Wednesday, September 11, 2024

ಉಡುಪಿ ಚಿಕ್ಕಮಗಳೂರು : ನಾಮಪತ್ರ ಸಲ್ಲಿಕೆ ವೇಳೆ ಆಸ್ತಿ ವಿವರ ಹಂಚಿಕೊಂಡ ಪೂಜಾರಿ ಮತ್ತು ಹೆಗ್ಡೆ !

ಜನಪ್ರತಿನಿಧಿ (ಉಡುಪಿ, ಚಿಕ್ಕಮಗಳೂರು) : ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ. ಜಯಪ್ರಕಾಶ್ ಹೆಗ್ಡೆ ಉಮೇದುವಾರಿಕೆ ಸಲ್ಲಿಸಿದರು. ನಾಮಪತ್ರ ಸಲ್ಲಿಕೆ ವೇಳೆ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕೆ. ಜಯಪ್ರಕಾಶ್ ಹೆಗ್ಡೆ ತಮ್ಮ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ.

ಕೋಟಾ ಶ್ರೀನಿವಾಸ ಪೂಜಾರಿ ಅವರ ಆಸ್ತಿ ವಿವರ :

2023-24ರ ಆರ್ಥಿಕ ವರ್ಷವೊಂದರಲ್ಲಿ 21,25, 910 ರೂ. ಒಟ್ಟು ಆದಾಯವನ್ನು ಹೊಂದಿದ್ದು, ಅವರ ಮಗ ಶಶಿಧರ್ ಅವರ ಒಟ್ಟು ಆದಾಯ 5,01.260 ರೂ ಆಗಿದೆ ಎಂದು ಅವರು ನಾಮಪತ್ರ ಸಲ್ಲಿಕೆಯ ವೇಳೆ ಅವರು ಘೋಷಿಸಿಕೊಂಡಿದ್ದಾರೆ.

ಅವರ ಬೇರೆ ಬೇರೆ ಬ್ಯಾಂಕ್ ಖಾತೆಗಳಲ್ಲಿರುವ 8,63,232.76 ರೂಗಳನ್ನು ಒಳಗೊಂಡು ಅವರಲ್ಲಿ 90,000 ರೂ ನಗದು ಹಣವಿದೆ ಎಂದು ಅವರು ಘೋಷಿಸಿಕೊಂಡಿದ್ದಾರೆ.

63,850 ರೂ. ಬೆಲೆ ಬಾಳುವ 10 ಗ್ರಾಂ ತೂಕದ ಒಂದು ಉಂಗುರು, 1,50,000 ರೂ ಬೆಲೆಬಾಳುವ 2006 ಮಾಡೆಲ್‍ನ ಮಾರುತಿ ಆಲ್ಟೋ ಕಾರ್, 22,00000 ರೂ ಬೆಲೆ ಬಾಳುವ ಟೊಯೊಟಾ ಇನ್ನೋವಾ ಕಾರ್ ಹೊಂದಿದ್ದಾರೆ. ಒಟ್ಟು 31,95,082.76 ರೂ. ಒಟ್ಟು ಚರಾಸ್ತಿ ಹೊಂದಿದ್ದಾರೆ.

ಕೋಟತಟ್ಟು ಗ್ರಾಮದಲ್ಲಿ ಸುಮಾರು 8,00,000 ರೂ. ಬೆಲೆ ಬಾಳುವ 13 ಸೆಂಟ್ಸ್ ಕೃಷಿ ಭೂಮಿಯನ್ನು,  ಬೆಂಗಳೂರಿನ ಬನಶಂಕರಿಯಲ್ಲಿ 40,00,000 ರೂ. ಬೆಲೆಬಾಳುವ ಸರ್ಕಾರಿ ನಿವೇಶನ ಹಂಚಿಕೆಯಲ್ಲಿ ದೊರೆತ ಕೃಷಿಯೇತರ ಭೂಮಿಯನ್ನು ಹೊಂದಿದ್ದಾರೆ. ಇದನ್ನು ಬಿಟ್ಟು 40,64,924 ರೂ. ಸಾಲ ಅವರ ಮೇಲಿದೆ.

ಕೋಟ ಶ್ರೀನಿವಾಸ ಪೂಜಾರಿ ಅವರ ಪತ್ನಿ ಶಾಂತಾ ಅವರು 20,000 ರೂ ನಗದನ್ನು ಹೊಂದಿದ್ದು,  ಅವರ ಬೇರೆ ಬೇರೆ ಬ್ಯಾಂಕ್ ಖಾತೆಗಳಲ್ಲಿ ಒಟ್ಟು  52,027.5 ರೂ. ಹೊಂದಿದ್ದಾರೆ.

9,57,000 ರೂ ಬೆಲೆ ಬಾಳುವ 150 ಗ್ರಾಂ ಚಿನ್ನದ ಆಭರಣಗಳನ್ನು ಒಳಗೊಂಡು ಒಟ್ಟು 10,29,027.5 ರೂ. ಚರಾಸ್ತಿಯನ್ನು ಅವರು ಹೊಂದಿದ್ದಾರೆ.

ಇನ್ನು, ಸುಮಾರು 55,00,000 ರೂ ಬೆಲೆಬಾಳುವ 56 ಸೆಂಟಸ್ ಕೃಷಿ ಭೂಮಿ, ಗಿಳಿಯಾರಿನಲ್ಲಿ ಐದು ಲಕ್ಷ ಬೆಲೆ ಬಾಳುವ 13.50 ಸೆಂಟ್ಸ್ ಕೃಷಿಯೇತರ ಭೂಮಿಯನ್ನು ಅವರು ಹೊಂದಿದ್ದಾರೆ. ಗಿಳಿಯಾರಿನಲ್ಲಿ ಸುಮಾರು 97,50,000 ರೂ ಬೆಲೆ ಬಾಳುವ 4779.81 ಸ್ಕ್ವೇರ್ ಫೀಟ್ ಮನೆಯೂ ಇವರ ಹೆಸರಿನಲ್ಲೇ ಇದೆ. 35,43,757 ರೂ. ಮನೆ ಮೇಲಿನ ಸಾಲವೂ ಕೂಡ ಶಾಂತಾ ಅವರ ಮೇಲೆ ಇದೆ.

ಇನ್ನು ಕೋಟಾ ಶ್ರೀನಿವಾಸ ಪೂಜಾರಿ ಅವರ ಮೊದಲ ಮಗಳು ಸ್ವಾತಿ ಅವರಲ್ಲಿ 10,000 ನಗದು, ಬ್ಯಾಂಕ್ ಖಾತೆಯಲ್ಲಿ 11,000 ರೂ. ಕೋಟಾ ಪೆÇೀಸ್ಟ್ ಆಫೀಸಲ್ಲಿ 30,000 ಆರ್‍ಡಿ ಫಂಡ್ ಹಾಗೂ 3,19,000 ರೂ ಬೆಲೆ ಬಾಳುವ 50 ಗ್ರಾಂ ಚಿನ್ನವನ್ನು ಒಳಗೊಂಡು 3,70,000 ರೂ ಚರಾಸ್ತಿಯನ್ನು ಹೊಂದಿದ್ದಾರೆ.

ಮಗ ಶಶಿಧರ್ ಅವರಲ್ಲಿ 25,000 ರೂ ನಗದು ಹಣವಿದ್ದು, ವಿವಿಧ ಬ್ಯಾಂಕ್ ಖಾತೆಗಳಲ್ಲಿ ಒಟ್ಟು 22,254.74 ರೂ. ಎಲ್‍ಐಸಿ ಎರಡು ಖಾತೆಗಳಲ್ಲಿ ಒಟ್ಟು ಎರಡು ಲಕ್ಷ, 16.5 ಲಕ್ಷ ಬೆಲೆ ಬಾಳುವ 2020ರ ಮಾಡೆಲ್ ಹೊಂಡಾ ಸಿಟಿ ಕಾರ್, 63,850 ರೂ. ಬೆಲೆ ಬಾಳುವ 10 ಗ್ರಾಂ ಚಿನ್ನಾಭರಣವನ್ನು ಒಳಗೊಂಡು ಒಟ್ಟು 17,59,935.74 ಮೌಲ್ಯದ ಚರಾಸ್ತಿ ಹೊಂದಿದ್ದಾರೆ.

ಚಾಂತಾರು ಗ್ರಾಮದಲ್ಲಿ 30 ಲಕ್ಷ ಬೆಲೆಬಾಳುವ 20 ಸೆಂಟ್ಸ್ ಕೃಷಿ ಭೂಮಿಯನ್ನು ಹೊಂದಿದ್ದಾರೆ. ಶಶಿಧರ್ ಅವರ ಮೇಲೆ 28,35,964 ರೂ. ಸಾಲದ ಹೊರೆ ಇದೆ.

ಮತ್ತೋರ್ವ ಮಗಳು ಶ್ರುತಿ ಅವರ ಬ್ಯಾಂಕ್ ಖಾತೆಯಲ್ಲಿ 2,616.77 ರೂ. ಹಾಗೂ 63,850 ರೂ. ಬೆಲೆ ಬಾಳುವ 10 ಗ್ರಾಂ ಚಿನ್ನಾಭರಣವನ್ನು ಒಳಗೊಂಡು 66,046.77 ರೂ. ಒಟ್ಟು ಚರಾಸ್ತಿಯನ್ನು ಹೊಂದಿದ್ದಾರೆ ಎಂದು ನಾಮಪತ್ರ ಸಲ್ಲಿಕೆ ವೇಳೆ ಶ್ರೀನಿವಾಸ ಪೂಜಾರಿ ತಮ್ಮ ಆಸ್ತಿ ವಿವರ ಹಂಚಿಕೊಂಡಿದ್ದಾರೆ.

ಕೆ. ಜಯಪ್ರಕಾಶ್ ಹೆಗ್ಡೆ ಅವರ ಆಸ್ತಿ ವಿವರ :

2023-24ರ ಆರ್ಥಿಕ ವರ್ಷವೊಂದರಲ್ಲಿ ಕೆ. ಜಯಪ್ರಕಾಶ್ ಹೆಗ್ಡೆ 67,76,753 ರೂ. ವಾರ್ಷಿಕ ಆದಾಯ ಹೊಂದಿದರೇ, ಅವರ ಪತ್ನಿ ಶೋಭಾ ಜೆ. ಹೆಗ್ಡೆ 34,93,486 ರೂ. ವಾರ್ಷಿಕ ಆದಾಯ ಹೊಂದಿದ್ದಾರೆ ಎಂದು ಅವರು ತಮ್ಮ ನಾಮ ಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಘೋಷಿಸಿಕೊಂಡಿದ್ದಾರೆ.

85 ಸಾವಿರ ನಗದು ಹೊಂದಿರುವ ಹೆಗ್ಡೆ 3,136,326.07 ರೂ. ವಿವಿಧ ಬ್ಯಾಂಕ್‍ಗಳಲ್ಲಿ ಹೊಂದಿದ್ದಲ್ಲದೇ, 1,84,000 ರೂ. ಬೆಲೆ ಬಾಳುವ 30 ಗ್ರಾಂ. ಚಿನ್ನ ಮತ್ತು ವಜ್ರದ ಆಭರಣ ಹಾಗೂ 1,29,000 ರೂ. ಮೌಲ್ಯದ 1700 ಗ್ರಾಂ. ಬೆಳ್ಳಿಯ ಸಮಾಗ್ರಿಗಳನ್ನು ಸೇರಿ ಒಟ್ಟು 35,34,326.07 ಚರಾಸ್ತಿಯನ್ನು ಹೊಂದಿದ್ದಾರೆ.

ಹಾಲಾಡಿಯಲ್ಲಿ 11,25,000 ರೂ. ಬೆಲೆ ಬಾಳುವ 2.25 ಎಕರೆಯ ಪಿತ್ರಾರ್ಜಿತ ಕೃಷಿ ಭೂಮಿ, ಕೊರ್ಗಿಯಲ್ಲಿ ಸುಮಾರು 29,35,000 ರೂ ಬೆಲೆಬಾಳುವ ಪಿತ್ರಾರ್ಜಿತ 5.87 ಎಕರೆಯ ಕೃಷಿ ಭೂಮಿ, ಹಾಗೂ 7,13,000 ರೂ. ಬೆಲೆ ಬಾಳುವ 1 ಎಕರೆ ಸ್ವಂತ ಕೃಷಿ ಭೂಮಿ ಹೊಂದಿದ್ದಲ್ಲದೇ, ಅತ್ತಿಬೆಲೆ ಇಂಡಸ್ಟ್ರೀಯಲ್ ಏರಿಯಾ ಬೆಂಗಳೂರಿನಲ್ಲಿ ತಂದೆ ಜಯಪ್ರಕಾಶ್ ಹೆಗ್ಡೆ ಅವರ ಹೆಸರಿಗೆ ಬರೆದ 2 ಕೋಟಿ 48 ಲಕ್ಷ ಬೆಲೆ ಬಾಳುವ ಕೃಷಿಯೇತರ ಭೂಮಿಯನ್ನು ಹೊಂದಿದ್ದಾರೆ.

4,50,000 ರೂ. ಬೆಲೆ ಬಾಳುವ 5000 ಸ್ಕ್ವೇರ್ ಫೀಟ್ ಕಮರ್ಷಿಯಲ್ ಬಿಲ್ಡಿಂಗ್, ಎಚ್‍ಎಎಲ್ ಎರಡನೇ ಹಂತ ಬೆಂಗಳೂರಿನಲ್ಲಿ ಸುಮಾರು 4 ಕೋಟಿ 35 ಲಕ್ಷ ರೂ. ಬೆಲೆಬಾಳುವ 3588 ಸ್ಕ್ವೇರ್ ಫೀಟ್ ಜಾಗ ಹೊಂದಿದ್ದಾರೆ.

ಮಾತ್ರವಲ್ಲದೇ, ಇಂದಿರಾನಗರ ಬೆಂಗಳೂರಿನಲ್ಲಿ 13,12,61,587.09 ರೂ. ಬೆಲೆ ಬಾಳುವ ಮನೆ ಹೊಂದಿದ್ದಾರೆ. ಇನ್ನು, ಕೆ. ಜಯಪ್ರಕಾಶ್ ಹೆಗ್ಡೆ ಅವರ ಮೇಲೆ 15 ಲಕ್ಷ ರೂ. ಆಶಿರ್ವಾದ್ ಪೈಪ್ಸ್ ಬೆಂಗಳೂರು ಅವರಿಂದ ಗುತ್ತಿಗೆ ಠೇವಣಿ ಹಣವನ್ನು ಪಡೆದಿರುವುದಾಗಿ ಅವರು ಘೋಷಿಸಿಕೊಂಡಿದ್ದಾರೆ.

ಇನ್ನು, ಪತ್ನಿ ಶೋಭಾ ಜೆ. ಹೆಗ್ಡೆ 92 ಸಾವಿರ ನಗದು ಹಣವನ್ನು ಹೊಂದಿದ್ದು, ಬೇರೆ ಬೇರೆ ಬ್ಯಾಂಕ್ ಖಾತೆಗಳಲ್ಲಿ 1,613,544.59 ರೂ. ಹೊಂದಿದ್ದಲ್ಲದೇ, ಸುಮಾರು 64,41,000 ರೂ ಬೆಲೆ ಬಾಳುವ 1050 ಗ್ರಾಂ. ಚಿನ್ನಾಭರಣವನ್ನು ಒಳಗೊಂಡು ಒಟ್ಟು 81,46,544.59 ರೂ. ಬೆಲೆಬಾಳುವ ಚರಾಸ್ತಿಯನ್ನು ಹೊಂದಿದ್ದಾರೆ.

ಬಳ್ಕೂರು ಗ್ರಾಮದಲ್ಲಿ ಸುಮಾರು 18,40,000 ರೂ ಬೆಲೆ ಬಾಳುವ 3.68 ಎಕರೆ ಕೃಷಿ ಭೂಮಿ, 3,60,000 ರೂ ಬೆಲೆಬಾಳುವ ಸುಮಾರು 0.71 ಎಕರೆ, 3, 85,000 ರೂ. ಬೆಲೆ ಬಾಳುವ 0.77 ಎಕರೆ, 3,15,000 ರೂ. ಬೆಲೆ ಬಾಳುವ 0.63 ಎಕರೆ, 44,05,000 ರೂ. ಬೆಲೆಬಾಳುವ 8.81 ಎಕರೆ, ಮಣೂರಿನಲ್ಲಿ 9,96,000 ರೂ ಬೆಲೆ ಬಾಳುವ  1.66 ಎಕರೆ, ಬಳ್ಕೂರಿನಲ್ಲಿ 4,08,000 ರೂ. ಬೆಲೆ ಬಾಳುವ 0.34 ಎಕರೆ, 15,91,180 ರೂ ಬೆಲೆ ಬಾಳುವ 8.56 ಎಕರೆ, 2 ಲಕ್ಷ ಬೆಲೆ ಬಾಳುವ 0.20 ಎಕರೆ ಸ್ವಂತ ಹಾಗೂ ಪಿತ್ರಾರ್ಜಿತ ಕೃಷಿ ಭೂಮಿಯನ್ನು ಹೊಂದಿದ್ದಾರೆ. ಒಟ್ಟು ಶೋಭಾ ಅವರ ಹೆಸರಿನಲ್ಲಿ 1,05,00,180 ರೂ. ಮೌಲ್ಯದ ಕೃಷಿ ಭೂಮಿ ಇದೆ ಎಂದು ಜಯಪ್ರಕಾಶ್ ಹೆಗ್ಡೆ ತಮ್ಮ ನಾಮಪತ್ರ ಸಲ್ಲಿಕೆ ವೇಳೆ ಆಸ್ತಿ ವಿವರ ಹಂಚಿಕೊಂಡಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!