Sunday, September 8, 2024

ಐಪಿಎಲ್‌ನಲ್ಲಿ ಬ್ಯಾಟರುಗಳ ದರ್ಬಾರು

-ಎಸ್. ಜಗದೀಶ್ಚಂದ್ರ ಅಂಚನ್    ಸೂಟರ್ ಪೇಟೆ

ವಿಶ್ವದ ಅತ್ಯಂತ ಯಶಸ್ವೀ ಕ್ರಿಕೆಟ್ ಲೀಗ್ ‘ ಐಪಿಎಲ್ ಟ್ವೆಂಟಿ -20 ‘  ಅದ್ದೂರಿಯಾಗಿ ಆರಂಭಗೊಂಡು 13 ದಿನಗಳು ಕಳೆದಿವೆ. ಈ 13 ದಿನಗಳಲ್ಲಿ ನಡೆದ 16 ಪಂದ್ಯಗಳು  ಭಾರೀ ಜಬಾರ್ದಾಸ್ತಾಗಿ ನಡೆದು ಕ್ರಿಕೆಟ್ ಅಭಿಮಾನಿಗಳನ್ನು ಪುಳಕಗೊಳಿಸಿವೆ. ಅಲ್ಲದೆ ಇದುವರೆಗೆ ನಡೆದ ಎಲ್ಲಾ ಪಂದ್ಯಗಳೂ ಒಂದಕ್ಕಿಂತ ಒಂದು ಸೂಪರ್ ಆಗಿತ್ತು. ಬೌಲರುಗಳು ಹಾಗೂ ಬ್ಯಾಟರುಗಳು ತಮ್ಮ ತಾಕತ್ತನ್ನು ಮೆರೆದು ಪ್ರತಿ ಪಂದ್ಯಗಳು ಕುತೂಹಲಕಾರಿ ಆಗುವಂತೆ ಮಾಡಿದ್ದಾರೆ. ಆದರೆ, ಬ್ಯಾಟರುಗಳ ಅಬ್ಬರ ಮಾತ್ರ ಸ್ವಲ್ಪ ಗೌಣವಾಗಿತ್ತು. 16 ಪಂದ್ಯಗಳಲ್ಲಿ ಇದುವರೆಗೆ ಒಂದೇ ಒಂದು ಶತಕ ದಾಖಲಾಗಿಲ್ಲ. ಮುಖ್ಯವಾಗಿ ಐಪಿಎಲ್‌ ಎಂದಾಗ ಬ್ಯಾಟರುಗಳ ಪರಾಕ್ರಮ ಮೇಳೈಸುತ್ತದೆ. ಇದುವರೆಗಿನ 16 ಐಪಿಎಲ್‌ ಆವೃತ್ತಿಗಳಲ್ಲೂ ಅನೇಕ  ಬ್ಯಾಟರ್​ಗಳು ಭರ್ಜರಿ ಬ್ಯಾಟಿಂಗ್ ನಡೆಸಿ ಅತೀ ಹೆಚ್ಚು ರನ್ ಬಾರಿಸಿ ತಮ್ಮ ಐಪಿಎಲ್​ ಇನಿಂಗ್ಸ್​ನ್ನು ಸ್ಮರಣೀಯನ್ನಾಗಿಸಿದ್ದಾರೆ. ಅಂತಹ ಐದು ಸೂಪರ್ ಇನ್ನಿಂಗ್ಸ್ ಗಳನ್ನು ನಿಮ್ಮ ಕುತೂಹಲಕ್ಕಾಗಿ ಇಲ್ಲಿ ನೀಡಲಾಗಿದೆ.

175 ರನ್ ಹೊಡೆದ ಕ್ರಿಸ್​ಗೇಲ್​ : ಕ್ರಿಕೆಟ್ ಜಗತ್ತು ಕಂಡ ಅತ್ಯಂತ ಅಪಾಯಕಾರಿ ಬ್ಯಾಟರ್ ಎಂದರೆ ಅದು  ಕ್ರಿಸ್ ಗೇಲ್. ಇವರು  ಐಪಿಎಲ್​ ಟೂರ್ನಿಯ ಇನ್ನಿಂಗ್ಸ್​ವೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ. 2013ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದ ಕ್ರಿಸ್ ಗೇಲ್  ಪುಣೆ ವಾರಿಯರ್ಸ್ ತಂಡದ ವಿರುದ್ಧ 66 ಎಸೆತಗಳಲ್ಲಿ 175 ರನ್ ಬಾರಿಸಿ ಅಬ್ಬರಿಸಿದ್ದರು. ಈ ಸ್ಫೋಟಕ ಇನ್ನಿಂಗ್ಸ್​​ನಲ್ಲಿ ಗೇಲ್ ಕೇವಲ 30 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ಬರೆದಿದ್ದರು. ಇದು ಐಪಿಎಲ್‌ನಲ್ಲಿ ಈಗಲೂ ದಾಖಲೆಯಾಗಿ ಉಳಿದಿದೆ.
ಚೊಚ್ಚಲ ಪಂದ್ಯದಲ್ಲೇ 158ರನ್ ಬಾರಿಸಿದ ಮೆಕಲಮ್​ : 2008ರ ಐಪಿಎಲ್ ಉದ್ಘಾಟನಾ ಆವೃತ್ತಿಯ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್​ನ ಸ್ಪೋಟಕ ಆರಂಭಿಕ ಬ್ಯಾಟರ್  ಬ್ರೆಂಡನ್ ಮೆಕಲಮ್ 73 ಎಸೆತಗಳಲ್ಲಿ 158 ರನ್ ಬಾರಿಸುವ ಮೂಲಕ ಐಪಿಎಲ್‌ ವೇದಿಕೆಗೆ ಮಿಂಚಿನ ಬೆಳಕು ತಂದಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಪರ ಆಡಿದ ಅವರು ತಮ್ಮ ಅಜೇಯ ಇನ್ನಿಂಗ್ಸ್​​ನಲ್ಲಿ 10 ಬೌಂಡರಿಗಳು ಮತ್ತು 13 ಸಿಕ್ಸರ್​​ ಬಾರಿಸಿದ್ದರು. ಅವರು ಬಾರಿಸಿದ 158ರನ್,  ವೈಯಕ್ತಿಕ ಗರಿಷ್ಠ ರನ್ ಬಾರಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದೆ.
140ರನ್ ಬಾರಿಸಿ ಅಬ್ಬರಿಸಿದ ಡಿಕಾಕ್​ : ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ನಡುವಿನ 2022ರ ಆವೃತ್ತಿಯ ಐಪಿಎಲ್ ಪಂದ್ಯದಲ್ಲಿ 70 ಎಸೆತಗಳಲ್ಲಿ ಅಜೇಯ 140 ರನ್ ಗಳಿಸಿದ್ದಾರೆ. ಅಜೇಯ 68 ರನ್ ಗಳಿಸಿದ ಕೆಎಲ್ ರಾಹುಲ್ ಅವರೊಂದಿಗೆ ಕ್ವಿಂಟನ್​ ಡಿ ಕಾಕ್  ಅಜೇಯ 210 ರನ್​ಗಳ ಜೊತೆಯಾಟ ನೀಡಿದ್ದರು. ಅವರ ಅಬ್ಬರದ ಇನ್ನಿಂಗ್ಸ್​ನಲ್ಲಿ 10 ಬೌಂಡರಿಗಳು ಮತ್ತು 10 ಸಿಕ್ಸರ್​ಗಳು ಒಳಗೊಂಡಿತ್ತು.
133ರನ್ ಬಾರಿಸಿದ ವಿಲಿಯರ್ಸ್​​ : ದಕ್ಷಿಣ ಆಫ್ರಿಕಾದ ಸ್ಟೈಲಿಶ್ ಬ್ಯಾಟರ್ ಎಬಿಡಿ ವಿಲಿಯರ್ಸ್ 2015ರಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆದ ಐಪಿಎಲ್ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿ ಮಿಂಚಿದ್ದರು. 59 ಎಸೆತಗಳಲ್ಲಿ 133 ರನ್ ಬಾರಿಸಿದ ಇವರು  ವಿರಾಟ್ ಕೊಹ್ಲಿ ಅವರೊಂದಿಗೆ  215 ರನ್​ಗಳ ಜೊತೆಯಾಟ ಆಡಿದ್ದರು.ಅವರ ಈ ಕಲಾತ್ಮಕ ಬ್ಯಾಟಿಂಗ್‌ನಲ್ಲಿ 19 ಬೌಂಡರಿ,  4 ಸಿಕ್ಸರ್​ ಬಾರಿಸಲ್ಪಟ್ಟಿದೆ.
ಕನ್ನಡಿಗ ಕೆಎಲ್​. ರಾಹುಲ್​ ಸಾಹಸ : ಐಪಿಎಲ್‌ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಟಾಪರ್ 5ನಲ್ಲಿ ಕನ್ನಡಿಗ ಕೆಎಲ್ ರಾಹುಲ್ ಸ್ಥಾನ ಪಡೆದಿದ್ದಾರೆ. ಯುಎಇಯಲ್ಲಿ ಆಡಿದ ಐಪಿಎಲ್ 2020ರ ಟೂರ್ನಿಯಲ್ಲಿ  ಕಿಂಗ್ಸ್ ಇಲೆವೆನ್  ಪಂಜಾಬ್ ತಂಡದ ನಾಯಕರಾಗಿದ್ದ ಕೆಎಲ್ ರಾಹುಲ್ ರಾಯಲ್ ಚಾಲೆಂಜರ್ಸ್  ಬೆಂಗಳೂರು ವಿರುದ್ಧ 132 ರನ್ ಬಾರಿಸಿ ಮಿಂಚಿದ್ದಾರೆ.  69 ಎಸೆತಗಳಲ್ಲಿ 14 ಬೌಂಡರಿ ಮತ್ತು 7 ಸಿಕ್ಸರ್ ಬಾರಿಸಿದ ರಾಹುಲ್ ಅತ್ಯಧಿಕ ರನ್ ಬಾರಿಸಿದವರ ಪಟ್ಟಿಯಲ್ಲಿ 5ನೇ ಸ್ಥಾನ ಹೊಂದಿದ್ದಾರೆ. ಮಾತ್ರವಲ್ಲ ಈ ಟಾಪರ್  ಪಟ್ಟಿಯಲ್ಲಿ ರಾಹುಲ್​ ಏಕೈಕ ಭಾರತೀಯ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!