spot_img
Friday, January 17, 2025
spot_img

ರಾಷ್ಟ್ರಭಕ್ತ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗುವಲ್ಲಿ ನೀವೆಲ್ಲಾ ಸಹಕರಿಸಿ : ಕೋಟ ಶ್ರೀನಿವಾಸ ಪೂಜಾರಿ

ಜನಪ್ರತಿನಿಧಿ (ಉಡುಪಿ) : ಉಡುಪಿ ಚಿಕ್ಕಮಗಳೂರು ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸುವ ಮೂಲಕ ರಾಷ್ಟ್ರಭಕ್ತ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗುವಲ್ಲಿ ನೀವೆಲ್ಲಾ ಸಹಕರಿಸಬೇಕು. ಮುಜರಾಯಿ ಇಲಾಖೆಯ ಸಚಿವನಾಗಿದ್ದಾಗ ಬಡವರ ದೈವ ದೇವರುಗಳ ದೇವಸ್ಥಾನಗಳಿಗೆ ಅನುದಾನ ಬಿಡುಗಡೆ ಮಾಡಿರುವ ಹೆಮ್ಮೆ ನನಗಿದೆ. ಹೆಜಮಾಡಿಯಿಂದ ಬೈಂದೂರಿನವರೆಗೆ ಇರುವ ದೇವಸ್ಥಾನಗಳಿಗೆ ಅನುದಾನ ಮಾಡಿಸಿದ್ದನ್ನು ಈ ಮೂಲಕ ಜನರಿಗೆ ನೆನಪಿಸುತ್ತೇನೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಇಂದು(ಬುಧವಾರ) ನಾಮಪತ್ರ ಸಲ್ಲಿಕೆಗೂ ಮೊದಲು ಉಡುಪಿ ಜಿಲ್ಲಾ ಬಿಜೆಪಿ ಕಛೇರಿ ಹತ್ತಿರದ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇದು ಭಾರತದ ಭವಿಷ್ಯವನ್ನು ಬರೆಯುವ ಚುನಾವಣೆ. ಪ್ರಧಾನಿ ನರೇಂದ್ರ ಮೋದಿ ಅವರ ಕಾಲದಲ್ಲಿ ದೇಶ ಬದಲಾಗಿದೆ. ಸಮೃದ್ಧವಾಗಿ ಬೆಳೆದಿದೆ. ಪ್ರಧಾನಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಜಗತ್ತಿನ ಹತ್ತಾರು ದೇಶಗಳಿಗೆ ಆರ್ಥಿಕ ಸಹಾಯ ಮಾಡಿರುವುದನ್ನು ನೋಡುವಾಗ ಭಾರತ ಪರಿವರ್ತನೆಯಾಗಿದೆ ಎಂದು ನಿಮಗೆ ಅನ್ನಿಸುವುದಿಲ್ಲವೇ ? ಚೀನಾದಂತಹ ಗೂಂಡಾ ವರ್ತನೆ ಮಾಡುವ ದೇಶದ ಎದರು ಸಮರ್ಥವಾಗಿ ಎದುರಿಸುವ ಶಕ್ತಿ ಇರುವ ದೇಶ ಅಂತಿದ್ದರೇ ಅದು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಭಾರತಕ್ಕೆ ಮಾತ್ರ ಎನ್ನುವ ವರದಿ ಬಂದಾಗ ನಿಮಗೆ ಹೆಮ್ಮೆ ಅನ್ನಿಸುವುದಿಲ್ಲವೇ ? ರಾಜಕಾರಣವನ್ನು ವೃತವಾಗಿ ತೆಗೆದುಕೊಂಡು  ಸೇವೆಯನ್ನು ದೀಕ್ಷೆ ತೆಗೆದುಕೊಂಡು ಪ್ರಧಾನಿ ಮೋದಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿ ಈ ದೇಶ ಕಾಯುತ್ತಿದೆ ಎಂದು ಅವರು ಹೇಳಿದರು.

೧೯೯೨ರ ಆಸುಪಾಸಿನಲ್ಲಿ ಭಾರತೀಯ ಜನತಾ ಪಾರ್ಟಿಯ ಮೂಲಕ ಗ್ರಾಮ ಪಂಚಾಯತ್‌ ಸದಸ್ಯನಾಗಿ ನಾನು ರಾಜಕೀಯ ಪ್ರವೇಶ ಮಾಡಿದೆ. ಡಾ. ವಿ.ಎಸ್‌. ಆಚಾರ್ಯರಂತಹ ಅನೇಕ ಹಿರಿಯರು ನನಗೆ ಮಾರ್ಗದರ್ಶನ ನೀಡಿ ಇಲ್ಲಿಯವರೆಗೆ ಬರುವ ಹಾಗೆ ಮಾಡಿದ್ದಾರೆ. ಬಿಜೆಪಿಯಿಂದ ತಾಲೂಕು ಪಂಚಾಯತ್‌, ಜಿಲ್ಲಾ ಪಂಚಾಯತ್‌ ಸದಸ್ಯನಾದೆ. ಎರಡು ಬಾರಿ ಬ್ರಹ್ಮಾವರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದೆ. ಬಿಜೆಪಿ ನಾಲ್ಕು ಬಾರಿ ಎಂಎಲ್‌ಸಿ ಆಗುವುದಕ್ಕೆ ಅವಕಾಶ ಮಾಡಿಕೊಟ್ಟಿತು. ಬಿಜೆಪಿ ನನ್ನನ್ನು ಮೂರು ಬಾರಿ ಸಚಿವನನ್ನಾಗಿ ಕೆಲಸ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿತು. ಎರಡು ಬಾರಿ ವಿರೋಧ ಪಕ್ಷದಬ  ನಾಯಕನಾಗಿ ಕೆಲಸ ಮಾಡುವುಕ್ಕೆ ಅವಕಾಶ ಕೊಟ್ಟಿತು. ನನ್ನ ಮಿತಿಯೊಳಗೆ ಶಕ್ತಿ ಮೀರಿ ಕೆಲಸ ಮಾಡಿದ್ದೇನೆ ವಿಶ್ವಾಸ ಹೊಂದಿದ್ದೇನೆ. ಉಡುಪಿ ಜಿಲ್ಲೆಯ ಬಿಜೆಪಿಯ ಅಧ್ಯಕ್ಷನಿಂದ ಪ್ರಾರಂಭವಾಗಿ ರಾಜ್ಯದ ಒಬಿಸಿ ಮೋರ್ಚಾದ ರಾಜ್ಯಾಧ್ಯಕ್ಷನವರೆಗೆ ಸಂಘಟನಾತ್ಮಕ ಕೆಲಸ ನಿಷ್ಠೆಯಿಂದ ಮಾಡಿದ್ದೇನೆ ಎಂದು ಅವರು ಹೇಳಿದರು.

ಹಿಂದುಳಿದ ವರ್ಗದ ಇಲಾಖೆಯ ಮಂತ್ರಿಯಾಗುವುದಕ್ಕೆ ಯಡಿಯೂರಪ್ಪ ಅವರು ಅವಕಾಶ ಮಾಡಿಕೊಟ್ಟಾಗ ಪ್ರಾಮಾಣಿಕ ಕೆಲಸ ಮಾಡಿದ್ದೇನೆ. ಪ್ರಧಾನಿಗಳು ಸೇನಾ ತರಬೇತಿ ಸಂಸ್ಥೆ ಯೋಜನೆ ರೂಪಿಸಿದಾಗ, ನಾನು ಮೂರು ತರಬೇತಿ ಸಂಸ್ಥೆಯನ್ನು ಆರಂಭಿಸಿದೆ. ಅದರಲ್ಲಿ ಕೋಟಿ ಚೆನ್ನಯ್ಯ ಸೇನಾ ತರಬೇತಿ ಸಂಸ್ಥೆ ಬಾರಕೂರು ಕೂಡ ಒಂದು. ಸೇನೆಗೆ ಸೇರಬಯಸುವ ವಿದ್ಯಾರ್ಥಿಗಳಿಗೆ ವಸತಿ, ವಿದ್ಯಾಭ್ಯಾಸ ಎಲ್ಲವನ್ನೂ ಕೊಟ್ಟು ಸರ್ಕಾರಿ ಖರ್ಚಿನಲ್ಲಿ ಆ ಮಕ್ಕಳಳಿಗೆ ತರಬೇತಿ ಕೊಟ್ಟಿದ್ದೇವೆ. ಬಾರಕೂರು ಸೇನಾ ತರಬೇತಿ ಸಂಸ್ಥೆಯಲ್ಲಿನ ೪೦ ಮಕ್ಕಳು ಪರೀಕ್ಷೆ ಬರೆದಿದ್ದಾರೆ, ಅದರಲ್ಲಿ ೩೬ ಮಂದಿ ತೇರ್ಗಡೆ ಹೊಂದಿದ್ದಾರೆ. ಇದು ಭಾರತದಲ್ಲೇ ದಾಖಲೆಯ ಸಾಧನೆ ಎಂದು ನಾನು ಭಾವಿಸುತ್ತೇನೆ ಎಂದರು.

ಸಭೆಯಯಲ್ಲಿ ಬಿಜೆಪಿ ನಾಯಕರು, ಜಿಲ್ಲೆಯ ಬಿಜೆಪಿ ಶಾಸಕರು, ಉಭಯ ಜಿಲ್ಲೆಯ ಪ್ರಮುಖ ಬಿಜೆಪಿ ಮುಖಂಡರು, ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!