spot_img
Wednesday, April 1, 2026
spot_img

ಪಿಎಸ್ಐ ಮರುಪರೀಕ್ಷೆ : ಅಂತಿಮ ಅಂಕ ಪಟ್ಟಿ ಪ್ರಕಟಿಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ

ಜನಪ್ರತಿನಿಧಿ (ಬೆಂಗಳೂರು) : ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಪಿಎಸ್ಐ) ಹುದ್ದೆಗಳ ನೇಮಕಾತಿ ಅಂಗವಾಗಿ ಜ.23ರಂದು ನಡೆಸಿದ್ದ ಮರುಪರೀಕ್ಷೆಗೆ ಹಾಜರಾಗಿದ್ದ ಅಭ್ಯರ್ಥಿಗಳು ಪತ್ರಿಕೆ-1 ಮತ್ತು 2ರಲ್ಲಿ ಗಳಿಸಿರುವ ಅಂಕಗಳ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಪತ್ರಿಕಾ ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.

ಒಟ್ಟು 545 ಹುದ್ದೆಗಳ ನೇಮಕಕ್ಕೆ ಕೆಇಎ ಮರು ಪರೀಕ್ಷೆ ನಡೆಸಲಾಗಿತ್ತು. ಅಭ್ಯರ್ಥಿಗಳು ಪಡೆದ ಅಂಕಗಳ ಮಾಹಿತಿಯನ್ನು ಸದ್ಯದಲ್ಲೇ ಗೃಹ ಇಲಾಖೆಗೆ ಸಲ್ಲಿಸಲಾಗುತ್ತದೆ. ಅದರ ನಂತರ ರೋಸ್ಟರ್ ಆಧಾರದ ಮೇಲೆ‌ ಆಯ್ಕೆ ಪಟ್ಟಿಯನ್ನು ಅವರು ಪ್ರಕಟಿಸಲಿದ್ದಾರೆ.

ಸಿಇಟಿ: ಅರ್ಜಿ ಸಲ್ಲಿಕೆಗೆ ಮತ್ತೊಂದು ಅವಕಾಶ         

ಏ.18 ಮತ್ತು 19ರಂದು ನಡೆಸಲು ಉದ್ದೇಶಿಸಿರುವ ಸಿಇಟಿ ಪರೀಕ್ಷೆಗೆ ಆನ್ಲೈನ್ ಅರ್ಜಿ ಸಲ್ಲಿಸಲು ಮಾರ್ಚ್ 30ರ ಬೆಳಿಗ್ಗೆ 11 ಗಂಟೆಯಿಂದ ಏ.1ರ ಸಂಜೆ 4 ಗಂಟೆಯವರೆಗೆ ಮತ್ತೊಂದು ಅವಕಾಶ ಕೊಡಲಾಗಿದೆ. ಅರ್ಜಿ ಸಲ್ಲಿಸುವವರು ಏ.1ರ ರಾತ್ರಿ 8 ಗಂಟೆಯವರೆಗೂ ಶುಲ್ಕ ಪಾವತಿಸಬಹುದು. ಈ ಅವಕಾಶವನ್ನು ಬಳಸಿಕೊಳ್ಳುವ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಕೇಂದ್ರಗಳಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗುವುದು. ಈ ವಿಷಯದಲ್ಲಿ ಯಾವುದೇ ತಕರಾರುಗಳಿಗೆ ಅವಕಾಶವಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಕೆಸೆಟ್ ಪರೀಕ್ಷೆ: ಪರಿಷ್ಕೃತ ಕೀ ಉತ್ತರಗಳು ಪ್ರಕಟ

ಜ.23ರಂದು 42 ನಾನಾ ವಿಷಯಗಳಿಗೆ ನಡೆಸಲಾಗಿದ್ದ ಕೆಸೆಟ್ ಪರೀಕ್ಷೆಯ ಪೈಕಿ ಆಕ್ಷೇಪಣೆಗಳು ಕಂಡುಬಂದಿದ್ದ 23 ವಿಷಯಗಳಲ್ಲಿ ಮನಃಶಾಸ್ತ್ರವನ್ನು ಹೊರತುಪಡಿಸಿ, ಮಿಕ್ಕ 22 ವಿಷಯಗಳ ಪರಿಷ್ಕೃತ ಕೀ ಉತ್ತರಗಳನ್ನು ಪ್ರಕಟಿಸಲಾಗಿದೆ ಎಂದು ರಮ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪದವಿ ಕಾಲೇಜು ಉಪನ್ಯಾಸಕರ ನೇಮಕಕ್ಕೆ ಇದು ಅರ್ಹತಾ ಪರೀಕ್ಷೆ ಆಗಿದ್ದು ಆಭ್ಯರ್ಥಿಗಳ ಆಕ್ಷೇಪಣೆಗಳನ್ನು ಆಧರಿಸಿ, ಪರಿಷ್ಕೃತ ಕೀ ಉತ್ತರಗಳನ್ನು ನೀಡಲಾಗಿದೆ ಎಂದು ಅವರು ವಿವರಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!