spot_img
Monday, March 23, 2026
spot_img

ಲೋಕಸಭಾ ಚುನಾವಣೆ : ನಾವು ಮಾಡಿರುವ ಸಾಧನೆಗಳೇ ನಮಗೆ ಸಾಕು, ದೂಷಣೆಗಳು ಅಗತ್ಯವಿಲ್ಲ : ಹೆಗ್ಡೆ ತಿರುಗೇಟು

ಜನಪ್ರತಿನಿಧಿ (ಕುಂದಾಪುರ) : ಜನರನ್ನು ಸಂಪರ್ಕಿಸುವುದು ಜನಪ್ರತಿನಿಧಿಯ ಕೆಲಸ. ವಿಧಾನಸಭೆಯಲ್ಲೋ, ಲೋಕಸಭೆಯಲ್ಲೋ ಹೋಗಿ ಕೂತು ಬರುವುದಷ್ಟೇ ಅಲ್ಲ. ಅಧಿಕಾರದಲ್ಲಿದ್ದಾಗಲೂ, ಅಧಿಕಾರದಲ್ಲಿ ಇಲ್ಲದೇ ಇರುವಾಗಲೂ ನಿರಂತರ ಜನ ಸಂಪರ್ಕ ಹೊಂದಬೇಕಾಗಿರುವುದು ಒಬ್ಬ ಜನಪ್ರತಿನಿಧಿ ಮಾಡಬೇಕಾಗಿರುವ ಕೆಲಸ. ಭಾರತೀಯ ಜನತಾ ಪಾರ್ಟಿಯವರಿಗೆ ಮತ ಕೇಳುವುದಕ್ಕೆ ಯಾವ ಸಾಧನೆಯೂ ಇಲ್ಲ. ಆ ಕಾರಣಕ್ಕೆ ನಾನು ಹೇಳದೇ ಇರುವ ವಿಷಯವನ್ನು ಹೇಳಿದ್ದೇನೆ ಎಂದು ಸುಳ್ಳು ಹಬ್ಬಿಸಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೆ. ಜಯಪ್ರಕಾಶ್‌ ಹೆಗ್ಡೆ ಹೇಳಿದ್ದಾರೆ.

ಅವರು ಇಲ್ಲಿ ನಡೆಡ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಇಷ್ಟು ವರ್ಷದ ರಾಜಕೀಯ ಜೀವನದಲ್ಲಿ ನಾನು ಯಾರನ್ನೂ ವೈಯಕ್ತಿಕವಾಗಿ ದೂಷಣೆ ಮಾಡಿದ ಉದಾಹರಣೆಯೇ ಇಲ್ಲ. ನಮಗೆ ನಾವು ಮಾಡಿರುವ ಸಾಧನೆಗಳೇ ಇರುವಾಗ ದೂಷಣೆಗಳು ಯಾಕೆ ಬೇಕು ? ಸುಳ್ಳು ಸೃಷ್ಟಿಸಿ ವೈಯಕ್ತಿಕ ದೂಷಣೆ, ಅಪಪ್ರಚಾರ ಅವರು(ಬಿಜೆಪಿ) ಮಾಡಲಿ. ನಾವು ಪ್ರಾಮಾಣಿಕವಾಗಿ ಜನರನ್ನು ನಮ್ಮ ಕೆಲಸಗಳೊಂದಿಗೆ ತಲುಪಿದ್ದೇವೆ. ಚುನಾವಣಾ ಪೂರ್ವದಲ್ಲಿ ರಾಜಕೀಯ ಕೆಸರೆರಚಾಟ, ದೂಷಣೆಗಳು ನಮಗೆ ಬೇಡವೇ ಬೇಡ. ನಮ್ಮೊಂದಿಗೆ ನಾವು ಮಾಡಿದ ಸಾಧನೆಗಳಿವೆ. ಜನರನ್ನು ತಲುಪುವುದಕ್ಕೆ ನಮ್ಮೊಂದಿಗಿರುವ ಸಾಧನೆಗಳು, ಅಭಿವೃದ್ಧಿ ಕೆಲಸಗಳೇ ಸಾಕು. ಜನರು ನಮ್ಮ ಕೆಲಸಗಳನ್ನು ನೆನಪಿಟ್ಟುಕೊಂಡಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ

ನಮ್ಮ ಗ್ಯಾರಂಟಿ ಯೋಜನೆಗಳನ್ನು ಬಡವರಿಗೆ ತಲುಪಿಸಿದ್ದೇ ಸರ್ಕಾರದ ತಪ್ಪಾದರೇ, ದೊಡ್ಡ ದೊಡ್ಡ ಕಂಪೆನಿಗಳ, ಉದ್ಯಮಗಳ ಸಾಲ ಮನ್ನ ಮಾಡಿದ್ದು, ತೆರಿಗೆ ವಿನಾಯಿತಿ ಮಾಡಿದ್ದು ಸರಿಯೇ ? ಎಂದು ಅವರು ಪ್ರಶ್ನೆ ಮಾಡಿದ್ದಲ್ಲದೇ, ಕಷ್ಟದಲ್ಲಿರುವವರಿಗೆ ಸ್ಪಂದಿಸುವಂತದ್ದು ಸರ್ಕಾರದ ಕರ್ತವ್ಯ. ನಾವು ಜನರಿಗೆ ಕೊಟ್ಟಿರುವ ಯೋಜನೆಗಳು, ಕೆಲಸಗಳು ಜನರಿಗೆ ತಿಳಿದಿದೆ. ನಾವು ಈಗ ಅವರಿಗೆ ಮತ್ತೆ ನೆನಪಿಸುವಂತಹ ಕೆಲಸ ಮಾಡಬೇಕಿದೆ. ನಮ್ಮ ಸರ್ಕಾರ ಕೊಟ್ಟಿರುವ ಯೋಜನೆಗಳು, ನಾವು ಮಾಡಿರುವ ಕೆಲಸಗಳು, ಸಾಧನೆಗಳು ಮಾತಾಗಿದೆ, ಮಾತು ಮತಗಳಾದಿ ಪರಿವರ್ತನೆಯಾಗುವಲ್ಲಿ ನಾವೆಲ್ಲರೂ ಶ್ರಮಿಸಬೇಕಿರುವ ಅಗತ್ಯವಿದೆ ಎಂದವರು ಹೇಳಿದ್ದಾರೆ.

ಅಭಿವೃದ್ಧಿಯೇ ಗೆಲ್ಲುತ್ತದೆ, ರಾಮ ಮಂದಿರ ಚುನಾವಣಾ ವಿಷಯವಲ್ಲ : ಹೆಗ್ಡೆ

ಸಭೆಯ ಬಳಿಕ ಜನಪ್ರತಿನಿಧಿ ಪತ್ರಿಕೆಯ ವರದಿಗಾರರು ಕೇಳಿದ, ರಾಮ ಮಂದಿರದ ಉನ್ಮಾದದ ಮುಂದೆ ನಿಮ್ಮ ಅಭಿವೃದ್ಧಿ ಕೆಲಸಗಳು ಕಾರ್ಯಕ್ಕೆ ಬರುತ್ತವೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಭಿವೃದ್ಧಿ ಗೆಲ್ಲುತ್ತದೆ. ರಾಮ ಮಂದಿರಕ್ಕೆ ನಾನೂ ಡೊನೇಶನ್‌ ಕೊಟ್ಟಿದ್ದೇನೆ. ಇಲ್ಲಿಯೂ ಅನೇಕ ಮಂದಿರಗಳಿಗೆ ದೇಣಿಗೆ ಕೊಟ್ಟಿದ್ದೇನೆ, ಜಿರ್ಣೋದ್ಧಾರಕ್ಕೆ ನೇರ ಕಾರಣೀಕರ್ತನೂ ಆಗಿದ್ದೇನೆ. ರಾಮ ಮಂದಿರ ಚುನಾವಣೆಯ ವಿಷಯವಲ್ಲ ಎನ್ನುವುದು ನನ್ನ ಭಾವನೆ ಎಂದು ಹೇಳಿದ್ದಲ್ಲದೇ, ನಮ್ಮ ಪಕ್ಷದೊಳಗೆ ಭಿನ್ನಮತವಿದೆ ಎನ್ನುವುದು ಸತ್ಯಕ್ಕೆ ದೂರವಾದದ್ದು. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ. ಗೆಲ್ಲುವ ಸಂಪೂರ್ಣ ವಿಶ್ವಾಸವಿದೆ. ಅದಕ್ಕಾಗಿಯೇ ಚುನಾವಣೆಯ ಸ್ಪರ್ಧೆಗೆ ಇಳಿದಿದ್ದು ಎಂದು ಅವರು ಹೇಳಿದರು.

ಇನ್ನು, ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್‌ ಕುಮಾರ್‌  ಕೊಡವೂರು, ಜಿಲ್ಲೆಯ ಸಂಸದ ಅಭ್ಯರ್ಥಿಯನ್ನಾಗಿ ಕೆ. ಜಯಪ್ರಕಾಶ ಹೆಗ್ಡೆಯವರನ್ನು ಆಯ್ಕೆ ಮಾಡಿರುವುದು ನಮ್ಮ ಹೈಕಮಾಂಡ್ ಗ್ಯಾರಂಟಿ ಯೋಜನೆಗಳೊಂದಿಗೆ ಮತ್ತೊಂದು ಭಾಗ್ಯ ಕೊಟ್ಟ ಹಾಗಾಗಿದೆ. ಹೆಗ್ಡೆಯವರ ರಾಜಕೀಯ ವರ್ಚಸ್ಸು ಜಿಲ್ಲೆಯ ಕಾಂಗ್ರೆಸ್‌ಗೆ ಮರಳಿ ಜೀವಕಳೆ ಮೂಡಿಸುವ ಗೆಲುವನ್ನು ತಂದುಕೊಡಲಿದೆ ಎಂದು ಅಭಿಪ್ರಾಯಪಟ್ಟರು.

ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಎಂ.ಎ. ಗಫೂರ್‌ ಮಾತನಾಡಿ, ಹೆಗ್ಡೆಯವರು ಉಡುಪಿ ಜಿಲ್ಲೆಯ ಸೃಷ್ಟಿಕರ್ತರು. ಜನರ ಜೊತೆಗೆ ನಿರಂತರ ಸಂಪರ್ಕ ಇಟ್ಟುಕೊಂಡಿರುವ ಜನನಾಯಕ ನಮ್ಮ ಸಂಸದ ಅಭ್ಯರ್ಥಿಯಾಗಿರುವುದು ಹೆಮ್ಮೆ. ನಾವೆಲ್ಲರೂ ಜಿಲ್ಲೆಯ ಸಂಪೂರ್ಣ ಅಭಿವೃದ್ಧಿಗಾಗಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿ ಸಂಸತ್ತಿಗೆ ಕಳುಹಿಸುವಲ್ಲಿ ಅನವರತ ಶ್ರಮ ವಹಿಸಬೇಕಿದೆ ಎಂದರು.

ಗ್ಯಾರಂಟಿ ಯೋಜನೆಗಳು ಹಳ್ಳಿಹಳ್ಳಿಯ ಮನೆಮನೆಗೆ ತಲುಪಿವೆ : ದಿನೇಶ್‌ ಹೆಗ್ಡೆ

ಕಾಂಗ್ರೆಸ್‌ ಮುಖಂಡ ದಿನೇಶ್‌ ಹೆಗ್ಡೆ ಮೊಳಹಳ್ಳಿ ಮಾತನಾಡಿ, ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಲ್ಲಿ ಭರವಸೆ ಇರಲಿಲ್ಲ. ಆದರೇ, ನಮ್ಮ ಸರ್ಕಾರ ಈಗ ನುಡಿದಂತೆ ನಡೆದಿದೆ. ಗ್ಯಾರಂಟಿ ಯೋಜನೆಗಳು ಹಳ್ಳಿಹಳ್ಳಿಯ ಮನೆಮನೆಗೆ ತಲುಪಿವೆ. ನಾನು ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಯೋಜನೆಗಳು ಅನುಷ್ಠಾನವಾಗದೇ ಇದ್ದರೇ, ಮುಂದಿನ ಚುನಾವಣೆತಯಲ್ಲಿ ಮತ ಕೇಳುವುದಕ್ಕೆ ಬರುವುದಿಲ್ಲ ಎಂದು ಇಲ್ಲಿನ ಜನರಿಗೆ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತು ಕೊಟ್ಟಿದ್ದೆ. ನಮ್ಮ ಯೋಜನೆಗಳು ಜನರನ್ನು ತಲುಪಿವೆ. ಮತ ಕೇಳುವುದಕ್ಕೆ ಯಾವ ಹಿಂಜರಿಕೆ ಬೇಡ. ನಮಗೆ ಬೇರೆ ಯಾವ ವಿಷಯಗಳು ಅಗತ್ಯವೇ ಇಲ್ಲ. ಮೀನುಗಾರಿಕಾ ಸಚಿವರಾಗಿದ್ದಾಗ, ಸಂಸದರಾಗಿದ್ದಾಗ ಜಯಪ್ರಕಾಶ್‌ ಹೆಗ್ಡೆ ಅವರು ಜಿಲ್ಲೆಗೆ ನೀಡಿರುವ ಕೊಡುಗೆ ಅಪಾರವಾದದ್ದು ಎಂದು ಅವರು ಹೇಳಿದರು.

ಸಮಾರಂಭದಲ್ಲಿ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಕಿಶನ್‌ ಹೆಗ್ಡೆ ಕೊಳ್ಕೆಬೈಲು, ಮುಖಂಡರುಗಳಾದ ಮಲ್ಯಾಡಿ ಶಿವರಾಮ ಶೆಟ್ಟಿ, ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಎಸ್‌ ರಾಜು ಪೂಜಾರಿ, ಹಿರಿಯಣ್ಣ ಚಾತ್ರಬೆಟ್ಟು, ಸದಾನಂದ ಶೆಟ್ಟಿ ಕೆದೂರು, ಕಾಂಗ್ರೆಸ್‌ ಜಿಲ್ಲಾ ವಕ್ತಾರ ವಿಕಾಸ್‌ ಹೆಗ್ಡೆ, ಕುಂದಾಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹರಿಪ್ರಸಾದ್‌ ಶೆಟ್ಟಿ ಕಾನ್ಮಕ್ಕಿ ಸೇರಿ ಮೊದಲಾದವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!