spot_img
Sunday, March 15, 2026
spot_img

ಶಾನ್ಕಟ್ಟು ಏಕಪವಿತ್ರ ನಾಗ ಮಂಡಲೋತ್ಸವದ ಚಪ್ಪರ ಮುಹೂರ್ತ

 

ಕುಂದಾಪುರ ತಾಲೂಕು ಅಂಪಾರು ಗ್ರಾಮದ ಶಾನ್ಕಟ್ಟು ಕೆಳಗಿನಮನೆ ಕುಟುಂಬಸ್ಥರ ಶ್ರೀ ಆದಿ ನಾಗ ದೇವರ ಸನ್ನಿಧಿಯಲ್ಲಿ ಹರಕೆ ಸೇವೆಯಾಗಿ ದಿನಾಂಕ 23-04-2024ರಂದು ಏಕಪವಿತ್ರ ನಾಗ ಮಂಡಲೋತ್ಸವ ನಡೆಯಲಿದ್ದು ಅದರ ಪ್ರಯಕ್ತ ಚಪ್ಪರ ಮುಹೂರ್ತ ಕಾರ್ಯಕ್ರಮ ಮಾ.27ರಂದು ಬುಧವಾರ ನಡೆಯಿತು.

ಚಪ್ಪರ ಮುಹೂರ್ತಕ್ಕೆ ಚಾಲನೆ ನೀಡಿ ಮಾತನಾಡಿದ ಧಾರ್ಮಿಕ ಮುಂದಾಳು ಅಪ್ಪಣ್ಣ ಹೆಗ್ಡೆಯವರು ಪರಶುರಾಮ ಸೃಷ್ಟಿಯಲ್ಲಿ ನಾಗಾರಾಧನಗೆ ವಿಶೇಷ ಮಹತ್ವವಿದೆ. ಅವಿಭಜಿತ ದ.ಕ ಜಿಲ್ಲೆಯವರನ್ನು ದೇಶದ ಬೇರೆ ಭಾಗದ ಜನ ಬುದ್ಧಿವಂತರು, ಭಗವದ್ಭಕ್ತರು ಎಂದು ಗುರುತಿಸುತ್ತಾರೆ. ಇದನ್ನು ನಾವು ಉಳಿಸಿ ಮುಂದುವರಿಸಿಕೊಂಡು ಹೋಗುವ ಅನಿವಾರ್ಯತೆ ಇದೆ. ನಾಗಾರಾಧನೆಯ ಮೂಲಕ ಸಂತಾನ, ಸಂಪತ್ತು, ಆರೋಗ್ಯ ವೃದ್ಧಿಸುತ್ತದೆ. ನಾಗಮಂಡಲ ಸೇವೆಯಲ್ಲಿ ನಾಗದೇವರ ಮಹಾತ್ಮೆಯನ್ನು ತಿಳಿಯಪಡಿಸುತ್ತಾರೆ. ನಾಗನ ವಿಶೇಷ ಸೇವೆಯೆಂದರೆ ನಾಗಮಂಡಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸರ್ಪಸಂಸ್ಕಾರ, ಶ್ರೀ ನಾಗದೇವರ ದರ್ಶನ, ಧಾರ್ಮಿಕ ವಿಧಿವಿಧಾನಗಳು ಜರುಗಿದವು. ಪ್ರಧಾನ ತಂತ್ರಿಗಳಾದ ಕೆ.ವೇ,.ಮೂ.ಶ್ರೀಪತಿ ಭಟ್ಟ ಕಂಬಿಕಲ್ಲು, ನಾಗಪಾತ್ರಿಗಳಾದ ಎ.ರವಿರಾಜ ಭಟ್ಟರು ಅಂಪಾರು, ಸರ್ವೋತ್ತಮ ವೈದ್ಯರು, ಕುಲಪುರೋಹಿತರಾದ ನಾಗರಾಜ ಅಡಿಗರು ಶಾನ್ಕಟ್ಟು, ನಾಗಬನದ ಸ್ಥಳದ ಯಜಮಾನರಾದ ಶ್ರೀಪಾದ ಕನ್ನಂತರು ಶಾನ್ಕಟ್ಟು, ಶಾನ್ಕಟ್ಟು ಕೆಳಗಿನಮನೆ ಕುಟುಂಬಸ್ಥರು, ಊರಿನ ಸಮಸ್ತ ಗ್ರಾಮಸ್ಥರು, ಪರವೂರ ಮಹನೀಯರು ಉಪಸ್ಥಿತರಿದ್ದರು.

ಏ.23ರಂದು ಮಂಗಳವಾರ ಏಕಪವಿತ್ರ ನಾಗಮಂಡಲೋತ್ಸವ ನಡೆಯಲಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!