spot_img
Tuesday, February 18, 2025
spot_img

ಭಾರತ-ಚೀನಾ ಗಡಿ ಪರಿಸ್ಥಿತಿಯತ್ತ ತುರ್ತು ಗಮನ : ʼಲಡಾಖ್‌ ಗಡಿ ಮೆರವಣಿಗೆʼ ಬೆನ್ನಲ್ಲೇ ಮೋದಿ ದಿಢೀರ್‌ ಹೇಳಿಕೆ !

ಜನಪ್ರತಿನಿಧಿ (ನವದೆಹಲಿ) : ಭಾರತ-ಚೀನಾ ಗಡಿ ಪರಿಸ್ಥಿತಿಯತ್ತ ತುರ್ತಾಗಿ ಗಮನ ಹರಿಸಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ದ್ವಿಪಕ್ಷೀಯ ಸಂವಹನಗಳಲ್ಲಿ ಅಸಹಜತೆಗಳನ್ನು ನಿವಾರಿಸುವುದಕ್ಕಾಗಿ ಗಡಿ ಪರಿಸ್ಥಿತಿಯತ್ತ ಗಮನಹರಿಸಬೇಕು ಎಂದು ಮೋದಿ ಹೇಳಿದ್ದಾರೆ.

ಉಭಯ ದೇಶಗಳು ಮುಖ್ಯವಾದ ಸಂಬಂಧಗಳನ್ನು ಹೊಂದಿವೆ ಎಂದಿರುವ ಪ್ರಧಾನಿ, ಇಡೀ ಜಗತ್ತಿಗೆ ಭಾರತ-ಚೀನಾದ ಸ್ಥಿರ ಸಂಬಂಧಗಳು ಮುಖ್ಯವಾಗಿರುತ್ತದೆ ಎಂದು ಅಮೇರಿಕಾದ ನ್ಯೂಸ್ ವೀಕ್ ನಿಯತಕಾಲಿಕೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ಭಾರತಕ್ಕೆ ಚೀನಾದೊಂದಿಗಿನ ಸಂಬಂಧ ಮುಖ್ಯ ಹಾಗೂ ಮಹತ್ವದ್ದಾಗಿದೆ. ದೀರ್ಘಾವಧಿಯಿಂದ ಇರುವ ನಮ್ಮ ಗಡಿ ಪರಿಸ್ಥಿತಿಗಳತ್ತ ತುರ್ತಾಗಿ ಗಮನಹರಿಸಬೇಕು ತನ್ಮೂಲಕ ದ್ವಿಪಕ್ಷೀಯ ಸಂಬಂಧಗಳಲ್ಲಿನ ಅಸಹಜತೆಗಳನ್ನು ನಿವಾರಿಸಬೇಕು ಎಂಬುದು ನನ್ನ ನಂಬಿಕೆಯಾಗಿದೆ ಎಂದು ಮೋದಿ ಹೇಳಿದ್ದಾರೆ.

ಸಕಾರಾತ್ಮಕ ಮಾತುಕತೆ ಮೂಲಕ ಉಭಯ ದೇಶಗಳು ತನ್ನ ಗಡಿಯಲ್ಲಿ ಶಾಂತಿಯನ್ನು ಪುನಃಸ್ಥಾಪಿಸಲು ಸಾಧ್ಯವಾಗುತ್ತದೆ ಎಂದು ಮೋದಿ ಇದೇ ವೇಳೆ ಆಶಿಸಿದ್ದಾರೆ. 2020 ರಲ್ಲಿ ಲಡಾಖ್ ನ ಗಾಲ್ವಾನ್ ಕಣಿವೆಯಲ್ಲಿ ತಮ್ಮ ಸೈನಿಕರ ನಡುವಿನ ಘರ್ಷಣೆಯ ನಂತರ ಭಾರತ-ಚೀನಾ ಸಂಬಂಧಗಳು ಹದಗೆಟ್ಟಿದೆ. ಘರ್ಷಣೆಯಲ್ಲಿ ಸುಮಾರು 20 ಭಾರತೀಯ ಸೈನಿಕರು ಕೊಲ್ಲಲ್ಪಟ್ಟರು, ಚೀನಾ ಅನಿರ್ದಿಷ್ಟ ಸಂಖ್ಯೆಯ ಸಾವುನೋವುಗಳನ್ನು ಎದುರಿಸಿತ್ತು ಈ ಬಳಿಕ ಉನ್ನತ ಮಟ್ಟದ ರಾಜತಾಂತ್ರಿಕ ಮತ್ತು ಮಿಲಿಟರಿ ಮಾತುಕತೆಗಳು ನಡೆದಿತ್ತು.

ಇನ್ನು, ಲಡಾಖ್ ಅನ್ನು ಚೀನಾ ಅತೀಕ್ರಮಣ ಮಾಡಿಕೊಳ್ಳುತ್ತಿದೆ, ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಬಗ್ಗೆ ಈ ಬಗ್ಗೆ ಯಾವುದೇ ಗಮನ ನೀಡುತ್ತಿಲ್ಲ ಎಂದು ಹೇಳಿ ಆ ಭಾಗದ ಪ್ರತಿಭಟನಾಕಾರರು ಅಹರ್ನಿಶಿ ಹೋರಾಟ ಮಾಡಿದ್ದರು. ʼಲಡಾಖ್‌ ಉಳಿಸಿʼ ಅಭಿಯಾನವೂ ನಡೆಯಿತು. ಈ ವಿಚಾರ ಇತ್ತೀಚೆಗೆ ದೊಡ್ಡ ಸುದ್ದಿಯಾಗಿತ್ತು. ಲಡಾಖ್‌ ಸಾಮಾಜಿಕ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ʼಗಡಿ ಮೆರವಣಿಗೆʼ ಆಯೋಜಿಸಿದ್ದರು.  ಈ ಬೆನ್ನಲ್ಲೇ ಪ್ರಧಾನಿ ಸಂದರ್ಶನವೊಂದರಲ್ಲಿ ಈ ಹೇಳಿಕೆ ನೀಡಿದ್ದಾರೆ.

ಜಮ್ಮು–ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನವನ್ನು ಕೇಂದ್ರದ ಬಿಜೆಪಿ ಸರ್ಕಾರವು 2019ರ ಆಗಸ್ಟ್‌ನಲ್ಲಿ ತೆಗೆದುಹಾಕಿದಾಗ ಲಡಾಖ್‌ನ ಜನರು ಅದನ್ನು ಸ್ವಾಗತಿಸಿದ್ದರು. ಕೇಂದ್ರದ ಆ ನಿರ್ಧಾರದಿಂದ ಲಡಾಖ್‌ಗೆ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶದ ಸ್ಥಾನ ದೊರೆತಿದ್ದೇ ಅದಕ್ಕೆ ಕಾರಣ. ಆದರೆ ಈಗ ಅದೇ ಜನರು ಕೇಂದ್ರ ಸರ್ಕಾರದ ವಿರುದ್ಧ ಬೀದಿಗೆ ಇಳಿದಿದ್ದಾರೆ. ನಮ್ಮ ಹಕ್ಕು ಮತ್ತು ಅಧಿಕಾರಗಳನ್ನು ಸರ್ಕಾರ ಕಸಿದುಕೊಳ್ಳುತ್ತಿದೆ, ಲಡಾಖ್‌ನ ಗಡಿಯನ್ನು ಚೀನಾ ಅತಿಕ್ರಮಿಸುತ್ತಿದ್ದರೂ ಸರ್ಕಾರ ಸುಮ್ಮನಿದೆ ಎಂದು ಈ ಜನರು ಪ್ರತಿಭಟಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಲಡಾಖ್‌ನಲ್ಲಿ ನಿಷೇಧಾಜ್ಞೆ ಹೇರಿ, ಪ್ರತಿಭಟನೆಯನ್ನು ತಡೆಹಿಡಿದಿದೆ.

ಲಡಾಖ್‌ ಜನರು ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಹೋರಾಟ ನಡೆಸಿದ್ದು ಇದೇ ಮೊದಲಲ್ಲ. 2020ರಿಂದಲೂ ಅಂತಹ ಸಣ್ಣ–ಪುಟ್ಟ ಹೋರಾಟಗಳು ನಡೆಯುತ್ತಲೇ ಇವೆ. ಅದು ಆರಂಭವಾದದ್ದು 2020ರ ಅಂತ್ಯದ ವೇಳೆಗೆ. 2020ರಲ್ಲಿ ಲಡಾಖ್‌ನ ಗಾಲ್ವಾನ್‌ ಕಣಿವೆಯಲ್ಲಿ ಮತ್ತು ಪ್ಯಾಂಗಾಂಗ್‌ ಸರೋವರದ ಬಳಿ ಚೀನಾ ಸೈನಿಕರು ಭಾರತದ ಗಡಿಯೊಳಗೆ ಬಂದಿದ್ದರಿಂದ ಭಾರತದ ಸೈನಿಕರೊಟ್ಟಿಗೆ ಸಂಘರ್ಷ ಆಗಿತ್ತು. ಆ ಸಂಘರ್ಷಗಳ ನಂತರ ಭಾರತದ ನೆಲವನ್ನು ಚೀನಾ ಸೈನಿಕರಿಗೆ ಬಿಟ್ಟುಕೊಡಲಾಗಿದೆ ಎಂದು ಲಡಾಖಿ ಜನರು ಆರೋಪಿಸಿದ್ದರು. ಕೇಂದ್ರ ಸರ್ಕಾರ ಅದನ್ನು ನಿರಾಕರಿಸಿತ್ತು. ವರ್ಷ ಕಳೆದಂತೆ ಅಂತಹ ಆರೋಪ ಹೆಚ್ಚಾಗತೊಡಗಿತು. ಇದೇ ಜನವರಿಯಲ್ಲಿ ಲಡಾಖಿ ಕುರಿಗಾಹಿಗಳು ಚೀನೀ ಸೈನಿಕರೊಟ್ಟಿಗೆ ಮಾತಿನ ಚಕಮಕಿ ನಡೆಸುತ್ತಿರುವ ದೃಶ್ಯವಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಯಿತು. ನಮ್ಮದೇ ನೆಲದಲ್ಲಿ ಕುರಿಗಳನ್ನು ಮೇಯಿಸಲು ಚೀನಾ ಸೈನಿಕರು ತಡೆ ಒಡ್ಡುತ್ತಿದ್ದಾರೆ. ಚೀನಾ ಸೈನಿಕರು ನಮ್ಮ ನೆಲವನ್ನು ಅತಿಕ್ರಮಿಸಿದ್ದಾರೆ ಎಂದು ಲಡಾಖ್ ಜನರು ಆರೋಪಿಸಿದರು. ಯಥಾಪ್ರಕಾರ ಕೇಂದ್ರ ಸರ್ಕಾರ ಅದನ್ನು ನಿರಾಕರಿಸಿತು.

ಸರ್ಕಾರದ ನಿರ್ಧಾರವನ್ನು ಅಲ್ಲಗಳೆಯುವ ಮತ್ತು ಚೀನಾ ಸೈನಿಕರು ಭಾರತದ ನೆಲವನ್ನು ಅತಿಕ್ರಮಿಸಿದ್ದಾರೆ ಎಂಬುದನ್ನು ತೋರಿಸುವ ಸಲುವಾಗಿಯೇ ‘ಗಡಿ ಮೆರವಣಿಗೆ’ಯನ್ನು ಆಯೋಜಿಸಲಾಗಿತ್ತು. ಪೂರ್ವ ಲಡಾಖ್‌ನ ಹಲವು ಗಡಿಭಾಗಗಳಿಗೆ ಹೋಗಿ, ಅಲ್ಲಿನ ಸ್ಥಿತಿಯನ್ನು ತೋರಿಸಲು ಯೋಜಿಸಲಾಗಿತ್ತು. ‘ಇದರಿಂದ ಶಾಂತಿ ಕದಡುವ ಅಪಾಯವಿದೆ’ ಎಂದ ಆಡಳಿತವು, ಮೆರವಣಿಗೆಗೆ ತಡೆಯೊಡ್ಡಿತು. ‘ಕೇಂದ್ರ ಸರ್ಕಾರಕ್ಕೆ ದೇಶದ ಭದ್ರತೆ ಬಗ್ಗೆ ಕಾಳಜಿಯೇ ಇಲ್ಲ. ಚುನಾವಣೆ ಗೆಲ್ಲುವುದಷ್ಟೇ ಅದಕ್ಕೆ ಮುಖ್ಯ’ ಎಂದು ಮೆರವಣಿಗೆ ಆಯೋಜಕರು ಆರೋಪಿಸಿದ್ದರು ಎನ್ನುವುದು ಇಲ್ಲಿ ಉಲ್ಲೇಖಾರ್ಹ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!