Sunday, September 8, 2024

ರಾಜಧಾನಿ ಬೆಂಗಳೂರು : ಜೂನ್‌ ವೇಳೆಗೆ ಡಬಲ್ ಡೆಕ್ಕರ್ ಮೇಲ್ಸುತುವೆ ಸಾರ್ವಜನಿಕರ ಓಡಾಟಕ್ಕೆ ಮುಕ್ತ !

ಜನಪ್ರತಿನಿಧಿ (ಬೆಂಗಳೂರು) : ರಾಗಿಗುಡ್ಡ ಹಾಗೂ ಸೆಂಟ್ರಲ್ ಸಿಲ್ಕ್ ಬೋರ್ಡ್ ನಡುವೆ  ನಿರ್ಮಾಣ ಹಂತದಲ್ಲಿರುವ ಸುಮಾರು 3.3 ಕಿ. ಮೀ ಉದ್ದದ ಡಬಲ್ ಡೆಕ್ಕರ್ ಮೇಲ್ಸುತುವೆಯನ್ನು ಜೂನ್ ವೇಳೆ ಬಿಎಂಆರ್ ಸಿಎಲ್ ಸಾರ್ವಜನಿಕರ ಓಡಾಟಕ್ಕೆ ಮುಕ್ತಗೊಳಿಸಲಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ರಾಷ್ಟ್ರೀಯ ಸುದ್ದಿಯ ಸಂಸ್ಥೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ ಅಧಿಕಾರಿಯೊಬ್ಬರು, ಈ ಮೇಲ್ಸೇತುವೆಯಿಂದಾಗಿ ಸೆಂಟ್ರಲ್ ಸಿಲ್ಕ್ ಬೋರ್ಡ್ ನಲ್ಲಿನ ಟ್ರಾಫಿಕ್ ಸಮಸ್ಯೆಗೆ ದೊಡ್ಡ ಪರಿಹಾರ ಸಿಕ್ಕಂತಾಗುತ್ತದೆ. ಸಿಗ್ನಲ್ ಮುಕ್ತ ಎಲಿವೇಟೆಡ್ ರಸ್ತೆಯು ಲೋಕಾರ್ಪಣೆಯಾದರೆ ಬಿಎಂಟಿ ಲೇಔಟ್ ನಿಂದ ಕೆಆರ್ ಪುರಂ, ರಾಗಿಗುಡ್ಡದಿಂದ ಕೆಆರ್ ಪುರಂ ಹಾಗೂ ರಾಗಿಗುಡ್ಡ ಕಡೆಯಿಂದ ಎಲೆಕ್ಟ್ರಾನಿಕ್ ಸಿಟಿ ಕಡೆಗೆ ಬರುವ ವಾಹನ ಸವಾರರಿಗೆ ಪ್ರಯೋಜನಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.

ಮೇ ತಿಂಗಳ ಅಂತ್ಯದಲ್ಲಿ ಈ ರಸ್ತೆ ಸಾರ್ವಜನಿಕರಿಗೆ ಮುಕ್ತವಾಗಲಿದೆ ಎಂದು ಈ ಹಿಂದೆ ತಿಳಿಸಲಾಗಿತ್ತು. ಡಬಲ್ ಡೆಕ್ಕರ್ ಮೇಲ್ಸುತುವೆಯಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ ನಲ್ಲಿ ವಾಹನಗಳ ದಟ್ಟಣೆ ತಪ್ಪಿದಂತಾಗುತ್ತದೆ. ಇಲ್ಲಿ ಪ್ರತಿ ಗಂಟೆಗೆ 15,000 ಕ್ಕೂ ಹೆಚ್ಚು ವಾಹನಗಳು ಸಂಚರಿಸುತ್ತವೆ ಎಂದು ಹೇಳಲಾಗುತ್ತದೆ. ಮಾರ್ಚ್ 17 ರಂದು 2,520 ಕ್ಯೂಬಿಕ್ ಮೀಟರ್ ಕಾಂಕ್ರೀಟ್ ಸ್ಲ್ಯಾಬ್ ನ್ನು 42 ಗಂಟೆಗಳ ಕಾಲ ತಡೆರಹಿತವಾಗಿ ಹಾಕಲಾಗಿತ್ತು. ಸ್ಲ್ಯಾಬ್‌ಗೆ ಈಗ 28 ದಿನಗಳ ಕ್ಯೂರಿಂಗ್ ಅಗತ್ಯವಿದ್ದು, ಏಪ್ರಿಲ್ 15 ರ ಹೊತ್ತಿಗೆ ಸಿದ್ಧವಾಗಲಿದೆ. ನಂತರ ಇನ್ನೊಂದಿಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು.

ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಐದು ಲೂಪ್‌ಗಳು ಮತ್ತು ರ‍್ಯಾಂಪ್‌ಗಳನ್ನು ನಿರ್ಮಿಸಲಾಗುತ್ತಿದ್ದು, ಅವು ರಾಗಿಗುಡ್ಡದಿಂದ ಹೊಸೂರು ರಸ್ತೆ, ರಾಗಿಗುಡ್ಡದಿಂದ ಕೆಆರ್ ಪುರಂ, ಎಚ್‌ಎಸ್‌ಆರ್ ಲೇಔಟ್‌ನಿಂದ ರಾಗಿಗುಡ್ಡ, ಬಿಟಿಎಂ ಲೇಔಟ್‌ನ ನೆಲಮಟ್ಟದಿಂದ ಫ್ಲೈಓವರ್ ರಸ್ತೆಯ ಮೊದಲ ಹಂತ ಮತ್ತು ಮೊದಲ ಹಂತದ ಫ್ಲೈಓವರ್ ರಸ್ತೆಯ ಮೊದಲ ಹಂತದಿಂದ ಬಿಟಿಎಂ ಲೇಔಟ್ ನ ನೆಲಮಟ್ಟದ ಕಡೆಗೆ ಕಾರ್ಯನಿರ್ವಹಿಸಲಿವೆ ಎಂದು ಅವರು ಮಾಹಿತಿ ನೀಡಿದರು.

ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ಹೊರ ವರ್ತುಲ ರಸ್ತೆ (2ಎ ಹಂತ) ಮತ್ತು ಆರ್ ವಿ ರಸ್ತೆಯಿಂದ ಬೊಮ್ಮಸಂದ್ರ ಮಾರ್ಗದ (ರೀಚ್) BMRCL 2ಎ ಮಾರ್ಗದ ಇಂಟರ್ ಚೆಂಜ್ ಆಗಲಿದೆ. ಡಿಸೆಂಬರ್‌ನಲ್ಲಿ ರಿಟರ್ನ್ ದಿಕ್ಕಿನ ರಸ್ತೆ ಕಾರ್ಯಾರಂಭ ಮಾಡಲಿದೆ. ಈ ಜಂಕ್ಷನ್ ದಕ್ಷಿಣ ಭಾರತದ ಅತ್ಯಂತ ಕೆಟ್ಟ ಚಾಕ್ ಪಾಯಿಂಟ್ ಎಂದು ಪರಿಗಣಿಸಲಾಗಿದೆ.

 

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!