spot_img
Sunday, February 15, 2026
spot_img

ಸಿಂಗ್‌ ನಿವೃತ್ತಿ | ಪ್ರಧಾನಿ ಕಚೇರಿಗೆ ನೀವು ತಂದ ಬಲವಾದ ಘನತೆಯನ್ನು ದೇಶ ಕಳೆದುಕೊಳ್ಳುತ್ತಿದೆ : ಸಿಂಗ್‌ಗೆ ಬರೆದ ಪತ್ರದಲ್ಲಿ ಮೋದಿ ವಿರುದ್ಧ ಖರ್ಗೆ ಪರೋಕ್ಷ ಟೀಕೆ

ಜನಪ್ರತಿನಿಧಿ (ನವದೆಹಲಿ) : 33 ವರ್ಷಗಳಿಂದ ರಾಜ್ಯಸಭೆಯ ಸದಸ್ಯರಾಗಿದ್ದ ಮಾಜಿ ಪ್ರಧಾನಿ ಹಾಗೂ ಕಾಂಗ್ರೆಸ್ ನಾಯಕ ಮನಮೋಹನ್ ಸಿಂಗ್ ‌ಸದಸ್ಯತ್ವದ ಅಧಿಕಾರವಧಿ ನಿನ್ನೆ (ಏಪ್ರಿಲ್ 2, ಮಂಗಳವಾರ) ಕೊನೆಗೊಂಡಿದೆ.

ರಾಜ್ಯಸಭೆಯಿಂದ ನೀವೃತ್ತರಾಗುತ್ತರಾಗಿರುವ ದೇಶದ ಅಪ್ರತಿಮ ಆರ್ಥಿಕ ತಜ್ಞ ಹಾಗೂ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರಿಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ.

ಮಾಜಿ ಪ್ರಧಾನಿಗೆ ಬರೆದ ಪತ್ರದಲ್ಲಿ, ‘ಮೂರು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ನಂತರ, ಒಂದು ಯುಗ ಅಂತ್ಯಗೊಂಡಿದೆ. ಭಾರತದ ಪ್ರಧಾನಿ ಮಾತನಾಡುವಾಗಲೆಲ್ಲಾ ಇಡೀ ಜಗತ್ತು ಅವರ ಮಾತನ್ನು ಕೇಳುತ್ತದೆ ಎಂದು ಅಮೆರಿಕದ ಅಂದಿನ ಅಧ್ಯಕ್ಷ ಒಬಾಮಾ ನಿಮ್ಮ ಬಗ್ಗೆ ಪ್ರಸ್ತಾಪಿಸಿದ್ದು ನನಗೆ ನೆನಪಿದೆ’ ಎಂದು ಖರ್ಗೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ರಾಜ್ಯಸಭೆಯಿಂದ ಸಿಂಗ್ ನಿವೃತ್ತಿ :

91 ವರ್ಷದ ಮನಮೋಹನ್ ಸಿಂಗ್ ಅವರ ರಾಜ್ಯಸಭೆ ಸದಸ್ಯತ್ವದ ಅವಧಿ ಏಪ್ರಿಲ್ 3ಕ್ಕೆ ಕೊನೆಗೊಂಡಿದೆ. ದೇಶದ ಆರ್ಥಿಕತೆಯ ಸುಧಾರಣೆಗೆ ಹಲವು ದಿಟ್ಟ ಕ್ರಮಗಳನ್ನು ತೆಗೆದುಕೊಂಡಿದ್ದ ಮನಮೋಹನ್ ಸಿಂಗ್ ಅವರು, 1991ರ ಅಕ್ಟೋಬರ್‌ನಲ್ಲಿ ಮೊದಲ ಬಾರಿಗೆ ರಾಜ್ಯಸಭೆ ಸದಸ್ಯರಾಗಿದ್ದರು. ನರಸಿಂಹರಾವ್ ಅವರ ಸರ್ಕಾರದಲ್ಲಿ (1991ರಿಂದ 1996ರವರೆಗೆ) ಹಣಕಾಸು ಸಚಿವರಾಗಿದ್ದ ಅವರು 2004ರಿಂದ 2014ರವರೆಗೆ ಕಾಂಗ್ರೆಸ್‌ ಸರ್ಕಾರದ ಮೂಲಕ ದೇಶದ ಪ್ರಧಾನಿಯಾಗಿದ್ದರು.

ಇನ್ನು, ಪತ್ರದಲ್ಲಿ ಬರೆಯುತ್ತಾ ಖರ್ಗೆ, ‘ನಿಮ್ಮ ಸಂಪುಟದ ಭಾಗವಾಗಿದ್ದು ವೈಯಕ್ತಿಕವಾಗಿ ನನಗೆ ಸಿಕ್ಕ ಭಾಗ್ಯ. ಕಳೆದ 10 ವರ್ಷಗಳಲ್ಲಿ ನಾನು ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕನಾಗಿದ್ದು, ನೀವು ಯಾವಾಗಲೂ ಬುದ್ಧಿವಂತಿಕೆಯ ಮೂಲವಾಗಿದ್ದೀರಿ ಹಾಗೂ ನಾನು ನಿಮ್ಮ ಸಲಹೆಯನ್ನು ಗೌರವಿಸಿದ್ದೇನೆ. ವೈಯಕ್ತಿಕ ಅನಾನುಕೂಲತೆಗಳ ನಡುವೆಯೂ ಕಳೆದ ಕೆಲವು ವರ್ಷಗಳಿಂದ ನೀವು ಕಾಂಗ್ರೆಸ್ ಪಕ್ಷಕ್ಕೆ ಲಭ್ಯವಾಗುವಂತೆ ಇದ್ದೀರಿ. ಇದಕ್ಕಾಗಿ ಪಕ್ಷ ಹಾಗೂ ವೈಯಕ್ತಿಕವಾಗಿ ನಾನು ಯಾವಾಗಲೂ ಕೃತಜ್ಞರಾಗಿರುತ್ತೇವೆ’ ಎಂದು ಉಲ್ಲೇಖಿಸಿದ್ದಾರೆ.

ನೀವು ಪ್ರಧಾನಿ ಕಚೇರಿಗೆ ತಂದ ಶಾಂತ ಮತ್ತು ಬಲವಾದ ಘನತೆಯನ್ನು ದೇಶ ಕಳೆದುಕೊಳ್ಳುತ್ತಿದೆ. ಸಂಸತ್ತು ನಿಮ್ಮ ಬುದ್ಧಿವಂತಿಕೆ ಮತ್ತು ಅನುಭವವನ್ನು ಕಳೆದುಕೊಳ್ಳುತ್ತದೆ. ನಿಮ್ಮ ಘನತೆಯ, ಅಳತೆಯ, ರಾಜಕಾರಣಿಯಾಗಿ ನಿಮ್ಮ ಮೃದು ಮಾತುಗಳು ಸದ್ಯದ ರಾಜಕೀಯವನ್ನು ಸೂಚಿಸುವ ಸುಳ್ಳುಗಳಿಂದ ತುಂಬಿದ ದೊಡ್ಡ ಧ್ವನಿಗಳಿಗೆ ವಿರುದ್ಧವಾಗಿವೆ ಎಂದಿದ್ದಾರೆ.

ಪತ್ರದ ಮೂಲಕ ಸದ್ಯದ ರಾಜಕೀಯ ಪರಿಸ್ಥಿತಿಯನ್ನು ಅನೈತಿಕತೆ ಎಂದು ಬಿಂಬಿಸಿದ ಖರ್ಗೆ, ‘ಸಂಘಟಿತ ಲೂಟಿ ಹಾಗೂ ಕಾನೂನುಬದ್ಧ ಲೂಟಿ’ ಎಂದು ನೀವು ಕರೆದ ನೋಟು ಅಮಾನ್ಯೀಕರಣದ ಕುರಿತಾದ ನಿಮ್ಮ ಭಾಷಣವನ್ನು ನಾನು ಇನ್ನೂ ನೆನಪಿಸಿಕೊಳ್ಳುತ್ತೇನೆ. ಇದು ಕಠೋರ ವಾಸ್ತವವೆಂದು ಸಾಬೀತಾಗಿದೆ. ವೈಯಕ್ತಿಕವಾಗಿಲ್ಲದೆಯೂ ಟೀಕೆ ಮಾಡಲು ಸಾಧ್ಯ ಎಂದು ತೋರಿಸಿಕೊಟ್ಟಿದ್ದೀರಿ. ಸದ್ಯದ ಸರ್ಕಾರದ ಸುಳ್ಳನ್ನು ರಾಷ್ಟ್ರ ಮತ್ತು ಜನರು ಶೀಘ್ರದಲ್ಲೇ ನೋಡುತ್ತಾರೆ. ಸೂರ್ಯ ಮತ್ತು ಚಂದ್ರರನ್ನು ಹೇಗೆ ಮರೆಮಾಚಲು ಸಾಧ್ಯವಿಲ್ಲವೋ ಹಾಗೆಯೇ ಸತ್ಯವನ್ನು ಕೂಡ ಮರೆಮಾಡಲು ಸಾಧ್ಯವಿಲ್ಲ. ನಿಮ್ಮ ಮಾತಿನ ಮಹತ್ವವನ್ನು ಜನರು ಶೀಘ್ರದಲ್ಲೇ ಅರಿತುಕೊಳ್ಳುತ್ತಾರೆ’ ಎಂದು ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ಮಧ್ಯಮ ವರ್ಗ ಮತ್ತು ಮಹತ್ವಾಕಾಂಕ್ಷೆಯ ಯುವಕರಿಗೆ ನೀವು ಹೀರೋ ಆಗಿದ್ದೀರಿ ಎಂದ ಅವರು, ಕೈಗಾರಿಕೋದ್ಯಮಿಗಳು ಹಾಗೂ ಉದ್ಯಮಿಗಳಿಗೆ ನಾಯಕ ಮತ್ತು ಮಾರ್ಗದರ್ಶಿಯಾಗಿದ್ದೀರಿ ಮತ್ತು ನಿಮ್ಮ ಆರ್ಥಿಕ ನೀತಿಗಳಿಂದ ಬಡತನದಿಂದ ಹೊರಬರಲು ಸಾಧ್ಯವಾದ ಎಲ್ಲಾ ಬಡವರಿಗೆ ಹಿತ ಚಿಂತಕರಾಗಿದ್ದೀರಿ ಎಂದು ಪತ್ರದ ಮೂಲಕ ಖರ್ಗೆ ಸಿಂಗ್‌ ಅವರನ್ನು ಕೊಂಡಾಡಿದ್ದಾರೆ.

ಸದ್ಯಕ್ಕೆ ಸಕ್ರಿಯ ರಾಜಕಾರಣದಿಂದ ನೀವು ನಿವೃತ್ತರಾಗಿದ್ದರೂ ಸಹ, ನೀವು ನಮ್ಮ ದೇಶದ ನಾಗರಿಕರೊಂದಿಗೆ ಆಗಾಗ್ಗೆ ಮಾತನಾಡುವ ಮೂಲಕ ರಾಷ್ಟ್ರಕ್ಕೆ ಬುದ್ಧಿವಂತಿಕೆಯ ಮತ್ತು ನೈತಿಕ ದಿಕ್ಸೂಚಿಯ ಧ್ವನಿಯಾಗಿ ಮುಂದುವರಿಯುತ್ತೀರಿ ಎಂದು ನಾನು ಭಾವಿಸುತ್ತೇನೆ. ನಾನು ನಿಮಗೆ ನೆಮ್ಮದಿ, ಆರೋಗ್ಯ ಮತ್ತು ಸಂತೋಷವನ್ನು ಬಯಸುತ್ತೇನೆ ಎಂದು ಖರ್ಗೆ ಪತ್ರದಲ್ಲಿ ತಿಳಿಸಿದ್ದಾರೆ.

https://x.com/kharge/status/1775180976848503214?s=20

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!