Wednesday, September 11, 2024

ಸರ್ಕಾರಿ ವಾಹಿನಿ ದೂರದರ್ಶನದಲ್ಲಿ ‘ದಿ ಕೇರಳ ಸ್ಟೋರಿ’ ಪ್ರಸಾರ | ಚುನಾವಣಾ ಆಯೋಗಕ್ಕೆ ಕಾಂಗ್ರೆಸ್‌ ದೂರು !

ಜನಪ್ರತಿನಿಧಿ (ನವದೆಹಲಿ) : ವಿವಾದಾತ್ಮಕ ‘ದಿ ಕೇರಳ ಸ್ಟೋರಿ’ ಸಿನೆಮಾವನ್ನು ಸರ್ಕಾರಿ ವಾಹಿನಿ ದೂರದರ್ಶನದಲ್ಲಿ ಪ್ರಸಾರ ಮಾಡದಂತೆ ತಡೆ ಹಿಡಿಯಬೇಕು ಎಂದು ಕಾಂಗ್ರೆಸ್ ಪಕ್ಷ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ʼದಿ ಕೇರಳ ಸ್ಟೋರಿʼ ಚಲನಚಿತ್ರವನ್ನು ಪ್ರಸಾರ ಮಾಡುವ ದೂರದರ್ಶನದ ನಿರ್ಧಾರದ ವಿರುದ್ಧ ಕೇರಳದ ಕಾಂಗ್ರೆಸ್ ಇಂದು(ಶುಕ್ರವಾರ) ಭಾರತೀಯ ಚುನಾವಣಾ ಆಯೋಗವನ್ನು (ಇಸಿಐ) ಸಂಪರ್ಕಿಸಿ ದೂರು ನೀಡಿದ್ದು, ಇದು ಆಡಳಿತಾರೂಢ ಬಿಜೆಪಿಯ ಚುನಾವಣಾ ಭವಿಷ್ಯವನ್ನು ಹೆಚ್ಚಿಸಲು ಸಮಾಜವನ್ನು ಧಾರ್ಮಿಕ ಆಧಾರದ ಮೇಲೆ ವಿಭಜಿಸುವ “ಮೌನ ಪ್ರಯತ್ನ” ಎಂದು ಆಕ್ರೋಶ ವ್ಯಕ್ತಪಡಿಸಿದೆ.

ʼದಿ ಕೇರಳ ಸ್ಟೋರಿʼ ಸಿನೆಮಾ ತೆರೆಕಂಡಾಗ ಸಿನೆಮಾ ತಂಡ ಸುಳ್ಳು ಮಾಹಿತಿಯ ಆಧಾರದ ಮೇಲೆ ಸಿಮಾವನ್ನು ತೆರೆ ಮೇಲೆ ತಂದು ಒಂದು ಸಿದ್ಧಾಂತದ ಪರವಾಗಿ ಕೆಲಸ ಮಾಡಿದೆ. ಇದು ಪ್ರೊಪಗಂಡಾ ಆಧಾರಿತ ಸಿನೆಮಾ ಎಂಬ ಆರೋಪಗಳು ಬಾರಿ ದೊಡ್ಡ ಮಟ್ಟದಲ್ಲಿ ಕೇಳಿ ಬಂದಿತ್ತು.

ಅದೂ ಕೂಡಾ ಕರ್ನಾಟಕ ರಾಜ್ಯ ಎಲೆಕ್ಷನ್ ಮೂಡ್‌ನಲ್ಲಿ ಇರುವಾಗ ಪಕ್ಕದ ಕೇರಳದಲ್ಲಿ ಸಿನಿಮಾ ವಾರ್ ಶುರುವಾಗಿತ್ತು. ಕಳೆದ ವರ್ಷ ಮೇ 5 ಶುಕ್ರವಾರ ರಿಲೀಸ್ ಆಗಿದ್ದ ಈ ಸಿನಿಮಾ,! ಹಿಂದೂ – ಮುಸ್ಲಿಂ ಸಂಘರ್ಷದ ವಿಚಾರದ ಸುತ್ತಲೇ ಹೆಣೆದಿರುವ ಈ ಸಿನಿಮಾ ಕಥೆ, ಬಲವಂತದ ಮತಾಂತರದ  ಮೇಲೆ ಚಿತ್ರೀಕರಸಿಲಾಗಿತ್ತು.

ʼದಿ ಕೇರಳ ಸ್ಟೋರಿ’ ಸಿನಿಮಾ ಕಥೆಯು ನೈಜ ಘಟನೆಗಳನ್ನು ಆಧರಿಸಿದೆ ಎಂದು ಚಿತ್ರದ ನಿರ್ದೇಶಕರು ಹೇಳಿದ್ದರು. 32 ಸಾವಿರ ಮಹಿಳೆಯರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡಲಾಗಿದೆ ಎಂದು ಈ ಈ ಸಿನಿಮಾ ಹೇಳಿತ್ತು. ಚಲನಚಿತ್ರದ ಟ್ರೇಲರ್ ಭಾರೀ ಸದ್ದು ಮಾಡಿತ್ತು. ಮಹಿಳೆಯರನ್ನು ಬಲವಂತವಾಗಿ ಮತಾಂತರ ಮಾಡಿ ನಂತರ ಈ ಮಹಿಳೆಯರನ್ನು ಭಯೋತ್ಪಾದಕರು ಐಸಿಸ್ ಆಳ್ವಿಕೆಯ ಸಿರಿಯಾಗೆ ಕರೆದುಕೊಂಡು ಹೋಗಿದ್ದಾರೆ ಎಂದು ಟ್ರೇಲರ್, ಟೀಸರ್‌, ಸಿನೆಮಾ ಹೇಳಿವೆ. ಕೇರಳದ 32 ಸಾವಿರ ಹೆಣ್ಣು ಮಕ್ಕಳ ಹೃದಯ ವಿದ್ರಾವಕ ಮತ್ತು ಕರುಳು ಹಿಂಡುವ ಕಥೆಗಳು ಅಂತಾ ಟ್ರೇಲರ್‌ನಲ್ಲಿ ಹೇಳಲಾಗಿದೆ. ಕೇರಳ ರಾಜ್ಯದಲ್ಲಿ ಮಹಿಳೆಯರ ಬಲವಂತದ ಮತಾಂತರ ಹಾಗೂ ಮೂಲಭೂತೀಕರಣದ ಮೇಲೆ ಈ ಸಿನಿಮಾ ಬೆಳಕು ಚೆಲ್ಲಲಿದೆ ಎಂದು ಯೂಟ್ಯೂಬ್‌ನಲ್ಲಿ ಹರಿಬಿಟ್ಟಿರುವ ಟ್ರೇಲರ್ ನಲ್ಲಿ ತೋರಿಸಲಾಗಿತ್ತು.

ಇದೊಂದು ಪ್ರೊಪಗಂಡಾ ಆಧಾರಿತ ಸಿನೆಮಾ ಮತ್ತು ಬಿಜೆಪಿ ಈ ಸಿನೆಮಾಕ್ಕಾಗಿ ದುರುದ್ದೇಶದಿಂದ ಫಂಡ್‌ ನೀಡಿದೆ ಎಂಬ ಆರೋಪ ತೀವ್ರ ಮಟ್ಟದಲ್ಲಿ ಕೇಳಿ ಬಂದ ನಂತರ, ಕೇರಳದ 32,000 ಮಹಿಳೆಯರು ಐಸಿಸ್‌ಗೆ ಸೇರಿದ್ದಾರೆ ಎಂದು ಈ ಹಿಂದೆ ತನ್ನ ಮೂಲ ಟ್ರೇಲರ್‌ನಲ್ಲಿ ಹೇಳಿಕೊಂಡಿದ್ದ ”ದಿ ಕೇರಳ ಸ್ಟೋರಿ” ಟ್ರೈಲರ್ ಅನ್ನು ಯೂಟ್ಯೂಬ್‌ನಲ್ಲಿ “ಕೇರಳದ ವಿವಿಧ ಭಾಗಗಳ ಮೂವರು ಯುವತಿಯರ ನೈಜ ಕಥೆಗಳನ್ನು” ಚಿತ್ರ ಹೇಳುತ್ತದೆ ಎಂದು ಬದಲಾಯಿಸಲಾಗಿದೆ. ಈ ಹಿಂದೆ 32,000 ಅಂಕಿಅಂಶಕ್ಕೆ ಸವಾಲು ಹಾಕಿದ್ದ ಕೇರಳ ಸಂಸದ ಶಶಿ ತರೂರ್ ಅವರು, “ಕೇರಳದ ವಾಸ್ತವತೆಯ ಸಂಪೂರ್ಣ ಉತ್ಪ್ರೇಕ್ಷೆ ಮತ್ತು ವಿರೂಪ ಮಾಡಲಾಗಿದೆ” ಎಂದು ಚಿತ್ರದ ನಿರ್ಮಾಪಕರನ್ನು ಟೀಕಿಸಿದ್ದರು.

ಹೊಸ ಟ್ರೇಲರ್ ವಿವರಣೆಯಲ್ಲೇನಿದೆ?: ಸನ್‌ಶೈನ್ ಪಿಕ್ಚರ್‌ನ ಅಧಿಕೃತ ಯೂಟ್ಯೂಬ್ ನಲ್ಲಿ ”ದಿ ಕೇರಳ ಸ್ಟೋರಿ” ಇತ್ತೀಚಿನ ಟ್ರೇಲರ್ ವಿವರಣೆಯು “ಕೇರಳದ ವಿವಿಧ ಭಾಗಗಳ ಮೂವರು ಯುವತಿಯರ ನೈಜ ಕಥೆಗಳನ್ನು ಆಧರಿಸಿದೆ. ಸಾವಿರಾರು ಮುಗ್ಧ ಮಹಿಳೆಯರನ್ನು ವ್ಯವಸ್ಥಿತವಾಗಿ ಪರಿವರ್ತಿಸಲಾಗಿದೆ, ತೀವ್ರಗಾಮಿಗೊಳಿಸಲಾಗಿದೆ ಮತ್ತು ಅವರ ಜೀವನ ನಾಶವಾಯಿತು” ಎಂದು ಬರೆದು ಬದಲಾಯಿಸಿದ್ದು, ಚಿತ್ರ ತಂಡ ಸುಳ್ಳು ಹೇಳಿ ಜನರ ಭಾವನೆಗಳನ್ನು ಕೆರಳಿಸುವ ಪ್ರಯತ್ನ ಮಾಡಿತ್ತು ಸಾಬೀತು ಮಾಡಿದಂತಾಗಿತ್ತು ಎನ್ನುವುದು ಉಲ್ಲೇಖಾರ್ಹ.

ಸದ್ಯ, ಸರ್ಕಾರಿ ವಾಹಿನಿ ದೂರದರ್ಶನದ ನಿರ್ಧಾರವು ಕೇರಳದ ಆಡಳಿತಾರೂಢ ಸಿಪಿಐ(ಎಂ) ಮತ್ತು ವಿರೋಧ ಪಕ್ಷವಾದ ಕಾಂಗ್ರೆಸ್ ಎರಡರಿಂದಲೂ ತೀವ್ರ ವಿರೋಧಕ್ಕೆ ಕಾರಣವಾಗಿದೆ. ಏಪ್ರಿಲ್ 5 ರಂದು ಚಲನಚಿತ್ರವನ್ನು ಪ್ರಸಾರ ಮಾಡುವುದಾಗಿ ದೂರದರ್ಶನ ಪ್ರಕಟಿಸಿದೆ. ಆಡಳಿತಾರೂಢ ಸಿಪಿಐ(ಎಂ) ಪಕ್ಷದ ಯುವ ಘಟಕವಾದ ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ (ಡಿವೈಎಫ್‌ಐ) ಚಲನಚಿತ್ರವನ್ನು ಪ್ರಸಾರ ಮಾಡುವ ನಿರ್ಧಾರದ ವಿರುದ್ಧ ಇಂದು (ಶುಕ್ರವಾರ) ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ನಿರ್ಧಾರದಿಂದ ಹಿಂದಕ್ಕೆ ಸರಿಯದಿದ್ದರೆ ಬೃಹತ್ ಪ್ರತಿಭಟನೆ ಆಯೋಜಿಸುವುದಾಗಿ ಘೋಷಣೆ ಮಾಡಿದೆ. ರಾಜ್ಯ ರಾಜಧಾನಿಯಲ್ಲಿರುವ ದೂರದರ್ಶನ ಕಚೇರಿಗೆ ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿಯೂ ಎಚ್ಚರಿಕೆ ನೀಡಿದೆ.

“ಅತ್ಯಂತ ದುರುದ್ದೇಶಪೂರಿತವಾಗಿರುವ ‘ದಿ ಕೇರಳ ಸ್ಟೋರಿ’ ಚಲನಚಿತ್ರವನ್ನು ಪ್ರಸಾರ ಮಾಡುವ ನಿರ್ಧಾರದಿಂದ ಹಿಂದೆ ಸರಿಯುವಂತೆ ದೂರದರ್ಶನಕ್ಕೆ ನಿರ್ದೇಶಿಸುವಂತೆ ಕೋರಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ ಡಿ ಸತೀಶನ್ ಅವರು ಇಂದು ಚುನಾವಣಾ ಆಯೋಗಕ್ಕೆ ಪತ್ರವನ್ನು ಕಳುಹಿಸಿದ್ದಾರೆ.

ಪತ್ರದಲ್ಲಿ, “ನಿಮಗೆ ತಿಳಿದಿರುವಂತೆ, ‘ದಿ ಕೇರಳ ಸ್ಟೋರಿ’ ಅತ್ಯಂತ ಸುಳ್ಳು ಭರವಸೆಗಳನ್ನು ಆಧರಿಸಿದ ಪ್ರಚಾರದ ಚಲನಚಿತ್ರವಾಗಿದೆ ಮತ್ತು ರಾಜ್ಯದ ಜನರ ಬಗ್ಗೆ ಮಸುಕಾದ ಚಿತ್ರಣವನ್ನು ಚಿತ್ರಿಸಲು ಪ್ರಯತ್ನಿಸುತ್ತದೆ. ಇದು ದೇಶವನ್ನು ಕೋಮುವಾದಿಯಾಗಿ ವಿಭಜಿಸುವ ಸಂಘಪರಿವಾರದ ವಿಷಕಾರಿ ಅಜೆಂಡಾದ ಭಾಗವಾಗಿದೆ ಎಂದು ನಾನು ನಂಬುತ್ತೇನೆ.

ಲೋಕಸಭೆ ಚುನಾವಣೆಗೂ ಮುನ್ನ ದೂರದರ್ಶನದ ಮೂಲಕ ಚಲನಚಿತ್ರವನ್ನು ಪ್ರಸಾರ ಮಾಡುವ ಕೇಂದ್ರ ಸರ್ಕಾರದ ನಿರ್ಧಾರವು ಆಡಳಿತಾರೂಢ ಬಿಜೆಪಿಯ ಚುನಾವಣಾ ಭವಿಷ್ಯವನ್ನು ಹೆಚ್ಚಿಸಲು ಧಾರ್ಮಿಕ ಆಧಾರದ ಮೇಲೆ ಸಮಾಜವನ್ನು ಒಡೆಯುವ ಮೌನ ಪ್ರಯತ್ನವಾಗಿದೆ ಎಂದು ಸತೀಶನ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

“ದೂರದರ್ಶನದ ನಿರ್ಧಾರವು ಕೇರಳದ ಜನರಿಗೆ ನೇರವಾಗಿ ಅವಮಾನವಾಗಿದೆ. ಇದು ಮಾದರಿ ಚುನಾವಣಾ ನೀತಿಯ ಉಲ್ಲಂಘನೆಯಾಗಿದೆ, ಇದು ಸಮಾಜವನ್ನು ಧಾರ್ಮಿಕ ಆಧಾರದ ಮೇಲೆ ವಿಭಜಿಸುವ ಅತ್ಯಂತ ಕೀಳುಮಟ್ಟದ ಪ್ರಯತ್ನವಾಗಿದೆ” ಎಂದು ಕಾಂಗ್ರೆಸ್ ಹೇಳಿದೆ.

 

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!