉದ್ಯಮಿ ಜೆ ಪಿ ಶೆಟ್ಟಿ ಕಟ್ಕೆರೆ ಉದ್ಘಾಟಿಸಿ ಶುಭ ಕೋರಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಜೇಂದ್ರ ಎಸ್ ನಾಯಕ ಸಂಶೋಧನೆಯ ಮಹತ್ವ ಮತ್ತು ವಿಚಾರ ಸಂಕಿರಣದ ಉದ್ದೇಶ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ  ರಾಮರಾಯ ಆಚಾರ್ಯ ಉಪಸ್ಥಿತರಿದ್ದರು.

ಮಹಾರಾಷ್ಟ್ರದ ಪುಣೆ ವಿಶ್ವವಿದ್ಯಾನಿಲಯದ ಸಂಶೋಧಕ ಅನಿಕೇತ್ ಕತ್ರಿ, ಕಾಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಸಂಧ್ಯಾ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಸಂಶೋಧಕ ಅಭಿಷೇಕ್ ಸಂಶೋಧನೆಯ ವಿಧಾನಗಳ ಕುರಿತು ವಿಚಾರ ಮಂಡಿಸಿದರು. ಸಮಾರೋಪ ಸಮಾರಂಭದಲ್ಲಿ ಕುವೆಂಪು ವಿಶ್ವವಿದ್ಯಾನಿಲಯದ ಸಂಶೋಧನಾ ಮಾರ್ಗದರ್ಶಕರಾದ ಡಾ. ಮಮತಾ ಎಸ್ ಎಂ ಭಾರತದಲ್ಲಿ ಪ್ರಸ್ತುತ ಸಂಶೋಧನೆಯ ಸ್ಥಿತಿಗತಿ ಕುರಿತು ವಿಚಾರ ಮಂಡಿಸಿದರು. ವಿಚಾರ ಸಂಕಿರಣದ ಸಂಘಟಕ ವಾಣಿಜ್ಯಶಾಸ್ತ್ರ ಸಹ ಪ್ರಾಧ್ಯಾಪಕ ಡಾ. ವೆಂಕಟರಾಮ ಭಟ್ ಸ್ವಾಗತಿಸಿದರು. ಐಕ್ಯೂ ಎಸಿ ಸಂಚಾಲಕ ನಾಗರಾಜ ಯು ವಂದಿಸಿದರು.

ವಿದ್ಯಾರ್ಥಿಗಳಾದ ಜಾನ್ಹವಿ, ಸ್ಪೂರ್ತಿ ಪ್ರಾರ್ಥಿಸಿದರು. ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಉಜ್ವಲಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,300SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!