Saturday, October 12, 2024

ಕೂಡ್ಲು ಬಾಡಬೆಟ್ಟು: ಎ.14ರಂದು ಅಷ್ಠಪವಿತ್ರ ನಾಗಮಂಡಲೋತ್ಸವ

ಕುಂದಾಪುರ: ಶ್ರೀ ಶನೀಶ್ವರ ಮತ್ತು ಶ್ರೀ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್ ರಿ., ಶ್ರೀ ಕ್ಷೇತ್ರ ಕೂಡ್ಲು ಬಾಡಬೆಟ್ಟು, ಕನ್ಯಾನ ಇಲ್ಲಿ ಎಪ್ರಿಲ್ 14ರಂದು ಅಷ್ಠ ಪವಿತ್ರ ನಾಗಮಂಡಲೋತ್ಸವ ನಡೆಯಲಿದೆ.

ಎಪ್ರಿಲ್ 10 ಬುಧವಾರ ಸರ್ಪ ಸಂಸ್ಕಾರ ಕ್ರಿಯಾರಂಭ, ಹಾಗೂ ಅಂದಿನಿಂದ ಎಪ್ರಿಲ್ 13 ಶನಿವಾರದ ತನಕ ಶಾಖಲ ಋಕ್ಸಂಹಿತಾ ಯಾಗ ನಡೆಯಲಿದೆ. ಎಪ್ರಿಲ್ 13ರಂದು ಶನಿವಾರ ಸರ್ಪ ಸಂಸ್ಕಾರ, ಪಂಚಗವ್ಯ ಆಯತ ಸಂಖ್ಯಾ ತಿಲಾಹೋಮ, ದಶದಾನ, ಗೋ ದಾನ, ವಟು ಬ್ರಾಹ್ಮಣ ಆರಾಧನೆ, ಕಲಶಾಭಿಷೇಕ, ಮಹಾಪೂಜೆ, ರಾತ್ರಿ ಮಂಡಲ ಮಂಟಪದಲ್ಲಿ ವಾಸ್ತು ಪೂಜಾ, ರಾಕ್ಷೆಘ್ನ ಹೋಮ, ದಿಗ್ಬಲಿ, ಶ್ರೀ ನಾಗದೇವರ ಸನ್ನಿಧಿಯಲ್ಲಿ ಆಶ್ಲೇಷ ಬಲಿ, ಉದ್ಯಾಪನಾ ಹೋಮ, ಶಾಖಲ ಋಕ್ಸಂಹಿತಾ ಯಾಗದ ಪೂರ್ಣಾಹುತಿ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.

ಎಪ್ರಿಲ್ 14ನೇ ರವಿವಾರ ಬೆಳಿಗ್ಗೆ 7ಕ್ಕೆ ಫಲ ಸಮರ್ಪಣೆ, ಗುರು ಗಣಪತಿ ಪೂಜೆ, ಪುಣ್ಯಾಹ ವಾಚನ, ಮಧುಪರ್ಕ ಪೂಜೆ, ಷಣ್ಯಾರಿಕೇಳ ಗಣಯಾಗ, ನವಗ್ರಹ ಹೋಮ, ದುರ್ಗಾ ಹೋಮ, ತಿಲಹೋಮ, ಕೂಷ್ಮಾಂಡ ಹೋಮ, ಪವಮಾನ ಹೋಮ, ಸುಬ್ರಹ್ಮಣ್ಯ ಹೋಮ ತತ್ವಹೋಮ, ಅಷ್ಟೋತ್ತರ ಶತ ಪರಿಕಲಶ ಸಹಿತ ಬ್ರಹ್ಮ ಕಲಶ ಸ್ಥಾಪನೆ, ಸರ್ಪ ಸೂಕ್ತ ಹೋಮ, ಅಧಿವಾಸ ಹೋಮ, ಚತುರ್ವೇದ ಪಾರಾಯಣ, ಗಾಯತ್ರಿ ಜಪ, ಮೂಲಮಂತ್ರ ಜಪ, ನಾಗಯಕ್ಷಿ ದೇವರಿಗೆ ಅಧಿವಾಸ ಹೋಮ, ಕಲಶಾಭೀಷೇಕ, ಮಹಾಪೂಜೆ ನಡೆಯಲಿದೆ.

ಮಧ್ಯಾಹ್ನ 12ರಿಂದ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 7 ಕ್ಕೆ ಹಾಲಿಟ್ಟು ಸೇವೆ, ದೇವರ ದರ್ಶನ, ರಾತ್ರಿ 9 ಗಂಟೆಯಿಂದ ಅಷ್ಠಪವಿತ್ರ ನಾಗಮಂಡಲೋತ್ಸವ ನಡೆಯಲಿದೆ. ಬಳಿಕ ಪ್ರಸಾದ ವಿತರಣೆ, ಮಂತ್ರಾಕ್ಷತೆ ನಡೆಯಲಿದೆ.

ಅಷ್ಠಪವಿತ್ರ ನಾಗಮಂಡಲೋತ್ಸವ ಕಾರ್ಯಕ್ರಮಕ್ಕೆ ಹೊರೆಕಾಣಿಕೆ ಸಲ್ಲಿಸುವ ಭಕ್ತಾದಿಗಳು ದಿನಾಂಕ 10-04-2024ರಿಂದ ಶ್ರೀ ಸನ್ನಿಧಿಗೆ ಸಲ್ಲಿಸಬಹುದಾಗಿದೆ.ಅಷ್ಠಪವಿತ್ರ ನಾಗಮಂಡಲೋತ್ಸವದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ನಾಗಮಂಡಲೋತ್ಸವ ಸಮಿತಿಯ ಮಾರ್ಗದರ್ಶಕರಾದ ಬಿ.ಅಪ್ಪಣ್ಣ ಹೆಗ್ಡೆ, ನಾಗಮಂಡಲೋತ್ಸವ ಸಮಿತಿ ಅಧ್ಯಕ್ಷರಾದ ಮಂಜುನಾಥ ಖಾರ್ವಿ ಚೌಕಿಮನೆ ಕೊಡೇರಿ, ಶ್ರೀ ಕ್ಷೇತ್ರ ಕೂಡ್ಲು ಬಾಡಬೆಟ್ಟು ಇಲ್ಲಿನ ಆಡಳಿತ ಧರ್ಮದರ್ಶಿ ಜಯರಾಮ ಸ್ವಾಮಿ, ಶ್ರೀಮತಿ ಸಣ್ಣಮ್ಮ ಮತ್ತು ಮರ್ಲ ಕೂಡ್ಲು ಬಾಡಬೆಟ್ಟು ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!