Wednesday, September 11, 2024

ಚುನಾವಣಾ ವೆಚ್ಚದ ಮೇಲೆ ಕಣ್ಗಾವಲಿಗೆ ವಿಶೇಷ ಅಧಿಕಾರಿಯನ್ನು ನೇಮಿಸಿ ಚುನಾವಣಾ ಆಯೋಗ ಆದೇಶ !

ಜನಪ್ರತಿನಿಧಿ (ಬೆಂಗಳೂರು) ಭಾರತೀಯ ಕಂದಾಯ ಸೇವೆ ಅಧಿಕಾರಿ ಬಿ ಮುರಳಿ ಕುಮಾರ್ ಅವರನ್ನು ಚುನಾವಣಾ ವೆಚ್ಚದ ಮೇಲೆ ಕಣ್ಗಾವಲಿಡುವ ಉದ್ದೇಶದಿಂದ ವಿಶೇಷ ಅಧಿಕಾರಿಯಾಗಿ ಭಾರತೀಯ ಚುನಾವಣಾ ಆಯೋಗ (ಇಸಿಐ) ನೇಮಕ ಮಾಡಿದೆ.

ಅಸ್ತಿತ್ವದಲ್ಲಿರುವ ಚುನಾವಣಾ ವೆಚ್ಚದ ಮೇಲ್ವಿಚಾರಣೆಯನ್ನು ವೃದ್ಧಿಸುವ ಉದ್ದೇಶದಿಂದ ವೀಕ್ಷಕರನ್ನು ನೇಮಿಸಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಕರ್ನಾಟಕವಷ್ಟೇ ಅಲ್ಲದೆ, ಆಂಧ್ರಪ್ರದೇಶ, ಒಡಿಶಾ, ತಮಿಳುನಾಡು ಮತ್ತು ಉತ್ತರ ಪ್ರದೇಶಗಳಿಗೂ ವಿಶೇಷ ಅಧಿಕಾರಿಯನ್ನು ನೇಮಕ ಮಾಡಿ ಆದೇಶ ನೀಡಿದೆ.

2024 ರ ಲೋಕಸಭೆ ಚುನಾವಣೆಗೆ 2019ಕ್ಕೆ ಹೋಲಿಸಿದರೆ ಚುನಾವಣಾ ನೀತಿ ಸಂಹಿತೆ (MCC) ಜಾರಿಯಾದ ಕೇವಲ 10 ದಿನಗಳಲ್ಲಿ ವಶಪಡಿಸಿಕೊಳ್ಳುವುತ್ತಿರುವುದು ಶೇ.110.12ರಷ್ಟು ಹೆಚ್ಚಾಗಿದೆ ಎಂದು ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿ (CEO) ಕಚೇರಿ ಮಾಹಿತಿ ನೀಡಿದೆ.

ಮಾರ್ಚ್ 16, 2024 ರಿಂದ ಮಾರ್ಚ್ 27, 2024 ರವರೆಗೆ 55.76 ಕೋಟಿ ರೂ ನಗದು ಹಾಗೂ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ ಆರು ತಿಂಗಳ ಹಿಂದೆ ಎಂಸಿಸಿ, ಪೊಲೀಸರು, ಆದಾಯ ತೆರಿಗೆ, ಅಬಕಾರಿ, ವಾಣಿಜ್ಯ ತೆರಿಗೆ, ಮಾದಕ ದ್ರವ್ಯ ನಿಯಂತ್ರಣ ಡ್ಯೂರೋ ಮತ್ತು ಡಿಆರ್‌ಐ 537.51 ಕೋಟಿ ರೂಪಾಯಿ ಮೌಲ್ಯದ ನಗದು ಮತ್ತು ವಸ್ತುಗಳನ್ನು ವಶಪಡಿಸಿಕೊಂಡಿದ್ದರು. ಏಪ್ರಿಲ್ 2, 2024 ರವರೆಗೆ 81,10,26,256 ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.

ವಿಶೇಷ ಅಧಿಕಾರಿಗಳ ನಿಯೋಜನೆ ಅಸಾಮಾನ್ಯವಾದುದಲ್ಲ. ವಶಪಡಿಸಿಕೊಂಡ ವಸ್ತುಗಳ ವರದಿ ಹಾಗೂ ಅವುಗಳ ಮೇಲೆ ನಿಗಾ ಇಡಲು ಈ ರೀತಿಯ ನಿಯೇಜನೆ ಸಾಮಾನ್ಯವಾಗಿರುತ್ತದೆ. ವಿಶೇಷ ಅಧಿಕಾರಿಯ ನೇಮಕ ಉತ್ತಮ ಸಮನ್ವಯ ಮತ್ತು ಸುಧಾರಿತ ಸಂವಹನಕ್ಕೆ ಸಹಾಯ ಮಾಡುತ್ತದೆ. ಇಲ್ಲಿಯವರೆಗೆ ನಾವು ಸಭೆ ನಡೆಸಿಲ್ಲ. ಅಧಿಕಾರಿಗಳು ಬಂದ ನಂತರ ಸಭೆ ನಡೆಸಿ ಎಲ್ಲ ಒತ್ತುವರಿ ವಿವರ ನೀಡಲಾಗುವುದು. ಮತದಾನದ ದಿನಾಂಕಗಳು ಸಮೀಪಿಸುತ್ತಿದ್ದು,ತಪಾಸಣೆಯನ್ನು ತೀವ್ರಗೊಳಿಸುತ್ತಿದ್ದೇವೆ. ಎಲ್ಲಾ ತಂಡಗಳು ಕಣ್ಗಾವಲನ್ನು ಹೆಚ್ಚಿಸಿದ್ದು, ಬ್ಯಾಂಕ್ ವಹಿವಾಟಿನ ವಿವರಗಳನ್ನು ನಿಯಮಿತವಾಗಿ ಪರಿಶೀಲನೆ ನಡೆಸುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಚುನಾವಣೆಗಾಗಿ ಚುನಾವಣಾ ಆಯೋಗವು 2,357 ಫ್ಲೈಯಿಂಗ್ ಸ್ಕ್ವಾಡ್, 2,669 ಕಣ್ಗಾವಲು ಪಡೆ, 647 ವಿಡಿಯೋ ಕಣ್ಗಾವಲು, 258 ಲೆಕ್ಕಪತ್ರ ನಿರ್ವಹಣೆ ಮತ್ತು 257 ವಿಡಿಯೋ ವೀಕ್ಷಣೆ ತಂಡಗಳನ್ನು ನಿಯೋಜಿಸಿದೆ. ಅಲ್ಲದೆ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಗೋವಾ ಮತ್ತು ಮಹಾರಾಷ್ಟ್ರದ ಗಡಿಗಳಲ್ಲಿ ಚೆಕ್ ಪೋಸ್ಟ್‌ಗಳಲ್ಲಿ 172 ಪೊಲೀಸರು ಮತ್ತು 40 ಅಬಕಾರಿ ತಂಡಗಳನ್ನು ನಿಯೋಜಿಸಲಾಗಿದೆ. ಇದಲ್ಲದೆ, ಗಡಿಯಲ್ಲಿ 19 ಅರಣ್ಯ ಚೆಕ್ ಪೋಸ್ಟ್ ಮತ್ತು 15 ಸಾರಿಗೆ ಚೆಕ್ ಪೋಸ್ಟ್ಗಳನ್ನೂ ಸ್ಥಾಪಿಸಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!