Wednesday, September 11, 2024

ಮತದಾರರ ದರವೂ ಏರುತ್ತಿದೆ!

ಪ್ರಸ್ತುತ ರಾಜಕಾರಣದ ಪರಿಣಾಮ ಮತದಾರರೂ ಕೂಡಾ ಭ್ರಷ್ಟರಾಗಿದ್ದಾರೆ. ಮತವನ್ನು ಮಾರಿಕೊಳ್ಳುವ ಸ್ಥಿತಿಗೆ ಮತದಾರರ ಬಂದು ತಲುಪಿದ್ದಾನೆ. ಒಂದೇಡೆ ಉರಿ ಬಿಸಿಲ ಝಳ, ಇನ್ನೊಂದೆಡೆ ಏರುತ್ತಿರುವ ಚುನಾವಣಾ ಕಾವು, ಇದರ ನಡುವೆ ಮತದಾರರ ದರವೂ ಕೂಡಾ ಹೆಚ್ಚಳವಾಗಿದೆ. ಕಳೆದ ಬಾರಿಯ ಚುನಾವಣೆಗಿಂತ ಈ ಬಾರಿಯ ಚುನಾವಣೆಯಲ್ಲಿ ಕಾಂಚಣವೂ ಸದ್ಧು ಮಾಡುತ್ತಿದೆ. ಚುನಾವಣೆ ಎಂದಾಗ ಮೊದಲು ಹಣ. ಮತದಾರರನ್ನು ರಾಜಕಾರಣಿಗಳು ಆ ರೀತಿಯಲ್ಲಿ ಭೃಷ್ಟರನ್ನಾಗಿ ಮಾಡಿದ್ದಾರೆ. ಪಕ್ಷಗಳ ಕಾರ್ಯಕರ್ತರು ಚುನಾವಣಾ ಪ್ರಚಾರಕ್ಕೆ ಹೋದಾಗ ಜನ ಅವರ ಕೈಯನ್ನೇ ಕಾಣುವ ಸ್ಥಿತಿ ಬಂದು ಬಿಟ್ಟಿದೆ. ಜನರೇ ಈಗ ಸಂಕೋಚ ಇಲ್ಲದೆ ಬಾಯಿ ಬಿಟ್ಟು ಕೇಳುತ್ತಿದ್ದಾರೆ. ಪಕ್ಷ ಸಿದ್ದಾಂತ, ನಿಷ್ಠೆ ಈಗ ಎಲ್ಲವೂ ಮಾಯವಾಗಿದೆ. ಒಂದು ಓಟಿಗೆ ಎಷ್ಟು ಕೊಡುತ್ತಾರೆ ಎನ್ನುವುದು ಇಂದಿನ ವಾಸ್ತವ! ದಶಕಗಳ ಹಿಂದೆಯೇ ಮತವನ್ನು ನೋಟಿಗೆ ಮಾರಾಟ ಮಾಡುವ ಪರಿಪಾಠ ಬೆಳೆಯಿತು. ಎಲ್ಲ ಪಕ್ಷಗಳಿಗೂ ಇದು ವ್ಯಾಪಿಸಿತು. ಹಣ ಕೊಟ್ಟು ಓಟು ಪಡೆಯಬಹುದು ಎನ್ನುವುದನ್ನು ರಾಜಕೀಯ ಪಕ್ಷಗಳು ಮನಗಂಡವು. ಅದು ಇವತ್ತು ಚುನಾವಣೆಗೆ ಹಣವೇ ಮುಖ್ಯ ಎನ್ನುವಷ್ಟರ ಮಟ್ಟಿಗೆ ಬಂದು ನಿಂತಿದೆ. ಜನರು ಕೂಡಾ ಅದಕ್ಕೆ ಹೊಂದಿಕೊಂಡಿದ್ದಾರೆ. ಬದ್ದತೆಯನ್ನು ಕಳೆದುಕೊಂಡಿದ್ದಾರೆ. ಚುನಾವಣೆ ಕೂಡಾ ವ್ಯವಹಾರವಾಗಿ ಪರಿಣಮಿಸಿದೆ. ಇಲಾಖೆಗಳು ಪಾರದರ್ಶಕ ಮತದಾನಕ್ಕೆ ಶತಾಯ ಗತಾಯ ಪ್ರಯತ್ನ ಮಾಡುತ್ತಿದ್ದರೂ ಕೂಡಾ ಹಣ ಹಂಚಿಕೆಯನ್ನು ತಡೆಯುವುದು ಮಾತ್ರ ಸಾಧ್ಯವಾಗುತ್ತಿಲ್ಲ. ಚುನಾವಣೆ ಘೋಷಣೆಯಾದ ಬಳಿಕವೇ ಇಲಾಖೆಗಳು ಎಚ್ಚೆತ್ತುಕೊಂಡು ಚೆಕ್ ಪೋಸ್ಟ್‌ಗಳಲ್ಲಿ ಬಿಗಿ ಭದ್ರತೆ ಮಾಡುತ್ತದೆ. ಆದರೆ ಅದಕ್ಕಿಂತ ಮೊದಲೇ ಆಯಕಟ್ಟಿನ ಸ್ಥಳಗಳಲ್ಲಿ ಹಣ ತಲುಪಿರುತ್ತದೆ. ಈ ಹಿಂದಿನ ಲೋಕಸಭೆ ಚುನಾವಣೆಗಿಂತ ಈ ಬಾರಿಯ ಚುನಾವಣೆಯ ಮತದಾರರ ದರ ಹೆಚ್ಚಳವಾಗಿದೆ. ಇದು ರಾಜಕಾರಣಿಗಳಿಗೆ ತಲೆ ನೋವಿನ ಸಂಗತಿಯಾಗಿದೆ. ಕಾರ್ಯಕರ್ತರ ಸಂಭಾವನೆಯೂ ಕೂಡಾ ಹೆಚ್ಚಳವಾಗಿದೆ. ಮತದಾರರ ದರಕ್ಕೆ ಹೋಲಿಸಿದರೆ ಕಾರ್ಯಕರ್ತರ ಸಂಭಾವನೆ ಎಲ್ಲಿಗೂ ಸಾಲದು. ತಳ ಮಟ್ಟದ ಕಾರ್ಯಕರ್ತರು ಬಿಸಿಲು ಮಳೆಯಲ್ಲಿ ಮನೆಮನೆಗೆ ತೆರಳಿ ಮತ ಯಾಚನೆ ಮಾಡುತ್ತಾನೆ. ಆದರೆ ಆತನಿಗೆ ಒಂದು ಗೌರವಯುತವಾದ ಸಂಭಾವನೆ ನೀಡಲಾಗುತ್ತಿಲ್ಲ ಎನ್ನುವ ಆರೋಪಗಳು ಕೇಳಿ ಬರುತ್ತಿದೆ. ಇದು ಎಲ್ಲ ಪಕ್ಷದ ಕಥೆ ಒಂದೇ ರೀತಿಯಾಗಿದೆ. ಕೆಲವೆಡೆ ಕಾರ್ಯಕರ್ತರ ಸಂಭಾವನೆ ವಿಚಾರವಾಗಿಯೇ ಅಲ್ಲಲ್ಲಿ ಘರ್ಷಣೆ, ವೈಮನಸ್ಸುಗಳು ಉಂಟಾಗುತ್ತದೆ. ಚುನಾವಣೆ ಎಂದಾಗ ಹಣ ಎನ್ನುವಷ್ಟರ ಮಟ್ಟಿಗೆ ಮತದಾರರು ಬಂದು ಬಿಟ್ಟಿದ್ದಾರೆ. ಪ್ರತಿ ಪಕ್ಷದಿಂದಲೂ ಕೂಡಾ ಮುಲಾಜಿಲ್ಲದೆ ಹಣ ತಗೆದುಕೊಳ್ಳುವ ಪರಿಪಾಠ ಬಂದು ಬಿಟ್ಟಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಪಾಯಕಾರಿ ಎಂಬುದು ಗೊತ್ತಿದ್ದರೂ ಕೂಡಾ ಮತ್ತೆ ಪಾರದರ್ಶಕ ವ್ಯವಸ್ಥೆಗೆ ಮರಳುವುದು ಕಷ್ಟವೆ. ರಾಜಕೀಯ ಪಕ್ಷಗಳಂತೂ ಹಣ ಕೊಡದೆ ಚುನಾವಣೆ ಹೋಗುವ ಪರಿಸ್ಥಿತಿಯಲ್ಲಿ ಇಲ್ಲ. ಮತದಾನ ಎನ್ನುವುದು ಅರ್ಥ ಕಳೆದುಕೊಳ್ಳುತ್ತಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!