Sunday, September 8, 2024

ಮತದಾರರಿಗೂ ಆಲೋಚನೆಗಳಿವೆ

ಚುನಾವಣೆ ನಿರಂತರವಾಗಿ ಬರುತ್ತಲೇ ಇರುತ್ತದೆ. ಕಳೆದ ವರ್ಷ ವಿಧಾನಸಭೆ ಚುನಾವಣೆ, ಈ ವರ್ಷ ಲೋಕಸಭಾ ಚುನಾವಣೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಚುನಾವಣಾ ಪ್ರಕ್ರಿಯೆ ಎನ್ನುವುದು ಸರ್ವೇ ಸಹಜ. ಆದರೆ ಇವತ್ತು ಸ್ವಾರ್ಥ ರಾಜಕೀಯದ ಪ್ರಭಾವ ಮತದಾರರಿಗೂ ಆಲೋಚನೆಗಳಿವೆ, ಕನಸುಗಳಿವೆ ಎನ್ನುವುದನ್ನೇ ಮೂಲೆಗುಂಪು ಮಾಡಿವೆ. ರಾಜಕೀಯ ಪ್ರೇರಿತ ಸಿದ್ಧಾಂತ, ವಿಚಾರ, ಯೋಜನೆಗಳೇ ಅಂತಿಮವಾಗುತ್ತಿವೆ. ಚುನಾವಣೆ ಸ್ಪರ್ಧೆಯಿಂದ ಜನಪ್ರತಿನಿಧಿಯಾಗಿ ತನ್ನ ಅವಧಿ ಮುಗಿಯುವ ತನಕವೂ ಮತದಾರ ಇಲ್ಲಿ ನಾಮಾಕವಸ್ಥೆಗಷ್ಟೇ ಉಳಿದು ಬಿಡುತ್ತಾನೆ. ಮತದಾರರನಿಗೂ ಒಂದು ಧ್ವನಿ ಇದೆ, ಅವನಿಗೂ ಒಂದು ಸ್ಥಾನವಿದೆ ಎನ್ನುವುದನ್ನು ರಾಜಕೀಯ ವ್ಯಕ್ತಿಗಳು ಆ ವ್ಯವಸ್ಥೆ ಮರತೆ ಬಿಡುತ್ತಿರುವುದು ದುರಾದೃಷ್ಟ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವೆದ್ದೇವಾ ಎನ್ನುವ ಪ್ರಶ್ನೆಯನ್ನು ಸ್ವಗತ ರೀತಿಯಲ್ಲಿ ಮತದಾರ ಮಾಡಿಕೊಳ್ಳುವ ಸಂದಿಗ್ಧ ಸ್ಥಿತಿ ಇದೆ. ನನ್ನ ಕ್ಷೇತ್ರ, ನನ್ನ ಊರು ಅಭಿವೃದ್ಧಿಯ ಬಗ್ಗೆ ಮತದಾರರು ಮತನಾಡಬೇಕು, ಅವರ ಧ್ವನಿ ತನ್ನನ್ನು ಪ್ರತಿನಿಧಿಸುವ ವ್ಯಕ್ತಿಗೆ ಕೇಳಬೇಕು, ಆದರೆ ಆ ವ್ಯವಸ್ಥೆ ಈಗ ಇಲ್ಲ, ಸಮಸ್ಯೆಗಳು, ಭರವಸೆಯ ರೂಪದಲ್ಲಿ ಚುನಾವಣಾ ಸಂದರ್ಭದ ಸರಕುಗಳಷ್ಟೆ. ಮತ್ತೆ ಆ ಸಮಸ್ಯೆಗಳೇ ಮತದಾರರನ್ನು ಅಣಕಿಸುತ್ತವೆ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮತದಾರರ ಅನೇಕ ಮೌನ ಪ್ರಶ್ನೆಗಳಿವೆ. ಕುಡಿಯುವ ನೀರು ಇಂದಿಗೂ ಪರಿಹಾರ ಕಂಡುಕೊಳ್ಳಲಾಗಲಿಲ್ಲ. ಹೆದ್ದಾರಿ ಇನ್ನೂ ಕೂಡಾ ಸಮರ್ಪಕವಾಗಿಲ್ಲ, ಹೊಸ ಹೆದ್ದಾರಿಗಳ ನಿರ್ಮಾಣ ಭರವಸೆಯಲ್ಲಿಯೇ ಉಳಿದಿದೆ. ಗ್ರಾಮೀಣಾಭಿವೃದ್ಧಿ ಎನ್ನುವ ನಿರೀಕ್ಷಿತ ಗುರಿ ತಲುಪಲು ಆಗಿಲ್ಲ. ಶಿಕ್ಷಣ ಕ್ಷೇತ್ರ ಇವತ್ತಿನ ಇತರ ಕ್ಷೇತ್ರಗಳಿಗೆ ಸರಿಸಮಾನಾಗಿ ಬೆಳೆದಿಲ್ಲ… ಹೀಗೆ ಒಂದೆಡೆ ಖಾಸಗೀಕರಣ ಸರಕಾರಿ ವ್ಯವಸ್ಥೆಗಳನ್ನು ಕಬಳಿಸುತ್ತಿದೆ. ಕಾರ್ಪೋರೇಟ್ ವಲಯ ವಿಸ್ತರಿಸಿಕೊಳ್ಳುತ್ತಿದೆ, ನಿರುದ್ಯೋಗ ಸಮಸ್ಯೆಗೆ ಪರಿಹಾರವೇ ಇಲ್ಲದಂತಾಗಿದೆ. ಹೀಗೆ ಸ್ವಾತಂತ್ರ್ಯ ಭಾರತ ಅಭಿವೃದ್ಧಿಯ ಪಥದಲ್ಲಿ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ದಾಪುಗಾಲಿಡುತ್ತಿದ್ದರೂ ಕೂಡಾ ಹಳ್ಳಿಹಳ್ಳಿಯ ಮೂಲಭೂತ ಸಮಸ್ಯೆಗಳು ಇನ್ನೂ ಕೂಡಾ ಜೀವಂತವಾಗಿದೆ. ಪಟ್ಟಣ ಪ್ರದೇಶದ ಬೆಳವಣಿಗೆಯ ವೇಗಕ್ಕೆ ತಕ್ಕಂತೆ ಗ್ರಾಮೀಣ ಪ್ರದೇಶಗಳ ಅಭೀವೃದ್ಧಿ ಸಾಧ್ಯವಾಗಿಲ್ಲ. ಇಂಥಹ ವಿಚಾರಗಳ ಮುನ್ನೆಲೆಗೆ ಬರುವುದು ಇಂಥಹ ಚುನಾವಣೆಯ ಪರ್ವಕಾಲದಲ್ಲಿ. ಯೋಚನೆ, ಆಲೋಚನೆಗಳಿದ್ದರೂ ಕೂಡಾ ಅವುಗಳಿಗೆ ಜೀವ ಮಾತ್ರ ಬರುವುದಿಲ್ಲ. ಇದು ವಾಸ್ತವ!

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!