spot_img
Wednesday, January 22, 2025
spot_img

CEIR Portal ಮೂಲಕ ಪತ್ತೆಹಚ್ಚಲಾದ ಸುಮಾರು 1,30.000 ರೂ ಮೌಲ್ಯದ ಸುಮಾರು 13 ಮೊಬೈಲ್‌ಗಳ ಹಸ್ತಾಂತರ

ಜನಪ್ರತಿನಿಧಿ (ಉಡುಪಿ) : ದಿನಾಂಕ 01-01-2024 ರಿಂದ 31-03-2024 ರವರೆಗೆ ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರು ಕಳೆದುಕೊಂಡಿರುವ ಒಟ್ಟು 13 ಮೊಬೈಲ್ ಫೋನ್‌ಗಳನ್ನು CEIR Portal ಮೂಲಕ ಕುಂದಾಪುರ ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಸದ್ರಿ ಮೊಬೈಲ್‌ಗಳನ್ನು ದಿನಾಂಕ 11- 04-2024 ರಂದು ಅದರ ಮಾಲೀಕರಿಗೆ ಕುಂದಾಪುರ ಠಾಣೆಯಲ್ಲಿ ಹಸ್ತಾಂತರಿಸಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್‌ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಸಾರ್ವಜನಿಕರು ಕಳೆದುಕೊಂಡ ಮೊಬೈಲ್‌ ಫೋನನ್ನು CEIR Portal (Central Equipment Identity Register) ನಲ್ಲಿ ನಮೂದಿಸಿದ್ದಲ್ಲಿ ಪೊಲೀಸರು ಪತ್ತೆ ಮಾಡಲು ಅನುಕೂಲವಾಗುತ್ತದೆ ಅಲ್ಲದೇ ಸಾರ್ವಜನಿಕರು ಕಳೆದುಕೊಂಡ ಮೊಬೈಲ್ ಫೋನ್‌ಗಳ ದುರ್ಬಳಕೆಯನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ. ಆದುದರಿಂದ ಸಾರ್ವಜನಿಕರು ಕಳೆದುಕೊಂಡ ಮೊಬೈಲ್ ಫೋನ್‌ಗಳ ವಿವರಗಳನ್ನು CEIR Portal ನಲ್ಲಿ ದಾಖಲಿಸುವಂತೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ಅರುಣ್ ಕೆ ಐಪಿಎಸ್‌ ರವರು ಪ್ರಕಟಣೆಯಲ್ಲಿ ತಿಳಿಸದ್ದಾರೆ.

ಕುಂದಾಪುರ ಪೊಲೀಸ್ ಠಾಣೆಯಲ್ಲಿ ಈವರೆಗೆ ಒಟ್ಟು 53 ಮೊಬೈಲ್‌ಗಳನ್ನು CEIR ತಂತ್ರಾಂಶದ ಮೂಲಕ ಪತ್ತೆಹಚ್ಚಿ ಅದರ ಮಾಲೀಕರಿಗೆ ಈಗಾಗಲೇ ನೀಡಲಾಗಿರುತ್ತದೆ. ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ಅರುಣ್ ಕೆ ಐಪಿಎಸ್‌ ರವರ ಮಾರ್ಗದರ್ಶನದಲ್ಲಿ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸಿದ್ಧಲಿಂಗಪ್ಪ, ಹಾಗೂ ಪರಮೇಶ್ವರ ಹೆಗಡೆರವರ ಮತ್ತು ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಬೆಳ್ಳಿಯಪ್ಪರವರ ನಿರ್ದೇಶನದಂತೆ ಕುಂದಾಪುರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾ ಯು.ಬಿ. ನಂದಕುಮಾರ್ನರವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಠಾಣಾ ಉಪನಿರೀಕ್ಷಕರಾದ ವಿನಯ್ ಎಂ ಕೊರ್ಲಹಳ್ಳಿ. ಪ್ರಸಾದ್ ಕುಮಾರ್ ಕೆ. ಹಾಗೂ ಸಿಬ್ಬಂದಿಯವರಾದ ಸಿದ್ದಪ್ಪ ಸಕನಳ್ಳಿ, ಮಾರುತಿ ನಾಯ್ಕ ತಾಂತ್ರಿಕ ಸಿಬ್ಬಂದಿ ಅಶ್ವಿನ್ ಕುಮಾರ್‌ರವರು ಭಾಗವಹಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!