Sunday, October 13, 2024

ಬೆಂಕಿಮಣಿ ಸಂತು ಅವರಿಗೆ ‘ರಾಜರತ್ನ’ ಪ್ರಶಸ್ತಿ

ಕುಂದಾಪುರ: (ಜನಪ್ರತಿನಿಧಿ ವಾರ್ತೆ) ಮೈತ್ರಿ ಕಲಾ ಸಂಘ ಕನಕನಗರ ಬೆಂಗಳೂರು ಇವರು ಕೊಡಮಾಡುವ ರಾಜರತ್ನ ಪ್ರಶಸ್ತಿ 2024 ಕ್ಕೆ ಸಮಾಜಸೇವಕ, ಕಲಾವಿದ ಬೆಂಕಿಮಣಿ ಸಂತು ಕುಂದಾಪುರ ಆಯ್ಕೆಯಾಗಿದ್ದಾರೆ.

ಕಲೆ, ಸಮಾಜಸೇವೆ ಕ್ಷೇತ್ರದಲ್ಲಿ ಆಹರ್ನಿಶಿ ತೊಡಗಿಸಿಕೊಂಡ ಸಾಧಕರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು ಮಾರ್ಚ್ 30-2024 ಶನಿವಾರ ಬೆಳಿಗ್ಗೆ 9 ಗಂಟೆಗೆ ಸುಚಿತ್ರ ಪುರವಂಕರ ಸಿನಿಮಾ ಅಂಡ್ ಕಲ್ಚರಲ್ ಪೌಂಡೇಶನ್, ಬನಶಂಕರಿ 2ನೇ ಹಂತ ಬೆಂಗಳೂರು ಇಲ್ಲಿ ನಡೆಯಲಿರುವ ಸಂಸ್ಥೆಯ 15ನೇ ವಾರ್ಷಿಕೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಬೆಂಕಿ ಮಣಿ ಸಂತು ಅವರು ಬೈಂದೂರು ತಾಲೂಕಿನ ಅರೆಹೊಳೆ ಗ್ರಾಮದವರು. ಹವ್ಯಾಸಿ ಕಲಾವಿದರಾಗಿರುವ ಇವರು ಸಮಾಜ ಸೇವೆ ನೊಂದವರ ಪರ ನಿಲ್ಲುವ, ಅನಾರೋಗ್ಯ ಪೀಡಿತರಿಗೆ ನೆರವು ನೀಡುತ್ತಾ ಬಂದ ಸಾಮಾಜಿಕ ಕಳಕಳಿ ಉಳ್ಳ ಯುವಕ. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಲ್ಲಿನ ಅನಾರೋಗ್ಯ ಪೀಡಿತರು ವೈದ್ಯಕೀಯ ಚಿಕಿತ್ಸೆಗೆ ಸಮಸ್ಯೆ ಪಡುತ್ತಿದ್ದರೆ ತಕ್ಷಣ ಸ್ಪಂದಿಸುವ ಸಂತು ವಿವಿಧ ವೇಷಗಳನ್ನು ಧರಿಸ ಜನನಿಬಿಡವಾಗಿರುವ ಜಾತ್ರೆ, ಹಬ್ಬ ಇತ್ಯಾದಿ ಕಾರ್ಯಕ್ರಮಗಳಲ್ಲಿ ಧನ ಸಂಗ್ರಹಿಸಿ ಆ ಕುಟುಂಬಗಳಿಗೆ ಹಸ್ತಾಂತರ ಮಾಡುತ್ತಾ ಬಂದಿದ್ದಾರೆ. ಇವರ ಮಾನವೀಯ ಕಳಕಳಿ ಕುಂದಾಪುರ ಭಾಗದಲ್ಲಿ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!