spot_img
Saturday, December 7, 2024
spot_img

ರೈತರಿಗೆ ಬೆಂಬಲ ಬೆಲೆ ಕೊಡಿಸುವುದೇ ನನ್ನ ಗುರಿ | ತಂದೆ ಹಾದಿಯಲ್ಲಿ ಸಾಗಲು ಅವಕಾಶ ಮಾಡಿಕೊಡಿ : ಗೀತಾ ಶಿವರಾಜ್‌ ಕುಮಾರ್‌

ಜನಪ್ರತಿನಿಧಿ  (ಶಿವಮೊಗ್ಗ): ನನ್ನ ಗುರಿ ರೈತರಿಗೆ ಬೆಂಬಲ ಬೆಲೆ ಕೊಡಿಸುವುದೇ ಆಗಿದೆ. ನನ್ನನ್ನು ತಂದೆ ಹಾದಿಯಲ್ಲಿ ಸಾಗುವುದಕ್ಕಾಗಿ ಬೆಂಬಲಿಸಿ ಎಂದು ಶಿವಮೊಗ್ಗ ಲೋಕಸಭಾಚ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರು ಹೇಳಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತಾಲ್ಲೂಕಿನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಮತದಾದರು ಈ ಬಾರಿ ಖಂಡಿತ ಬೆಂಬಲಿಸುತ್ತಾರೆ ಎನ್ನುವ ಪೂರ್ಣ ವಿಶ್ವಾಸವಿದೆ. ಕ್ಷೇತ್ರವನ್ನು ಅಭಿವೃದ್ಧಿ ಪಥದಲ್ಲಿ ಕೊಡೊಯ್ಯುವ ಮಹತ್ವಾಕಾಂಕ್ಷೆಯಿದೆ. ತಂದೆ ಅವರು ಮುಖ್ಯಮಂತ್ರಿಗಳಾಗಿದ್ದಾಗ ಅನುಷ್ಠಾನಕ್ಕೆ ತಂದ ಯೋಜನೆಗಳು ಇಂದಿಗೂ ಜ್ವಲಂತ. ಅವರು ಹಾಕಿಕೊಟ್ಟ ಅಭಿವೃದ್ಧಿ ಹಾದಿಯಲ್ಲಿಯೇ ಸಾಗುತ್ತೇನೆ ಎಂದು ಅವರು ಪ್ರಚಾರ ಸಭೆಯಲ್ಲಿ ಕಾರ್ಯಕರ್ತರು ಹಾಗೂ ಮತದಾರರಿಗೆ ಭರವಸೆ ನೀಡಿದರು.

ಸಹೋದರ ಮಧು ಬಂಗಾರಪ್ಪ ಸೋಲು ತಂದೆಯವರಿಗೆ ನೆಮ್ಮದಿ ನೀಡಿರಲಿಲ್ಲ. ನಾನು ಅನೇಕರನ್ನು ಶಾಸಕರನ್ನಾಗಿ ಮಾಡಿದ್ದೇನೆ. ಮಗನನ್ನು ಶಾಸಕನನ್ನಾಗಿ ಮಾಡಲು ಆಗಲಿಲ್ಲ ಎಂದು ಬೇಸರಪಟ್ಟುಕೊಳ್ಳುತ್ತಿದ್ದರು. ಆರಂಭದಲ್ಲಿ ಸೋಲು ನೀಡಿದ್ದರೂ, ಸೊರಬದ ಜನರು ಕೊನೆಗೆ ದೊಡ್ಡ ಗೆಲುವನ್ನು ನೀಡುವ ಮೂಲಕ ಮಧು ಬಂಗಾರಪ್ಪ ಅವರನ್ನು ಮಂತ್ರಿ ಮಾಡಿದ್ದಾರೆ. ತಂದೆ ಹಾಗೂ ತಮ್ಮ, ಬಡವರ ಪರವಾಗಿ ಸೇವೆ ಮಾಡಿದ್ದಾರೆ. ನನಗೂ ಜನರ ಸೇವೆ ಮಾಡುವ ಅವಕಾಶ ಮಾಡಿಕೊಡಿ ಎಂದು ಅವರು ಮತದಾರರಲ್ಲಿ ವಿನಂತಿಸಿಕೊಂಡರು.

ಪ್ರಚಾರಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಧು ಬಂಗಾರಪ್ಪ, ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದು ಸಚಿವ ಮಧು ಬಂಗಾರಪ್ಪ ಮಾತನಾಡಿ, ನಮ್ಮ ತಂದೆ ದಿವಂಗತ ಮಾಜಿ ಸಿಎಂ ಎಸ್.ಬಂಗಾರಪ್ಪ ಅವರ ಸಾಧನೆ, ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗಿಳಿದಿರುವ ನನ್ನ ಸಹೋದರಿ ಗೀತಾ ಶಿವರಾಜಕುಮಾರ್ ಅವರಿಗೆ ಗ್ರಾಮೀಣ ಮತದಾರರು ಬೆಂಬಲ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಲ್ಲದೇ, ರಾಜ್ಯದ ಗ್ಯಾರಂಟಿ ಯೋಜನೆಗಳು ಸಾಮಾನ್ಯ ಜನರಿಗೆ ಭರವಸೆಯ ದಾರಿದೀಪವಾಗಿ ಕಾರ್ಯನಿರ್ವಹಿಸುತ್ತಿವೆ. ಗೀತಾ ಅವರು ಗೆಲವು ಜಿಲ್ಲೆಯ ತುಳಿತಕ್ಕೊಳಗಾದ ವರ್ಗಗಳಿಗೆ ನ್ಯಾಯವನ್ನು ನೀಡುತ್ತದೆ. ರೈತರು ಎದುರಿಸುತ್ತಿರುವ ಶರಾವತಿ ಯೋಜನೆ ಮತ್ತು ‘ಬಗರ್ ಹುಕುಂ’ ಸಮಸ್ಯೆಗಳಿಗೆ ಪರಿಹಾರ ದೆಹಲಿಯಲ್ಲಿದೆ. ಕಳೆದ 10 ವರ್ಷಗಳಿಂದ ಸಂಸದರಾಗಿದ್ದರೂ ಬಿವೈ ರಾಘವೇಂದ್ರ ಈ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ. ಹೀಗಾಗಿ ಈ ಬಾರಿ ಗೀತಾ ಶಿವರಾಜ್ ಕುಮಾರ್ ಅವರನ್ನು ಗೆಲುವು ಸಾಧಿಸುವಂತೆ ಮಾಡಿ ಎಂದು ಹೇಳಿದರು.

 

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!