spot_img
Sunday, February 15, 2026
spot_img

ಶ್ರೀ ವೆಂಕಟರಮಣ ಕಾಲೇಜು ರಾಜ್ಯ ಮಟ್ಟದ 9 rank ಗಳೊಂದಿಗೆ ಶೇ.100 ಫಲಿತಾಂಶ

kundapura: ಪ್ರಸಕ್ತ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು ಶೇ 100 ಫಲಿತಾಂಶದೊಂದಿಗೆ ಸಾಧನೆ ಮೆರೆದಿದ್ದು , ವಿಜ್ಞಾನ ವಿಭಾಗದಲ್ಲಿ ವಿದ್ಯಾರ್ಥಿನಿ ಸಂಜನಾ ಎನ್ ಹಾಗೂ ಮಾನ್ಯ 592 ಅಂಕಗಳನ್ನು ಪಡೆಯುವುದರ ಮೂಲಕ ರಾಜ್ಯಕ್ಕೆ 7 ನೇ rank, ಸುಜಯಾ ಎಚ್‌ ಮತ್ತು ಅನಿರುದ್ದ್‌ ಶೇಟ್‌ 591 ಅಂಕಗಳೊಂದಿಗೆ 8 ನೇ rank , ಪೂಜಾ ಕಾರಂತ 590 ಅಂಕಗಳೊಂದಿಗೆ 9ನೇ rank, ನಮ್ರತಾ 589 ಅಂಕಗಳೊಂದಿಗೆ 10ನೇ rank ಪಡೆದಿರುತ್ತಾರೆ .

ವಾಣಿಜ್ಯ ವಿಭಾಗದಲ್ಲಿ ಸಿಂಚನಾ 590 ಅಂಕಗಳೊಂದಿಗೆ 8ನೇ rank, ವಿನಯ ಶ್ಯಾನುಭಾಗ್ 589 ಅಂಕಗಳೊಂದಿಗೆ 9 ನೇ rank, ಶ್ರದ್ಧಾ 588 ಅಂಕಗಳೊಂದಿಗೆ 10 ನೇ rank ಪಡೆದು ರಾಜ್ಯದ ಅಗ್ರ ಸ್ಥಾನಿಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

229 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಡಿಸ್ಟಿಂಕ್ಷನ್‌ ನಲ್ಲಿ 182 ವಿದ್ಯಾರ್ಥಿಗಳು, ಪ್ರಥಮ ಶ್ರೇಣಿಯಲ್ಲಿ 47 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

ಕಂಪ್ಯೂಟರ್‌ ಸೈನ್ಸ ನಲ್ಲಿ 20, ಸಂಸ್ಕ್ರತದಲ್ಲಿ 19, ಗಣಿತಶಾಸ್ತ್ರ ದಲ್ಲಿ 16, ರಸಾಯನ ಶಾಸ್ತ್ರ ದಲ್ಲಿ 07, ಲೆಕ್ಕಶಾಸ್ತ್ರ ದಲ್ಲಿ 05 ,ಕನ್ನಡದಲ್ಲಿ 04, ಸಂಖ್ಯಾಶಾಸ್ತ್ರದಲ್ಲಿ 03, ಜೀವಶಾಸ್ತ್ರದಲ್ಲಿ 03, ಅರ್ಥಶಾಸ್ತ್ರ ದಲ್ಲಿ 02 ವಿದ್ಯಾರ್ಥಿಗಳು ವಿಷಯವಾರು ನೂರಕ್ಕೆ ನೂರು ಅಂಕ ಪಡೆದಿದ್ದಾರೆ.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!