Sunday, September 8, 2024

ಲೋಕಸಭಾ ಚುನಾವಣೆ : ಶಿವಸೇನೆ(ಯುಬಿಟಿ) ತನ್ನ 16 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ | ಅನಂತ್ ಗೀತೆ, ಅರವಿಂದ್ ಸಾವಂತ್ ಮತ್ತೆ ಟಿಕೇಟ್‌

ಜನಪ್ರತಿನಿಧಿ (ಮಹಾರಾಷ್ಟ್ರ) : ಲೋಕಸಭಾ ಕಾವು ಜೋರಾಗಿದೆ. ಶಿವಸೇನೆ(ಯುಬಿಟಿ) ತನ್ನ 16 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು(ಬುಧವಾರ) ಬಿಡುಗಡೆ ಮಾಡಿದ್ದು, ಮಾಜಿ ಕೇಂದ್ರ ಸಚಿವ ಅನಂತ್ ಗೀತೆ ಹಾಗೂ ಅರವಿಂದ್ ಸಾವಂತ್ ಅವರನ್ನು ಕ್ರಮವಾಗಿ ರಾಯಗಡ ಮತ್ತು ದಕ್ಷಿಣ ಮುಂಬೈ ಕ್ಷೇತ್ರಗಳಿಂದ ಕಣಕ್ಕಿಳಿಸಿದೆ.

2022 ರಲ್ಲಿ ಶಿವಸೇನೆ ವಿಭಜನೆಯಾದ ನಂತರ ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರೊಂದಿಗೆ ಉಳಿದುಕೊಂಡಿದ್ದ ಎಲ್ಲಾ ಐದು ಹಾಲಿ ಸಂಸದರಿಗೆ ಪಕ್ಷ ಮತ್ತೆ ಟಿಕೆಟ್ ಘೋಷಣೆ ಮಾಡಿದೆ ಎನ್ನುವುದು ಇಲ್ಲಿ ಉಲ್ಲೇಖಾರ್ಹ.

ಹಾಲಿ ಸಂಸದರಾದ ಅರವಿಂದ್ ಸಾವಂತ್(ದಕ್ಷಿಣ ಮುಂಬೈ), ರಾಜನ್ ವಿಚಾರೆ(ಥಾಣೆ), ವಿನಾಯಕ್ ರಾವತ್(ರತ್ನಗಿರಿ-ಸಿಂಧುದುರ್ಗ), ಓಂರಾಜೆ ನಿಂಬಾಳ್ಕರ್(ಧಾರಶಿವ್) ಹಾಗೂ ಸಂಜಯ್ ಜಾಧವ್(ಪರ್ಭಾನಿ) ಅವರುಗಳಿಗೆ ಮತ್ತೆ ಟಿಕೆಟ್ ಘೋಷಣೆ ಮಾಡಿದೆ.

ಮಹಾರಾಷ್ಟ್ರದಲ್ಲಿ ಅಧಿಕಾರ ಹಂಚಿಕೆ ಒಪ್ಪಂದಕ್ಕೆ ಸಂಬಂಧಿಸಿದಂತೆ ಅವಿಭಜಿತ ಶಿವಸೇನೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ತೊರೆದ ನಂತರ ಸಾವಂತ್ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ವಿಚಾರೆ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ತವರು ನೆಲವಾದ ಥಾಣೆಯನ್ನು ಪ್ರತಿನಿಧಿಸುತ್ತಿದ್ದಾರೆ. ಶಿಂಧೆ ಬಂಡಾಯದಿಂದ 1966 ರಲ್ಲಿ ಬಾಳ್ ಠಾಕ್ರೆ ಸ್ಥಾಪಿಸಿದ ಶಿವಸೇನೆ ಇಬ್ಭಾಗವಾಯಿತು.

ಶಿವಸೇನೆ(ಯುಬಿಟಿ), ಛತ್ರಪತಿ ಸಂಭಾಜಿನಗರದಿಂದ ಪಕ್ಷದ ಹಿರಿಯ ನಾಯಕ ಚಂದ್ರಕಾಂತ್ ಖೈರೆ ಅವರನ್ನು ಕಣಕ್ಕಿಳಿಸಿದೆ. ಖೈರೆ ಅವರು 2019 ರಲ್ಲಿ ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್(ಎಐಎಂಐಎಂ) ಅಭ್ಯರ್ಥಿ ಇಮ್ತಿಯಾಜ್ ಜಲೀಲ್ ವಿರುದ್ಧ ಸೋತಿದ್ದರು.

ಮುಂಬೈ ಈಶಾನ್ಯದಿಂದ, ಮಾಜಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ(ಎನ್‌ಸಿಪಿ) ಶಾಸಕ ಮತ್ತು ನಂತರ ಶಿವಸೇನೆಗೆ ಸೇರ್ಪಡೆಗೊಂಡ ಸಂಸದ ಸಂಜಯ್ ಪಾಟೀಲ್ ಅವರನ್ನು ಕಣಕ್ಕಿಳಿಸಿದೆ.

 

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!